Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಅದೇ ರೀತಿ ಗುಟ್ಕಾ ಸೇವನೆ ಕೂಡ ಅತೀ ಕೆಟ್ಟ ಚಟವಾಗಿದೆ. ಇದು ಕ್ಯಾನ್ಸರ್ ತರಿಸಿ, ಜೀವನವನ್ನೇ ಕೊನೆಗೊಳಿಸುತ್ತದೆ. ಈ ಬಗ್ಗೆ ವೈದ್ಯರೇ ಮಾತನಾಡಿದ್ದಾರೆ ನೋಡಿ..
ಡಾ.ಶಿವಕುಮಾರ್ ಉಪ್ಪಳ ಕ್ಯಾನ್ಸರ್ ಬಗ್ಗೆ ವಿವರಿಸಿದ್ದು, ಇತ್ತೀಚೆಗೆ ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್ ಬರುತ್ತಿದೆ. ಮೊದಲೆಲ್ಲ 50,60,70 ದಾಟಿದವರಲ್ಲಿ ಕ್ಯಾನ್ಸರ್ ಇರುವ ಬಗ್ಗೆ ಕೇಳಿದ್ದೆವು. ಆದರೆ ಈಗ 20 ವರ್ಷದವರೂ ಕ್ಯಾನ್ಸರ್ ಎಂದು ಬರುತ್ತಾರೆ. ಇದಕ್ಕೆಲ್ಲ ಮುಖ್ಯವಾದ ಕಾರಣ ವಾಯು ಮಾಲಿನ್ಯ. ಜೊತೆಗೆ ಧೂಮಪಾನ- ಗುಟ್ಕಾ ಸೇವನೆ ಮಾಡುವವರಲ್ಲಿಯೂ ಕ್ಯಾನ್ಸರ್ ಕಂಡು ಬರುತ್ತಿದೆ.
ಮತ್ತು ಧೂಮಪಾನ ಮಾಡುವುದರಿಂದ ಹೇಗೆ ಕ್ಯಾನ್ಸರ್ ಬರುತ್ತದೆಯೋ, ಅದೇ ರೀತಿ ಹೆಚ್ಚಿನ ಮಾಲಿನ್ಯಕರ ಗಾಳಿಯ ಸೇವನೆಯಿಂದಲೂ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಮಾಲಿನ್ಯಕರವಾದ ಗಾಳಿ ನಮ್ಮ ದೇಹ ಸೇರದಂತೆ ನಾವು ತಡೆಯಬೇಕಾಗುತ್ತದೆ. ಅದರಲ್ಲೂ ಸಿಟಿಯಲ್ಲಿ ಹೆಚ್ಚು ಲಂಗ್ ಕ್ಯಾನ್ಸರ್ ಕೇಸ್ ಬರುತ್ತಿದೆ ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನನ ಮಾಹಿತಿಗಾಗಿ ವೀಡಿಯೋ ನೋಡಿ..