Sunday, September 8, 2024

Latest Posts

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಜನ್ನಪ್ಪ ಕಾಡು ಕಡಿದ ಬಗ್ಗೆ, ರಾಜನಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ್ದೆವು. ಜನ್ನಪ್ಪನಿಗೆ ಕಷ್ಟ ಒದಗಿ ಬಂದಾಗ, ರಾಜನ ಬಳಿ  ಸಹಾಯ ಕೇಳಲು ಹೋಗುತ್ತಾನೆ. ಅಲ್ಲೇನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಜನ್ನಪ್ಪ ರಾಜನ ಬಳಿ ಸಹಾಯ ಕೇಳಲು ಹೋದಾಗ, ರಾಜ ಅವನನ್ನು ಹೊರಗೆ ನಿಲ್ಲಿಸುತ್ತಾನೆ. ಒಳಗೆ ತನ್ನ ಮಂತ್ರಿಗಳ ಬಳಿ ತಾನು ಜನ್ನಪ್ಪನಿಗೆ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಾನೆ. ಕೊನೆಗೆ ಜನ್ನಪ್ಪನಿಗೆ ರಾಜನ ಶ್ರೀಗಂಧದ ಮರವಿರುವ ತೋಟವನ್ನು ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ಜನ್ನಪ್ಪನನ್ನು ಒಳಗೆ ಕರೆದು, ನಿನಗೆ ನನ್ನ ಶ್ರೀಗಂಧದ ತೋಟ ಮತ್ತು ಅಲ್ಲ ಇರುವ ಮನೆಯನ್ನು ನೀಡುತ್ತಿದ್ದೇನೆ. ಸುಖವಾಗಿ ಬಾಳು ಎಂದು ಹೇಳುತ್ತಾನೆ. ಜನ್ನಪ್ಪ ಖುಷಿಯಿಂದ ತೆರಳುತ್ತಾನೆ. ಮತ್ತು ಶ್ರೀಗಂಧದ ತೋಟದ ಮನೆಗೆ ಕುಟುಂಬ ಸಮೇತ ಹೋಗುತ್ತಾನೆ.

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 1

ಕೆಲ ತಿಂಗಳ ಬಳಿಕ ರಾಜ ಯೋಚನೆ ಮಾಡುತ್ತಾನೆ. ತಾನು ಕೆಲ ತಿಂಗಳ ಹಿಂದೆ ಜನ್ನಪ್ಪನಿಗೆ ಶ್ರೀಗಂಧದ ತೋಟ ಕೊಟ್ಟಿದ್ದೆ. ಈಗ ಜನ್ನಪ್ಪ ಅದರಿಂದ ಚೆನ್ನಾಗಿ ವ್ಯಾಪಾರ ಮಾಡಿ, ಶ್ರೀಮಂತನಾಗಿರಬಹುದು. ಅವನು ಹೇಗಿದ್ದಾನೆಂದು ನೋಡಿಕೊಂಡು ಬರೋಣವೆಂದು ಯೋಚಿಸುತ್ತಾನೆ. ತನ್ನ ಮಂತ್ರಿಗಳೊಂದಿಗೆ ಶ್ರೀಗಂಧದ ತೋಟಕ್ಕೆ ಹೋಗುತ್ತಾನೆ. ಆದರೆ ಅಲ್ಲಿ ಒಂದೆರಡು ಶ್ರೀಗಂಧದ ಮರ ಬಿಟ್ಟು ಬೇರೆ ಮರ ಕಾಣಿಸುವುದಿಲ್ಲ.

