ಕೆಲವರು ಕೆಲ ವಿಷಯಗಳ ಬಗ್ಗೆ ವಾರಗಟ್ಟಲೇ ಯೋಚಿಸುತ್ತ, ಸಮಯ ವ್ಯರ್ಥ ಮಾಡಿದ್ರೆ, ಇನ್ನು ಕೆಲವರು ಘಟನೆ ನಡೆದ ಕೆಲ ಸಮಯದಲ್ಲೇ ಏನೂ ಆಗಿಲ್ಲವೇನೋ ಎಂಬಂತೆ ಇದ್ದು ಬಿಡುತ್ತಾರೆ. ಯಾಕಂದ್ರೆ ಯೋಚನೆ ಮಾಡುವ ಬದಲು, ಆರಾಮವಾಗಿರುವುದೇ ಲೇಸು ಅನ್ನೋದು ಅವರ ಅಂಬೋಣ. ಹಾಗಾಗಿ ನಾವು ಕೆಲ ವಿಷಯಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರಿಗಾಗಿ ಕಥೆಯೊಂದನ್ನ ಹೇಳಲಿದ್ದೇವೆ.
ಈ 4 ವಿಷಯ ನಿಮಗೆ ಗೊತ್ತಿದ್ದಲ್ಲಿ ನೀವು ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ..
ಒಂದು ಊರಿನಲ್ಲಿ ಓರ್ವ ಯುವಕನಿದ್ದ. ಅವನು ತನಗೆ ಯಾರಾದರೂ ಬೇಸರ ಮಾಡಿದರೆ, ಅಥವಾ ಅವನಿಗೆ ಬೈದರೆ, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಿದ್ದ. ಅಲ್ಲದೇ, ಅವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಕಾಯುತ್ತಿದ್ದ. ಹಾಗಾಗಿ ಅವನ ಗೆಳೆಯ ಅವನಿಗೆ ಒಂದು ಮಾತು ಹೇಳಿದ. ನೀನು ಸಣ್ಣ ಸಣ್ಣ ವಿಷಯಕ್ಕೂ ಬೇಸರಪಟ್ಟುಕೊಳ್ಳುತ್ತಿಯಾ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಿಯಾ. ಹಾಗಾಗಿ ನೀನು ಇಲ್ಲೇ ಓರ್ವ ಬೌದ್ಧ ಭಿಕ್ಷುವಿದ್ದಾರೆ. ಅವರ ಬಳಿ ಹೋಗಿ, ನಿನ್ನ ಸಮಸ್ಯೆಗೆ ಪರಿಹಾರ ಕೇಳು ಎನ್ನುತ್ತಾನೆ.
ಅದಕ್ಕೆ ಆ ಯುವಕ ಬೌದ್ಧ ಭಿಕ್ಷುವಿನ ಬಳಿ ಹೋಗಿ, ನನಗೆ ಈ ರೀತಿ ಸಮಸ್ಯೆ ಇದೆ ಎನ್ನುತ್ತಾನೆ. ಆಗ ಆ ಭಿಕ್ಷು ಹೊರಗೆ ಹೋಗಿ ಒಂದು ಮಣ್ಣಿನ ಲೋಟದಲ್ಲಿ ನೀರು ತೆಗೆದುಕೊಂಡು ಬರುತ್ತಾರೆ. ಮತ್ತು ಯುವಕನಲ್ಲಿ ಕೇಳುತ್ತಾರೆ. ನಾನು ಈ ಲೋಟದಲ್ಲಿ ನೀರನ್ನು ಹಿಡಿದು ಸ್ವಲ್ಪಹೊತ್ತು ಹೀಗೆ ನಿಂತರೆ ಏನಾಗುತ್ತದೆ ಎಂದು ಕೇಳುತ್ತಾರೆ. ಆಗ ಅವನು ಏನೂ ಆಗುವುದಿಲ್ಲ ಎನ್ನುತ್ತಾನೆ. ಹಾಗಾದ್ರೆ ಈ ಲೋಟವನ್ನು ಒಂದು ಗಂಟೆ ಹಿಡಿದರೆ ಏನಾಗುತ್ತದೆ ಎಂದು ಕೇಳುತ್ತಾರೆ. ಅದಕ್ಕೆ ಯುವಕ, ಕೈ ನೋವುತ್ತದೆ ಎನ್ನುತ್ತಾನೆ. ಹಾಗಾದ್ರೆ ಇಡೀ ಹಿಡಿದುಕೊಂಡು ನಿಂತರೆ ಏನಾಗತ್ತೆ ಎಂದು ಕೇಳುತ್ತಾರೆ. ಅದಕ್ಕೆ ಅವನು, ನಿಮ್ಮ ಕೈಕಾಲು ನೋವಾಗಬಹುದು. ಅಲ್ಲಾಡದಿರುವಷ್ಟು ಬೇನೆಯಾಗಬಹುದು ಎನ್ನುತ್ತಾನೆ.
ರಾಗಿ ಅಂದ್ರೆ ಬರೀ ಧಾನ್ಯವಲ್ಲ.. ಇದೊಂದು ಶಕ್ತಿಯುತ ಆಹಾರ..
ಆಗ ಭಿಕ್ಷು ಹೇಳುತ್ತಾರೆ. ನಿಜ ಸರಿಯಾಗಿ ಉತ್ತರಿಸಿದ್ದಿ. ನಿನ್ನ ಯೋಚನೆ ಕೂಡ ಈ ಲೋಟದಂತೆ. ಮತ್ತು ನಿನ್ನ ಮೆದುಳು ನನ್ನ ದೇಹದಂತೆ. ನೀನು ಚಿಕ್ಕ ಪುಟ್ಟ ವಿಷಯವನ್ನ ಈ ರೀತಿ ಯೋಚಿಸುತ್ತಿಯಾ. ಅದನ್ನ ಸ್ವಲ್ಪ ಹೊತ್ತು ಯೋಚಿಸಿ ಬಿಟ್ಟರೆ, ಅದರಿಂದೇನೂ ತೊಂದರೆಯಾಗುವುದಿಲ್ಲ. ಅದೇ ನೀನು ಅದನ್ನೇ ಯೋಚಿಸುತ್ತಿದ್ದರೆ, ಅದು ನಿನ್ನ ಖುಷಿಯನ್ನ ಹಾಳು ಮಾಡಿ, ನಿನಗೆ ಬೇನೆ ಕೊಡುತ್ತದೆ. ಹಾಗಾಗಿ ಯಾವುದಾದರೂ ವಿಷಯವನ್ನು ಹೆಚ್ಚು ಯೋಚಿಸಿ, ನಿನ್ನ ಖುಷಿ ಹಾಳು ಮಾಡಿಕೊಳ್ಳದೇ, ಹೆಚ್ಚಾಗಿ ಯೋಚಿಸುವುದನ್ನು ಬಿಟ್ಟುಬಿಡು ಎನ್ನುತ್ತಾರೆ ಭಿಕ್ಷು.