Health Tips: ಇಂದಿನ ಕಾಲದಲ್ಲಿ ಸ್ಟೈಲ್ ಅನ್ನೋದು ಹಲವರಿಗೆ ಎಲ್ಲಕ್ಕಿಂತ ಮುಖ್ಯವಾಗಿದ್ದು. ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಿದರೆ ಮಾತ್ರ ಬೆಲೆ. ಇರುವ ಅಂದ ಹಳಸಿದರೂ ಪರ್ವಾಗಿಲ್ಲ. ಆರ್ಟಿಫಿಶಿಯಲ್ ವಸ್ತುಗಳನ್ನು ಬಳಸಿ, ಚೆಂದಗಾಣಿಸಬೇಕು ಅನ್ನೋದು ಹಲವರ ವಾದ. ಅದೇ ರೀತಿ ಫ್ಲ್ಯಾಟ್ ಚಪ್ಪಲಿ ಧರಿಸಿದವರಿಗೆ ನಾನಾ ರೀತಿಯ ಹೆಸರು. ಹೈ ಹೀಲ್ಸ್ ಹಾಕಿದವರು, ಸುಂದರಿಯರು ಅನ್ನೋ ಕಾಲ ಇದು. ಆದರೆ ಹೈ ಹೀಲ್ಸ್ ಚಪ್ಪಲಿಗಳನ್ನು ಧರಿಸಿದರೆ, ಎಂಥ ಆರೋಗ್ಯ ಸಮಸ್ಯೆಯಾಗತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ..
ಇಂದಿನ ಕಾಲದ ಹೆಚ್ಚಿನ ಹೆಣ್ಣು ಮಕ್ಕಳಿಗೆ ಹಿಮ್ಮಡಿ ನೋವಿದೆ. ಇದಕ್ಕೆ ನಮ್ಮ ಜೀವನ ಶೈಲಿಯೂ ಕಾರಣ ಅಂತಾರೆ ವೈದ್ಯರು. ಹೆಣ್ಣು ಮಕ್ಕಳು ಹೀಲ್ಸ್ ಧರಿಸುವುದನ್ನು ಕಡಿಮೆ ಮಾಡಬೇಕು. ಫ್ಲ್ಯಾಟ್ ಚಪ್ಪಲಿಗಳನ್ನು ಧರಿಸಬೇಕು. ಇನ್ನು ಕೆಲವರಿಗೆ ಕಾಲಿನ ಕೆಲ ಭಾಗದಲ್ಲಿ ಊತ ಬರುತ್ತದೆ. ಇದಕ್ಕೆ ಕಾರಣ ಅಂದ್ರೆ ವೇರಿಕೋಸ್ ವೇನ್ಸ್. ರಕ್ತ ನಾಳದಲ್ಲಿ ಸರಿಯಾಗಿ ರಕ್ತ ಸಂಚಾಾರವಾಗದಿದ್ದಲ್ಲಿ, ವೆರಿಕೋಸ್ ವೇನ್ಸ್ ಉಂಟಾಗುತ್ತದೆ.
ಇದಕ್ಕಾಗಿ ನಾವು ಕೂತಲ್ಲೇ ಹೆಚ್ಚು ಹೊತ್ತು ಕೂರಬಾರದು. ನಿಂತಲ್ಲೇ ಹೆಚ್ಚು ಹೊತ್ತು ನಿಲ್ಲಬಾರದು. ಹೀಗೆ ಮಾಡುವುದರಿಂದಲೇ ಹೃದಯ ನಾಳದಿಂದ ದೇಹಕ್ಕೆ ಪಸರಿಸಿದ ರಕ್ತ, ಮತ್ತೆ ಹೃದಯನಾಳಕ್ಕೆ ಸರಿಯಾಗಿ ತಲುಪಲಾಗದೇ, ವೇರಿಕೋಸ್ ವೇನ್ಸ್ ಆಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..