ಲಕ್ಷ್ಮೀಯ ಕೃಪಾಕಟಾಕ್ಷದಿಂದ ಶ್ರೀಮಂತನಾಗಿದ್ದ ಕುಬೇರ, ದೇವಾನು ದೇವತೆಗಳಿಗೆ ಸಾಲ ನೀಡುತ್ತಿದ್ದ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಷ್ಟು ಆಗರ್ಭ ಶ್ರೀಮಂತನಾಗಿದ್ದ ಕುಬೇರ. ಈಗಲೂ ಕೂಡ ಮನೆ ಕಟ್ಟುವ ವೇಳೆ ಕುಬೇರ ದಿಕ್ಕಿನಲ್ಲಿ ತಿಜೋರಿ ಇಡಬೇಕು. ದುಡ್ಡು ಇಡಬೇಕು. ಹಾಗೆ ಮಾಡಿದರೆ, ಶ್ರೀಮಂತಿಕೆ ಇರುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಕುಬೇರ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀವಿಷ್ಣುವಿಗೂ ಸಾಲ ಕೊಟ್ಟಿದ್ದನಂತೆ. ಹಾಗಾದ್ರೆ ವಿಷ್ಣು ಯಾಕೆ ಸಾಲ ಪಡೆದಿದ್ದ..? ಅವನು ಆ ಸಾಲವನ್ನು ತೀರಿಸಿದನೇ..? ಇಲ್ಲವೇ..? ಈ ಎಲ್ಲ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
‘ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ’
ನಾವಿಲ್ಲಿ ಹೇಳುತ್ತಿರುವುದು ತಿರುಪತಿ ತಿಮ್ಮಪ್ಪನ ಬಗ್ಗೆ. ಶ್ರೀವಿಷ್ಣುವಿನ ಅವತಾರವಾದ ತಿರುಪತಿ ತಿಮ್ಮಪ್ಪ ಕುಬೇರನ ಬಳಿ ಸಾಲ ಪಡೆದಿದ್ದ. ಇದರ ಹಿಂದೆ ಒಂದು ಕಥೆ ಇದೆ. ಒಮ್ಮೆ ಲೋಕ ಕಲ್ಯಾಣಕ್ಕಾಗಿ ಋಷಿ ಮುನಿಗಳು ಸೇರಿ ಯಜ್ಞ ಮಾಡಲು ನಿರ್ಧರಿಸಿದರು. ಅದಕ್ಕೆ ಓರ್ವ ಪುರೋಹಿತನ ಅಗತ್ಯವಿತ್ತು. ಬ್ರಹ್ಮ, ವಿಷ್ಣು ಮಹೇಶ್ವರರಲ್ಲಿ ಯಾರನ್ನು ಪುರೋಹಿತರನ್ನಾಗಿ ಮಾಡೋದು ಅನ್ನೋ ಗೊಂದಲ ಶುರುವಾಯ್ತು.
ಆಗ ಭೃಗು ಋಷಿ ಈ ಮೂವರನ್ನು ಪರೀಕ್ಷಿಸಲು ಮುಂದಾದರು. ಮೊದಲು ಬ್ರಹ್ಮನ ಬಳಿ ಹೋಗಿ, ಅವರನ್ನು ಕೂಗಿ ಕರೆದರು. ಆದರೆ ವೀಣೆಯನ್ನ ಆಲಿಸುವುದರಲ್ಲಿ ಮಗ್ನರಾಗಿದ್ದ ಬ್ರಹ್ಮ ದೇವ, ಭೃಗುಋಷಿಯ ಬಳಿ ನೋಡಲೇ ಇಲ್ಲ. ಆಗ ಭೃಗು ಋಷಿ, ಇನ್ನು ಭೂಮಿಯಲ್ಲಿ ನಿನ್ನನ್ನು ಯಾರೂ ಪೂಜಿಸದಂತಾಗಲಿ ಎಂದು ಶಾಪ ನೀಡಿದರು.
ರಾಮಾಯಣ ಕಾಲದ ಈ ಶಾಪಗಳು ಈಗಲೂ ಜನ ಅನುಭವಿಸುತ್ತಿದ್ದಾರೆ..
ನಂತರ ಭೃಗು ಋಷಿ ಶಿವನಲ್ಲಿಗೆ ಹೋದರು. ಅಲ್ಲಿ ಶಿವ ಗಣಗಳು ಭೃಗುವನ್ನ ಶಿವನಲ್ಲಿ ಹೋಗಲು ಬಿಡಲಿಲ್ಲ. ಏಕೆಂದರೆ, ಶಿವ ಮತ್ತು ಪಾರ್ವತಿ ಏಕಾಂತದಲ್ಲಿದ್ದರು. ಆಗ ಭೃಗುಋಷಿ, ನೀನು ಭೂಲೋಕದಲ್ಲಿ ಲಿಂಗವಾಗಿ ಪೂಜಿಸಲ್ಪಡು ಎಂದು ಶಾಪ ನೀಡಿದರು. ನಂತರ ಶ್ರೀವಿಷ್ಣುವಿನಲ್ಲಿಗೆ ಹೋದರು.
ಅಲ್ಲಿ ಶ್ರಿವಿಷ್ಣು ನಿದ್ರಿಸುತ್ತಿದ್ದರು. ಲಕ್ಷ್ಮೀ ದೇವಿ ಅವರ ಕಾಲು ಒತ್ತುತ್ತಿದ್ದಳು. ಭೃಗುಋಷಿ ಎಷ್ಟೇ ಕರೆದರೂ, ಅದು ವಿಷ್ಣುವಿಗೆ ಮತ್ತು ಲಕ್ಷ್ಮೀ ದೇವಿಗೆ ಕೇಳಲಿಲ್ಲ. ಆಗ ಭೃಗು ಕೋಪದಲ್ಲಿ, ವಿಷ್ಣುವಿನ ಎದೆಯ ಮೇಲೆ ಕಾಲಿಟ್ಟರು. ಆಗ ವಿಷ್ಣು ಋಷಿಯನ್ನು ಕುರಿತು, ನನ್ನ ಎದೆಯ ಮೇಲೆ ಕಾಲಿರಿಸಿದ್ದಕ್ಕೆ ನಿಮ್ಮ ಕಾಲು ನೋಯಲಿಲ್ಲವಲ್ಲವೇ..? ಎಂದು ಪ್ರಶ್ನಿಸಿದ. ಆಗ ಭೃಗುಋಷಿ, ವಿಷ್ಣು ಕೋಪ ಮಾಡಿಕೊಳ್ಳುವ ಬದಲು, ಇಷ್ಟು ವಿನಮೃದಿಂದ ಮಾತನಾಡುತ್ತಾನಲ್ಲ ಎಂದು ಸಂತೋಷಗೊಂಡರು. ಇದಾದ ಬಳಿಕ ಮುಂದೇನಾಯಿತು ಎಂದು ಮುಂದಿನ ಭಾಗದಲ್ಲಿ ತಿಳಿಯೋಣ..