ಜೀವನವೆಂದ ಮೇಲೆ ಜಗಳ, ಸಿಟ್ಟು, ಖುಷಿ, ದುಃಖವೆಲ್ಲ ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ಪತಿ ಪತ್ನಿ ಮಧ್ಯೆ ಜಗಳವಾದಾಗಲೇ, ಪ್ರೀತಿ ಹೆಚ್ಚೋದು. ಇದೇ ರೀತಿ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆಯೂ ಜಗಳವಾಗಿತ್ತಂತೆ. ಹಾಗಾದ್‌ರೆ ಪುರಾಣ ಕಥೆಗಳ ಪ್ರಕಾರ, ಯಾಕೆ ವಿಷ್ಣು ಮತ್ತು ಲಕ್ಷ್ಮೀ ಮಧ್ಯೆ ಜಗಳವಾಗಿತ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಶ್ರೀವಿಷ್ಣು ಮತ್ತು ಲಕ್ಷ್ಮೀ ದೇವಿ, ವೈಕುಂಠದಲ್ಲಿ ಮಾತನಾಡುತ್ತ ಕುಳಿತಾಗ, ಶ್ರೀವಿಷ್ಣು ಲಕ್ಷ್ಮೀಯನ್ನು ಕುರಿತು, ಭಕ್ತರೆಲ್ಲ ನನ್ನ ಬಗ್ಗೆ ಎಷ್ಟು ಭಕ್ತಿ ಮಾಡುತ್ತಿದ್ದಾರೆ. ಎಲ್ಲರೂ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆಗ ಲಕ್ಷ್ಮೀ ದೇವಿ, ಅವರು ನನಗಾಗಿ ನಿಮ್ಮ ