ಶಿವ ಶಿವನೆಂದರೆ ಭಯವಿಲ್ಲಾ, ಶಿವನಾಮಕೆ ಸಾಟಿ ಬೇರಿಲ್ಲಾ ಅನ್ನುವ ಹಾಗೆ, ಶಿವ ಭಕ್ತರು ಸದಾ ಶಿವನ ಧ್ಯಾನ ಮಾಡುತ್ತಾರೆ. ಆದ್ರೆ ಪುರಾಣ ಕಥೆಗಳ ಪ್ರಕಾರ, ಭೃಗು ಋಷಿ ಶಿವಭಕ್ತರಿಗೆ ಶಾಪ ನೀಡಿದ್ದರಂತೆ. ಹಾಗಾದ್ರೆ ಭೃಗು ಋಷಿ ಶಿವಭಕ್ತರಿಗೆ ನೀಡಿದ ಶಾಪ ಎಂಥದ್ದು..? ಯಾವ ಕಾರಣಕ್ಕೆ ಅವರು ಶಾಪ ನೀಡಿದ್ದರು. ಅವರ ಶಾಪ ತಟ್ಟಿದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಸಧೃಡ, ಗಟ್ಟಿಮುಟ್ಟಾದ ಆರೋಗ್ಯಕರ ಕೇಶರಾಶಿ ಪಡೆಯಲು ಹೀಗೆ ಮಾಡಿ..
ಒಮ್ಮೆ ದಕ್ಷ ಪ್ರಜಾಪತಿ ಲೋಕ ಕಲ್ಯಾಣಕ್ಕಾಗಿ ಯಜ್ಞ ಮಾಡುತ್ತಿದ್ದ. ಯಜ್ಞಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಿದ್ದ. ಈ ವೇಳೆ ಯಜ್ಞಕ್ಕೆ ಶಿವ ಮತ್ತು ಪಾರ್ವತಿ ಕೂಡ ಬಂದಿದ್ದರು. ಆದ್ರೆ ಶಿವ ದಕ್ಷ ರಾಜನಿಗೆ ವಂದಿಸಲಿಲ್ಲ. ಹಾಗಾಗಿ ಕೋಪಗೊಂಡ ದಕ್ಷರಾಜ, ನೀನು ಇನ್ನುಮುಂದೆ ಯಾವ ಯಜ್ಞದಲ್ಲೂ ಭಾಗವಹಿಸುವಂತಿಲ್ಲ ಎಂದು ಶಾಪ ನೀಡಿದ.
ಇದನ್ನು ಕೇಳಿದ ನಂದಿಗೆ ಕೋಪ ಬಂದು, ಯಾರು ಮಹಾದೇವನಿಗೆ ಈ ರೀತಿ ಶಾಪ ನೀಡಿ, ಅವಮಾನಿಸಿದ್ದಾರೋ, ಅವರ ಮುಖ ಮೇಕೆಯ ಮುಖವಾಗಲಿ ಎಂದು ಶಾಪ ನೀಡಿದ. ನಂದಿಯ ಶಾಪ ಕೇಳಿ ಭೃಗು ಋಷಿ ಕೋಪಗೊಂಡರು. ಅವರು ಕೂಡ, ಶಿವನ ಭಕ್ತರಿಗೆ ಶಾಪ ನೀಡಿದರು. ಯಾರು ಶಿವನ ಪರಮ ಭಕ್ತರಾಗಿರುತ್ತಾರೋ, ಅಂಥವರು ಸ್ಮಶಾನದಲ್ಲೇ ವಾಸಿಸಲಿ, ಅವರು ದೇಹಕ್ಕೆ ವಿಭೂತಿ ಬಳಿದುಕೊಂಡೇ ಇರಲಿ, ಹಸಿ ಮಜ್ಜೆ ಮಾಂಸಗಳೇ ಅವರ ಆಹಾರವಾಗಲಿ. ಅವರು ಜಟಾಧಾರಿಗಳಾಗಿರಲಿ. ಅವರು ವೇದ ಶಾಸ್ತ್ರಗಳ ವಿರುದ್ಧವಿರುತ್ತಾರೆಂದು ಶಾಪ ನೀಡುತ್ತಾರೆ.
ಸ್ಟ್ರಾಬೇರಿ ಮತ್ತು ಕಲ್ಲಂಗಡಿ ಹಣ್ಣಿನ ಸ್ಮೂದಿ..
ಹಾಗಾಗಿಯೇ ಅಘೋರಿಗಳು ಯಾವಾಗಲೂ ಸ್ಮಶಾನದಲ್ಲೇ ವಾಸಿಸೋದು. ಶಿವನಾಮಸ್ಮರಣೆ ಮಾಡುತ್ತ, ದೇಹಕ್ಕೆ ವಿಭೂತಿ ಬಳಿದುಕೊಂಡು, ಮಜ್ಜೆ ಮಾಂಸಗಳನ್ನೇ ತಿನ್ನುತ್ತಾರೆ. ಇವರಿಗೆ ಕುಟುಂಬದ ಜೊತೆ ಸಂಪರ್ಕವಿರುವುದಿಲ್ಲ. ಜಟಾಧಾರಿಗಳಾದ ಇವರು, ಭಂಗಿ ಸೇದುತ್ತ, ಶಿವನನ್ನು ಪೂಜಿಸುತ್ತಾರೆ. ಆದರೆ ಇದನ್ನು ಅವರು ಶಾಪವೆಂದು ಪರಿಗಣಿಸದೇ, ಭಕ್ತಿ ಮಾಡುವ ರೀತಿ ಎಂದು ಜೀವಿಸುತ್ತಾರೆ.