Monday, April 21, 2025

Latest Posts

ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ1

- Advertisement -

ಎಲ್ಲರಿಗೂ ಗೊತ್ತಿರುವ ಹಾಗೆ ದ್ರೌಪದಿಗೆ ಐವರು ಪತಿಯರು. ಹಾಗಾಗಿ ಆಕೆಯನ್ನು ಪಾಂಚಾಲಿ ಎಂದು ಕರೆಯುತ್ತಾರೆ. ಆದ್ರೆ ಯಾರ ತಪ್ಪಿನಿಂದ, ಯಾರ ಶಾಪದಿಂದ ದ್ರೌಪದಿ ಪಂಡ ಪಾಂಡವರ ಪತ್ನಿಯಾದಳು ಗೊತ್ತೇ..? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..

ನೈಮಿಷಾರಣ್ಯದಲ್ಲಿ ಯಮ ವಿಶೇಷ ಯಜ್ಞದಲ್ಲಿ ಭಾಗಿಯಾಗಿದ್ದ. ಆಗ ಭೂಲೋಕದಲ್ಲಿ ಯಾರ ಮರಣವೂ ಆಗದೇ, ಎಲ್ಲರೂ ಅಮರರಾಗುತ್ತಿದ್ದರು. ಭೂಮಿತಾಯಿ ಭಾರ ತಡೆಯಲಾಗದೇ, ಒದ್ದಾಡುತ್ತಿದ್ದಳು. ಇದನ್ನು ಕಂಡ ದೇವತೆಗಳು, ಬ್ರಹ್ಮದೇವನಲ್ಲಿ ಹೋಗಿ, ಭೂದೇವಿಯ ಸಮಸ್ಯೆ ಹೇಳಿಕೊಂಡರು. ಆಗ ಬ್ರಹ್ಮ ದೇವ, ಯಮ ವಿಶೇಷ ಯಜ್ಞದಲ್ಲಿ ಭಾಗಿಯಾಗಿದ್ದಾರೆ. ಅವರು ಬಂದ ಬಳಿಕ, ಅವರ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಹೇಳುತ್ತಾರೆ.

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

ದೇವರಾಜ ಇಂದ್ರನೂ ಕೂಡ ನೈಮಿಷಾರಣ್ಯಕ್ಕೆ ಯಮನನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ಅಲ್ಲೊಂದು ನದಿಯಲ್ಲಿ ಚೆಂದದ ಕಮಲಗಳು ತೇಲಿಕೊಂಡು ಬರುತ್ತಿರುತ್ತದೆ. ಅದೆಲ್ಲಿಂದ ಬರುತ್ತಿದೆ ಎಂದು ಹುಡುಕಿಕೊಂಡು ಹೋದಾಗ, ಅಲ್ಲೊಬ್ಬ ಮಹಿಳೆ ಅಳುತ್ತ ನಿಂತಿರುತ್ತಾಳೆ. ಆಕೆಯ ಕಣ್ಣೀರೇ ನದಿಯಲ್ಲಿ ಬಿದ್ದು ಕಮಲವಾಗಿ ಅರಳಿ ಬರುತ್ತಿರುತ್ತದೆ.

ಆಕೆ ಅಳುತ್ತಿರುವುದಕ್ಕೆ ಕಾರಣವೇನು ಎಂದು ಇಂದ್ರ ಕೇಳುತ್ತಾನೆ. ಅದಕ್ಕೆ ಆಕೆ ನನ್ನೊಂದಿಗೆ ಬನ್ನಿ ಆಗ ನನ್ನ ಅಳುವಿಗೆ ಕಾರಣವೇನೆಂದು ತಿಳಿಯುತ್ತದೆ ಎಂದು ಹೇಳುತ್ತಾಳೆ. ಇಂದ್ರ ಅವಳೊಂದಿಗೆ ಹೋಗುತ್ತಾನೆ. ಅಲ್ಲಿ ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಪಗಡೆಯಾಡುತ್ತ ಕುಳಿತಿರುತ್ತಾರೆ. ಇಂದ್ರ ಬಂದಿದ್ದು ಗೊತ್ತಿದ್ದರೂ, ಅವರಿಬ್ಬರೂ ಆಟದಲ್ಲಿ ತಲ್ಲೀನರಾಗಿರುತ್ತಾರೆ. ಅಲ್ಲಿರುವ ಪುರುಷ ಇಂದ್ರನನ್ನು ನೋಡಿ ನಕ್ಕು ಮತ್ತೆ ಪಗಡೆಯಾಡುತ್ತಾನೆ.

ನೀವು ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ..!

ಆಗ ಇಂದ್ರನಿಗೆ, ತಾನು ಇಲ್ಲಿದ್ದರೂ ತನಗೆ ಗೌರವ ನೀಡದೇ, ಇವರು ಪಗಡೆಯಾಡುತ್ತಿದ್ದಾರೆಂದು ಕೋಪ ಬರುತ್ತದೆ. ಆಗ ಅವನು ನಾನು ಯಾರೆಂದು ಗೊತ್ತೇ..? ನನ್ನನ್ನು ನೋಡಿಯೂ ಗೌರವಿಸದೇ ಹಾಗೆ ಇದ್ದೀರಿ ನಿಮಗೆ ನಾನು ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳುತ್ತಾನೆ. ಹಾಗಾದ್ರೆ ಆ ಸ್ತ್ರೀ ಪುರುಷ ಯಾರು..? ಇಂದ್ರ ಅವರಿಗೇನು ಮಾಡಿದ..? ಇದಕ್ಕೂ ದ್ರೌಪದಿ ಮದುವೆಗೂ ಗೌರವವೇನು ಅಂತಾ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss