Wednesday, December 25, 2024

Latest Posts

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 1

- Advertisement -

ಯಾರಿಗೂ ಕೂಡ ತಾನು ಹುಟ್ಟುವಾಗ ಹೇಗಿದ್ದೆನೋ, ಯವ್ವನದಲ್ಲಿ ಹೇಗಿದ್ದೆನೋ, ವೃದ್ಧಾಪ್ಯದಲ್ಲೂ ಅದೇ ಸ್ಥಿತಿಯಲ್ಲಿರಬೇಕು ಅಂತಾ ಇರುವುದಿಲ್ಲ. ಅಂದ್ರೆ ತಾನು ಹುಟ್ಟುವಾಗ ಬಡವನಾಗಿದ್ದಿರಬಹುದು. ಯವ್ವನದಲ್ಲಿ ದುಡಿದರೂ ಅಷ್ಟು ಶ್ರೀಮಂತನಲ್ಲದಿರಬಹುದು. ಆದ್ರೆ ವೃದ್ಧಾಪ್ಯದಲ್ಲಿ ಯಾರೆದುರು ಕೈ ಚಾಚದೇ, ಕುಳಿತು ಆರಾಮವಾಗಿ ಉಣ್ಣುವಷ್ಟು ಶ್ರೀಮಂತನಾಗಿರಬೇಕು ಅನ್ನೋ ಆಸೆ ಇರುತ್ತದೆ. ನಿಮಗೂ ಈ ಆಸೆ ಇದ್ದರೆ, ಇದಕ್ಕೆ ಸಂಬಂಧಪಟ್ಟ ಕೆಲ ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ.

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 2

ಒಂದೂರಿನಲ್ಲ ಓರ್ವ ವ್ಯಕ್ತಿ ಇದ್ದ. ಅವನ ಹೆಸರು ಜನ್ನಪ್ಪ. ಅವನು ಅವಿದ್ಯಾವಂತನಾಗಿದ್ದ. ಸ್ವಂತ ಮನೆ ಇರಲಿಲ್ಲ. ಎಲ್ಲಿ ಕಾಡು ಇರುತ್ತಿತ್ತೋ, ಅಲ್ಲೇ ಮನೆ ಮಾಡುತ್ತಿದ್ದ. ಯಾಕಂದ್ರೆ ಕಾಡಿನಲ್ಲಿರುವ ಮರವನ್ನೆಲ್ಲ ಕಡಿದು ಅದರಿಂದ ಇದ್ದಿಲನ್ನ ತಯಾರಿಸಿ, ಮಾರಾಟ ಮಾಡುತ್ತಿದ್ದ. ಒಮ್ಮೆ ಅವನು ವಾಸ ಮಾಡುತ್ತಿದ್ದ ಕಾಡಿಗೆ ಓರ್ವ ರಾಜ ಬೇಟೆಯಾಡಲು ಬಂದ. ಆದ್ರೆ ಪುನಃ ರಾಜ್ಯಕ್ಕೆ ಹೋಗಲು ಅವನಿಂದ ಸಾಧ್ಯವಾಗಲಿಲ್ಲ. ಕಾರಣ ಅವನು ದಾರಿ ತಪ್ಪಿದ್ದ.

ಕತ್ತಲಾಗುತ್ತಿದ್ದಂತೆ ರಾಜನಿಗೆ ಹಸಿವಾಗ ತೊಡಗಿತ್ತು. ಆಗ ಅಲ್ಲೇ ಹತ್ತಿರದಲ್ಲಿ ಜನ್ನಪ್ಪ ಮರ ಕಡಿಯುತ್ತಿದ್ದನ್ನು ರಾಜ ಕಂಡ. ಅವನ ಬಳಿ ಹೋಗಿ, ನನಗೆ ಹಸಿವಾಗುತ್ತಿದೆ ತಿನ್ನಲು ಏನಾದರೂ ಕೊಡು ಎಂದು ರಾಜ ಕೇಳಿದ. ಜನ್ನಪ್ಪ ಮನೆಗೆ ಹೋಗಿ, ರೊಟ್ಟಿ ಪಲ್ಯ ಮತ್ತು ನೀರು ತಂದು ಕೊಟ್ಟ. ಅದನ್ನು ತಿಂದ ರಾಜ ಸಂತೋಷಗೊಂಡ. ನನಗೆ ಇಂಥ ರುಚಿಕರ ಊಟ ಕೊಟ್ಟಿದ್ದಕ್ಕೆ ನಿನಗೆ ಧನ್ಯವಾದ. ನಾನು ಬೇಟೆಯಾಡಲು ಬಂದು ದಾರಿ ಗೊತ್ತಾಗದೇ, ಇಲ್ಲೇ ಉಳಿದಿದ್ದೇನೆ. ನನಗೆ ರಾಜ್ಯಕ್ಕೆ ಹೋಗುವ ದಾರಿ ತೋರಿಸುವೆಯಾ ಎಂದು ಕೇಳಿದ.

ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1

ಅದಕ್ಕೆ ಜನ್ನಪ್ಪ, ಖಂಡಿತ ತೋರಿಸುವೆ ಎಂದು ರಾಜ್ಯಕ್ಕೆ ಹೋಗುವ ದಾರಿ ತೋರಿಸಿದ. ರಾಜ ತನ್ನ ರಾಜ್ಯಕ್ಕೆ ಹೋಗುವ ಮುನ್ನ, ನಾನು ಹಸಿದಾಗ ನೀನು ಊಟ ಕೊಟ್ಟೆ. ದಾರಿ ತೋರಿಸಿದೆ. ನಿನಗೆ ಏನಾದರೂ ಕಷ್ಟ ಬಂದಾಗ ನನ್ನ ಬಳಿ ಸಹಾಯ ಕೇಳೆಂದು ಹೇಳಿ ಹೋಗುತ್ತಾನೆ. ಕೆಲ ದಿನಗಳ ಬಳಿಕ, ಕಾಡಿನಲ್ಲಿರುವ ಮರವೆಲ್ಲ ಕಡಿದು ಖಾಲಿಯಾಗುತ್ತದೆ. ಜನ್ನಪ್ಪನಿಗೆ ಚಿಂತೆ ಶುರುವಾಗುತ್ತದೆ. ಎಲ್ಲ ಮರಗಳನ್ನು ಕಡಿದು ಇದ್ದಿಲು ಮಾಡಿ ಮಾರಿಯಾಯಿತು. ಇನ್ನೆಲ್ಲಿ ಹೋಗಲಿ..? ಏನು ಮಾಡಲಿ..? ಹೇಗೆ ಬದುಕಲಿ ಎಂಬ ಚಿಂತೆ ಶುರುವಾಯಿತು. ಆಗ ರಾಜ ತನಗೆ ಸಹಾಯ ಮಾಡುತ್ತಾನೆಂದು ಹೇಳಿ ಹೋದದ್ದು ನೆನಪಾಯಿತು.

ಹಾಗಾದ್ರೆ ಜನ್ನಪ್ಪ ರಾಜನ ಬಳಿ ಸಹಾಯ ಕೇಳುತ್ತಾನಾ..? ರಾಜ ಸಹಾಯ ಮಾಡುತ್ತಾನಾ..? ಏನು ಸಹಾಯ ಮಾಡುತ್ತಾನೆ..? ಮುಂದೇನಾಗುತ್ತದೆ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss