ಇಂದಿನ ಕಾಲದಲ್ಲಿ ಜನರು ಸೇವಿಸುವ ಆಹಾರವೇ, ಆರೋಗ್ಯಕ್ಕೆ ಮಾರಕವಾಗಿದೆ. ಹಿಂದಿನ ಕಾಲದಲ್ಲಿ ಜಂಕ್ ಫುಡ್‌ಗಳು ಹೆಚ್ಚಾಗಿರಲಿಲ್ಲ. ಮನೆಯಲ್ಲೇ ಬೇಯಿಸಿ ತಿನ್ನುತ್ತಿದ್ದರು. ಆದ್ರೆ ಇತ್ತೀಚೆಗೆ ಜಂಕ್ ಫುಡ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನವರು ಹೊಟೇಲ್‌ಗೆ ಹೋಗೋಕ್ಕೆ ಇಷ್ಟಪಡ್ತಾರೆ. ವಾರದಲ್ಲಿ ಮೂರು ದಿನವಾದ್ರೂ ಹೊಟೇಲ್ ತಿಂಡಿ ತಿನ್ನದಿದ್ರೆ, ಸಮಾಧಾನವಾಗುವುದೇ ಇಲ್ಲ. ಇದೇ ಕಾರಣಕ್ಕೆ ಬೊಜ್ಜಿನ ಸಮಸ್ಯೆ ಬರುತ್ತಿದೆ. ಹಾಗಾಗಿ ನಾವಿಂದು ಬೊಜ್ಜನ್ನ ಕರಗಿಸಲು, ಯಾವ ಸೂಪ್ ಕುಡಿಯಬೇಕು ಅಂತಾ ಹೇಳಲಿದ್ದೇವೆ.
ವಯಸ್ಸಾದರೂ ಫಿಟ್ ಆಗಿರಬೇಕು ಅಂದ್ರೆ ಈ 5 ಆಹಾರವನ್ನು ಸೇವಿಸಿ..
ಬ್ರೋಕೋಲಿ ಸೂಪ್: ಬ್ರೋಕೋಲಿ ಈಗ ಭಾರತದಲ್ಲೂ ಲಭ್ಯವಿರುವ ತರಕಾರಿ. ಕಾಸ್ಟ್ಲಿ ತರಕಾರಿಯಾದ್‌ರೂ, ಇದರ ಸೇವನೆಯಿಂದ ದೇಹದ ತೂಕ ಇಳಿಯುತ್ತದೆ. ಹಾಗಾಗಿಯೇ ಡಯಟ್ ಮಾಡುವವರು ಬ್ರೋಕೋಲಿ ಸೂಪ್, ಸಲಾಡ್ ಮಾಡಿ ಸೇವಿಸೋದು.
ಸೋರೆಕಾಯಿ ಸೂಪ್ : ಸೋರೇಕಾಯಿಯಲ್ಲಿ ದೇಹದಲ್ಲಿರುವ ಸ್ಟೋನ್ ತೆಗೆಯುವ ಶಕ್ತಿ ಇದೆ. ಯಾವುದೇ ಆಪರೇಷನ್ ಇಲ್ಲದೇ, ಕಿಡ್ನಿಯಲ್ಲಿರುವ ಕಲ್ಲು ತೆಗೆಯಬೇಕು ಅಂದ್ರೆ, ನೀವು ಸೋರೇಕಾಯಿ ಜ್ಯೂಸ್ ಅಥವಾ ಸೂಪ್ ಸೇವಿಸಬೇಕು. ಅಲ್ಲದೇ ಇದು ತೂಕ ಇಳಿಸಲು, ಬೊಜ್ಜು ಕರಗಿಸಲು ಕೂಡ ಸಹಕಾರಿಯಾಗಿದೆ.
ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ಈ ಟಿಪ್ಸ್ ಅನುಸರಿಸಿ..
ಪಾಲಕ್ ಸೂಪ್ : ಪಾಲಕ್ ಸೂಪನ್ನ ತೂಕ ಇಳಿಸಿಕೊಳ್ಳೋಕ್ಕೂ ಕುಡಿಯಬಹುದು. ಇದರಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಸರಿಯಾಗಿ ಇರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಪಾಲಕ್ ಸೂಪ್ ಸೇವಿಸೋಕ್ಕೆ ಹೇಳಲಾಗುತ್ತದೆ.
ನೀವು ಪ್ರತಿದಿನ ಈ ರೀತಿ ಒಂದೊಂದು ಸೂಪ್ ಮಾಡಿ ಕುಡಿದರೆ, ನಿಮ್ಮ ದೇಹದ ತೂಕ ಇಳಿಯುತ್ತದೆ. ಆದ್ರೆ ನೀವು ಈ ಸೂಪ್ ಮಾಡಿ ಕುಡಿಯುವಾಗ, ಅದಕ್ಕೆ ಹೆಚ್ಚೆಚ್ಚು ಎಣ್ಣೆ, ಬೆಣ್ಣೆ, ಖಾರ, ಉಪ್ಪು, ಮಸಾಲೆ ಎಲ್ಲ ಹಾಕಿದ್ರೆ, ಅದು ರುಚಿಕರವಷ್ಟೇ ಆಗತ್ತೆ ಹೊರತು, ಆರೋಗ್ಯಕರವಾಗುವುದಿಲ್ಲ.




