ಕಾಲಿಗೆ ಆಣಿಯಾದಾಗ ಎಷ್ಟು ಕಷ್ಟವಾಗುತ್ತದೆ ಎಂದು ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವರಿಗೆ ಅದಕ್ಕೇನು ಮನೆಮದ್ದು ಮಾಡಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಆಣಿಯಾಗಲು ಕಾರಣವೇನು..? ಮತ್ತು ಅದನ್ನು ಹೇಗೆ ಹೋಗಲಾಡಿಸಬೇಕು ಅಂತಾ ಹೇಳಲಿದ್ದೇವೆ..
ಪ್ರತಿದಿನ ಒಂದೇ ಒಂದು ನೆಲ್ಲಿಕಾಯಿ ತಿಂದ್ರೆ ಆರೋಗ್ಯಕ್ಕಾಗಲಿದೆ ಹಲವು ಲಾಭ..
ಹೈ ಹೀಲ್ಸ್ ಸ್ಯಾಂಡಲ್ಸ್, ಟೈಟ್ ಆಗಿರುವ ಚಪ್ಪಲಿ ಹಾಕಿಕೊಳ್ಳುವುದರಿಂದ, ಖಾಲಿ ಕಾಲಿನಲ್ಲಿ ಹೆಚ್ಚು ನಡೆದಾಡುವುದರಿಂದ ಹೀಗೆ ಹಲವು ಕಾರಣಗಳಿಂದ ಕಾಲಿಗೆ ಆಣಿಯಾಗುತ್ತದೆ. ಕೆಲವರಿಗೆ ಬೂಟು ಧರಿಸುವುದರಿಂದಲೂ ಕಾಲಿಗೆ ಆಣಿಯಾಗುತ್ತದೆ. ಇದಕ್ಕೆ ಯಾವುದೇ ಪರಿಹಾರ ಮಾಡುವ ಮೊದಲು ನಿಮ್ಮ ಪಾದವನ್ನು 15 ನಿಮಿಷ ಉಗುರು ಬೆಚ್ಚಗಿನ ನೀರಿಗೆ ಉಪ್ಪು, ಕೊಂಚ ನಿಂಬೆ ರಸ ಹಾಕಿ. ಅದರಲ್ಲಿ ನಿಮ್ಮ ಪಾದವನ್ನು ಅದ್‌ದಿಡಿ. ಇದರಿಂದ ಪಾದ ಕ್ಲೀನ್ ಆಗುತ್ತದೆ. ವಾರಕ್ಕೆ ಎರಡು ಬಾರಿಯಾದ್ರೂ ನೀವು ಹೀಗೆ ಮಾಡಿದ್ದಲ್ಲಿ, ಆಣಿ ನೋವು ಕಡಿಮೆಯಾಗುತ್ತದೆ.
ಕಾಲಿಗೆ ಬಳಸೋಕ್ಕೆ ಅಂತಾನೆ ಕಲ್ಲುಗಳು ಸಿಗುತ್ತದೆ. ಅಂಥ ಕಲ್ಲುಗಳನ್ನು ತಂದು ಪ್ರತಿದಿನ ಪಾದವನ್ನು ಸ್ವಚ್ಛವಾಗಿ ತೊಳೆದು, ಆಣಿಯಾದ ಜಾಗದಲ್ಲಿ ಕಲ್ಲಿನಿಂದ ಚೆನ್ನಾಗಿ ಮಸಾಜ್ ಮಾಡಿ. ಪ್ರತಿದಿನ ರಾತ್ರಿ ಮಲಗುವಾಗ ಹರಳೆಣ್ಣೆಯನ್ನ ಆಣಿಯಾದ ಜಾಗಕ್ಕೆ ಹಚ್ಚಬೇಕು. ಇದರಿಂದಲೂ ಆಣಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಕರ್ಬೂಜ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?
ಅಥವಾ ಪ್ರತಿದಿನ ರಾತ್ರಿ ಮಲಗುವಾಗ ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನ ಅರ್ಧ ತುಂಡರಿಸಿ, ಅದರಿಂದ ಆಣಿಯಾದ ಜಾಗಕ್ಕೆ ಮಸಾಜ್ ಮಾಡಿ. ನಂತರ ಅದೇ ಸ್ಥಳದಲ್ಲಿ ಅದೇ ಬೆಳ್ಳುಳ್ಳಿಯನ್ನ ಇಟ್ಟು ಬಟ್ಟೆಯಿಂದ ಸುತ್ತಿಕೊಂಡು ಮಲಗಿ. ಇದರಿಂದಲೂ ಆಣಿ ಕಡಿಮೆಯಾಗುತ್ತದೆ.