Wednesday, February 5, 2025

Latest Posts

ದೇಹದಲ್ಲಿ ವಿಟಾಮಿನ್ ಡಿ ಇಲ್ಲದಿದ್ದರೆ ಹೇಗೆ ಗೊತ್ತಾಗುತ್ತದೆ..? ಅದಕ್ಕೆ ಏನು ಪರಿಹಾರ ಮಾಡಬೇಕು..?

- Advertisement -

ದೇಹಕ್ಕೆ ವಿಟಾಮಿನ್ ಡಿ ಅನ್ನೋದು ಎಷ್ಟು ಮುಖ್ಯ ಅನ್ನೋದು, ಹುಟ್ಟುವಾಗಲೇ ಗೊತ್ತಾಗುತ್ತದೆ. ವಿಟಾಮಿನ್ ಡಿ ಇಲ್ಲದಿದ್ದಾಗ, ಮಗುವಿನ ದೇಹ ಹಳದಿ ಬಣ್ಣಕ್ಕೆ ತಿರುಗುತ್ತೆ. ಆಗ ಸನ್ ಲೈಟ್ನಿಂಗ್ ಟ್ರೀಟ್‌ಮೆಂಟ್ ಕೊಡುತ್ತಾರೆ. ಅಲ್ಲದೇ, ಹುಟ್ಟಿದ ದಿನದಿಂದಲೇ ಪ್ರತೀ ಮಗುವಿಗೂ 6 ತಿಂಗಳವರೆಗೆ , ವಿಟಾಮಿನ್ ಡಿ ಔಷಧಿ ಕೊಡಲೇಬೇಕು. ಹಾಗಾದ್ರೆ ದೇಹದಲ್ಲಿ ವಿಟಾಮಿನ್ ಡಿ ಇಲ್ಲದಿದ್ದರೆ ಹೇಗೆ ಗೊತ್ತಾಗತ್ತೆ..? ಅದಕ್ಕೆ ಏನು ಪರಿಹಾರ ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ನೀವು ಪ್ರತಿದಿನ ಬೆಳಗ್ಗಿನ ಬಿಸಿಲಿಗೆ ನಿಮ್ಮ ಮೈಯೊಡ್ಡಿ ನಿಂತರೆ, ಅದರಿಂದ ಸಿಗುವ ವಿಟಾಮಿನ್ ಡಿಯಿಂದ ನಿಮಗೆ ಭರಪೂರ ಆರೋಗ್ಯ ಲಾಭವಾಗಲಿದೆ. ಮೂಳೆಗಳ ನೋವು ಬರುವುದಿಲ್ಲ. ಹಲ್ಲು ಗಟ್ಟಿಯಾಗಿರುತ್ತದೆ. ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಕಣ್ಣಿನ ಆರೋಗ್ಯ ಸೂಪರ್ ಆಗಿ ಇರುತ್ತದೆ. ಹೃದ್ರೋಗ ಸಮಸ್ಯೆ ನಿಮ್ಮಿಂದ ದೂರವಿರುತ್ತದೆ. ಸ್ತನ ಕ್ಯಾನ್ಸರ್ ಬರುವುದಿಲ್ಲ, ಜೀರ್ಣಕ್ರಿಯೆ ಸಮಸ್ಯೆಯೂ ಪರಿಹಾರವಾಗತ್ತೆ.

ಇನ್ನು ನಿಮ್ಮ ದೇಹದಲ್ಲಿ ವಿಟಾಮಿನ್ ಡಿ ಕಡಿಮೆ ಇದ್ದರೆ, ನಿಮ್ಮ ದೇಹದಲ್ಲಿ ನಿಶ್ಯಕ್ತಿಯಾಗುತ್ತದೆ. ಮಾನಸಿಕ ನೆಮ್ಮದಿ ಇರೋದಿಲ್ಲಾ. ಕೈ ಕಾಲು, ಸೊಂಟ ನೋವು ಆಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಪದೇ ಪದೇ ತಲೆ ನೋವಾಗುವುದು. ಸೈನಸ್ ಸಮಸ್ಯೆ, ಪದೇ ಪದೇ ಶೀತವಾಗುವುದು. ಬಿಪಿ, ಶುಗರ್ ಸಮಸ್ಯೆ ಬರುತ್ತದೆ.

ಮೇಥಿ ಮಟರ್ ಮಲಾಯ್ ರೆಸಿಪಿ..

ಹಾಗಾದ್ರೆ ಇದಕ್ಕೆ ಪರಿಹಾರ ಏನು ಅಂತಾ ಕೇಳಿದ್ರೆ, ಪುಟ್ಟ ಮಕ್ಕಳಿಗೆ ವಿಟಾಮಿನ್ ಡಿ ಔಷಧಿ ಸಿಗುತ್ತದೆ. ಅದನ್ನ ವೈದ್ಯರ ಬಳಿ ವಿಚಾರಿಸಿ ಕೊಡಬಹುದು. ಹಿರಿಯರು ಬೆಳಗ್ಗಿನ ತಿಳಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ. ಜೊತೆಗೆ ಕ್ಯಾರೆಟ್, ಬೀಟ್‌ರೂಟ್‌, ನೆನೆಸಿದ ಶೇಂಗಾ, ಸೇರಿ ವಿಟಾಮಿನ್ ಡಿ ಅಂಶವಿರುವ ಪದಾರ್ಥವನ್ನ ಸೇವಿಸಿ..

- Advertisement -

Latest Posts

Don't Miss