Sunday, June 22, 2025

Latest Posts

ಪೂರಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಸೋಯಾ ಚಂಕ್ಸ್ ಗ್ರೇವಿ..

- Advertisement -

ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಸೋಯಾ ಚಂಕ್ಸ್ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಸೋಯಾ ಚಂಕ್ಸ್ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸೋಯಾ ಚಂಕ್ಸ್, 1 ಬಟಾಟೆ, ಅರ್ಧ ಕಪ್ ಬಟಾಣಿ, 2 ನೀರುಳ್ಳಿ, 2 ಟೊಮೆಟೋ, ಒಂದು ಸ್ಪೂನ್ ಬೆಳ್ಳುಳ್ಳಿ- ಹಸಿ ಮೆಣಸು- ಶುಂಠಿ ಪೇಸ್ಟ್, ಎರಡು ಲವಂಗ- ಪಲಾವ್ ಎಲೆ- ಚಕ್ಕೆ- 2 ಏಲಕ್ಕಿ, ಕೊಂಚ ಜೀರಿಗೆ, ಅರ್ಧ ಸ್ಪೂನ್ ಗರಂ ಮಸಾಲೆ, ಒಂದು ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಹುರಿದ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ ಸ್ಪೂನ್ ಕಸೂರಿ ಮೆಥಿ, ಕೊಂಚ ಸಣ್ಣಗೆ ಕೊಚ್ಚಿದ ಕೊತ್ತಂಬರಿ ಸೊಪ್ಪು, ಚಿಟಿಕೆ ಪೆಪ್ಪರ್ ಪುಡಿ, ಚಿಟಿಕೆ ಅರಿಶಿನ, ನಾಲ್ಕು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಅವಶ್ಯಕತೆ ಇದ್ದಲ್ಲಿ ಕೊಂಚ ಸಕ್ಕರೆ ಅಥವಾ ಬೆಲ್ಲ.

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು, ಅದಕ್ಕೆ ಕೊಂಚ ಉಪ್ಪು ಹಾಕಿ, ಈ ನೀರು ಕುದಿ ಬಂದ ಬಳಿಕ, ಗ್ಯಾಸ್ ಆಫ್ ಮಾಡಿ ಇದಕ್ಕೆ ತೊಳೆದ ಸೋಯಾ ಚಂಕ್ಸ್ ಸೇರಿಸಿ. ನಂತರ ಬಟಾಟೆ ಮತ್ತು ಬಟಾಣಿಯನ್ನು ಬೇಯಿಸಿ, ಕೊಂಚ ಸ್ಮ್ಯಾಶ್ ಮಾಡಿಟ್ಟುಕೊಳ್ಳಿ.

ಇದಾದ ಬಳಿಕ ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇರಿಸಿ. ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ, ಲವಂಗ- ಪಲಾವ್ ಎಲೆ- ಚಕ್ಕೆ- 2 ಏಲಕ್ಕಿ, ಕೊಂಚ ಜೀರಿಗೆ ಹಾಕಿ ಹುರಿಯಿರಿ. ಇದಾದ ಬಳಿಕ, ಈರುಳ್ಳಿ ಹಾಕಿ ಹುರಿಯಿರಿ. ನಂತರ ಟೊಮೆಟೋ ಹಾಕಿ, ಚೆನ್ನಾಗಿ ಬಾಡಿಸಿ, ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಬಳಿಕ, ಇದರಿಂದ ಪಲಾವ್ ಎಲೆ ತೆಗೆದು, ಉಳಿದೆಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ಮಾಡಿ.

ನಂತರ ಮತ್ತೆ ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇರಿಸಿ, ಎಣ್ಣೆ ಹಾಕಿ ಅದು ಬಿಸಿಯಾದ ಬಳಿಕ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ ಎಲ್ಲವನ್ನೂ ಹಾಕಿ ಕೊಂಚ ಹುರಿಯಿರಿ. ಇದಾದ ಬಳಿಕ ರೆಡಿಯಾಗಿರುವ ಪೇಸ್ಟ್, ಮತ್ತು ಶುಂಠಿ- ಬೆಳ್ಳುಳ್ಳಿ- ಹಸಿ ಮೆಣಸಿನ ಕಾಯಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

ಈಗ ಇದಕ್ಕೆ ಕಸೂರಿ ಮೇಥಿ, ಬೇಯಿಸಿದ ಆಲೂಗಡ್ಡೆ, ಬಟಾಣಿ, ನೆನೆಸಿಟ್ಟ ಸೋಯಾ ಚಂಕ್ಸ್, ಪೆಪ್ಪರ್ ಪುಡಿ, ಉಪ್ಪು, ಬೇಕಾದ್ರೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ, ಮಿಕ್ಸ್ ಮಾಡಿ. ಇದಕ್ಕೆ ಕೊಂಚ ನೀರು ಹಾಕಿ, 5 ನಿಮಿಷ ಬೇಯಿಸಿ. ಈಗ ಎಲ್ಲ ಮಸಾಲೆಗಳೂ ಮಿಕ್ಸ್ ಆಗಿರುತ್ತದೆ. ಈಗ ಗ್ಯಾಸ್ ಆಫ್ ಮಾಡಿ, ಕೊತ್ತೊಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿದ್ರೆ, ಸೋಯಾ ಚಂಕ್ಸ್ ಗ್ರೇವಿ ರೆಡಿ.

- Advertisement -

Latest Posts

Don't Miss