ರಾಜನಿಗೆ ಆಶ್ಚರ್ಯವಾಗುತ್ತದೆ. ಅರೇ ಎಷ್ಟೆಲ್ಲ ಶ್ರೀಗಂಧದ ಮರವಿತ್ತು, ಈ ಜನ್ನಪ್ಪ ಆ ಮರವನ್ನ ಏನು ಮಾಡಿದ ಎಂದು ಯೋಚಿಸುತ್ತಿದ್ದ. ಅಷ್ಟೊತ್ತಿಗೆ ಉಳಿದೆರಡು ಶ್ರೀಗಂಧದ ಮರದ ಬಳಿ ಜನ್ನಪ್ಪ ತಲೆ ಮೇಲೆ ಕೈ ಇಟ್ಟು ಕುಳಿತುಕೊಂಡಿದ್ದು ಕಂಡಿತು. ರಾಜ ಜನ್ನಪ್ಪನ ಬಳಿ ಹೋಗಿ, ಇಲ್ಲಿದ್ದ ಶ್ರೀಗಂಧದ ಮರವನ್ನೆಲ್ಲ ಏನು ಮಾಡಿದೆ ಎಂದು ಕೇಳುತ್ತಾನೆ. ಅದಕ್ಕೆ ಜನ್ನಪ್ಪ, ಇಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ನಾನು ಇದ್ದಿಲು ತಯಾರಿಸಿ ಮಾರಾಟ ಮಾಡಿದೆ. ಈ ನನ್ನ ಬಳಿ ಬರಿ ಎರಡೇ ಎರಡು ಶ್ರೀಗಂಧದ ಮರ ಉಳಿದಿದೆ ಎನ್ನುತ್ತಾನೆ.

ಇಂಥ ಸ್ಥಿತಿಯಲ್ಲಿ ಯಾವಾಗಲೂ ಮೌನ ವಹಿಸಿ..

ಅದಕ್ಕೆ ತಲೆ ತಲೆ ಚಚ್ಚಿಕೊಂಡ ರಾಜ, ಎಂಥ ಮೂರ್ಖತನದದ ಕೆಲಸ ಮಾಡಿದೆ ನೀನು. ನಿನಗೆ ಶ್ರೀಗಂಧದ ಬೆಲೆ ಗೊತ್ತಿಲ್ಲದೇ ಇಂಥ ಅಚಾತುರ್ಯ ಮಾಡಿಕೊಂಡು ಬಿಟ್ಟೆ. ಈಗ ಉಳಿದಿರುವ ಶ್ರೀಗಂಧದ ಮರದ ಸಣ್ಣ ತುಂಡನ್ನ ಕತ್ತರಿಸಿ, ಮಾರುಕಟ್ಟೆಗೆ ಹೋಗಿ ಮಾರಾಟ ಮಾಡು. ಆವಾಗ ಇದರ ಬೆಲೆ ನಿನಗೆ ತಿಳಿಯುತ್ತದೆ ಎನ್ನುತ್ತಾನೆ. ರಾಜನ ಮಾತಿನಂತೆ ಜನ್ನಪ್ಪ ಮಾರುಕಟ್ಟೆಗೆ ಹೋಗಿ ಶ್ರೀಗಂಧದ ಕಟ್ಟಿಗೆ ಮಾರಿದಾಗ, ಅವನಿಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಆವಾಗ ಜನ್ನಪ್ಪನ್ನೂ ತಲೆ ತಲೆ ಚಚ್ಚಿಕೊಂಡು ಅಳುತ್ತಾನೆ. ನಾನು ಎಂಥ ಶತಮೂರ್ಖ. ನನಗೆ ಮೊದಲೇ ಇದರ ಬೆಲೆ ಗೊತ್ತಿದ್ದಿದ್ದರೆ, ಇಷ್ಟೊತ್ತಿಗೆ ಅದೆಷ್ಟು ಶ್ರೀಮಂತನಾಗುತ್ತಿದ್ದೆ ಎಂದು ಕೊರಗುತ್ತಾನೆ.

ಈ ಕಥೆಯ ಸಾರಂಶವೆಂದರೆ, ನಮ್ಮ ಬಳಿ ಇರುವ ವಸ್ತು ನಮ್ಮಿಂದ ದೂರವಾಗುವ ಮೊದಲು ಅದರ ಬೆಲೆಯನ್ನು ನಾವು ತಿಳಿದುಕೊಂಡಿರಬೇಕು. ಅದು ಒಂದು ವಸ್ತುವೇ ಆಗಿರಬಹುದು, ಸಂಬಂಧವೇ ಆಗಿರಬಹುದು. ಅದನ್ನು ಕಾಪಾಡಿಕೊಳ್ಳಬೇಕು. ಅದನ್ನ ಬಿಟ್ಟು ಅದು ಕಳೆದು ಹೋದ ಮೇಲೆ ಅದರ ಬಗ್ಗೆ ದುಃಖ ಪಡುವುದಲ್ಲ.

- Advertisement -

Latest Posts

Don't Miss