Recipe: ನಾವು ಪಲಾವ್, ದೋಸೆ, ಇಡ್ಲಿ, ಚಪಾತಿ, ಸೂಪ್, ಗ್ರೇವಿ, ಪಲ್ಯ, ಚಟ್ನಿ ಏನೇ ಮಾಡುವಾಗಲೂ ಪಾಲಕ್ ಸೊಪ್ಪನ್ನು ಬಳಸಿದ್ದಲ್ಲಿ, ಅದರ ಟೇಸ್ಟ್ ಅತ್ಯುತ್ತಮವಾಗುತ್ತದೆ. ಅಲ್ಲದೇ, ಪಾಲಕ್ ಆರೋಗ್ಯಕ್ಕೂ ಉತ್ತಮ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದಲ್ಲಿ, ಪಾಲಕ್ ಸೊಪ್ಪಿನ ಪದಾರ್ಥದ ಸೇವನೆ ಮಾಡಬೇಕು. ಅದಕ್ಕಾಗಿ ನಾವಿಂದು ರುಚಿಯಾದ, ಆರೋಗ್ಯಕರವೂ ಆದ ಪಾಲಕ್ ಬಟಾಣಿ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಪಾಲಕ್‌ನ್ನು ಚೆನ್ನಾಗಿ ತೊಳೆದು, ನೀರಿನಲ್ಲಿ ಹಾಕಿ, ಕೊಂಚ ಬೇಯಿಸಿಕೊಳ್ಳಿ. ಬಳಿಕ ನೀರಿನಿಂದ ತೆಗೆದು, ಮಿಕ್ಸಿ ಜಾರ್‌ಗೆ ಹಾಕಿ, ಅದರೊಂದಿಗೆ ಹಸಿಮೆಣಸು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ, ತುಪ್ಪ ಹಾಕಿ, ಅದಕ್ಕೆ ಜೀರಿಗೆ,ಪಲಾವ್ ಎಲೆ, ಸಣ್ಣಗೆ ತುಂಡರಿಸಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿದುಕೊಳ್ಳಿ. ಬಳಿಕ ಇದಕ್ಕೆ ಜಿಂಜರ್ ಗಾರ್ಲಿಕ್ ಪೇಸ್ಟ್ ಸೇರಿಸಿ.
ಈಗ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ರೆಡಿ ಮಾಡಿಟ್ಟುಕೊಂಡ ಪಾಲಕ್ ಪೇಸ್ಟ್, ಮೊಸರು, ನೀರು, ಹಸಿ ಬಟಾಣಿ ಸೇರಿಸಿ, ಚೆನ್ನಾಗಿ ಕುದಿಸಿ. ಬಳಿಕ ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ಒಂದು ಸ್ಪೂನ್ ಕ್ರೀಮ್ ಸೇರಿಸಿದರೆ ಪಾಲಕ್ ಬಟಾಣಿ ಗ್ರೇವಿ ರೆಡಿ. ನೀವು ಇದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಹಾಕಬಹುದು.
ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..
ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..




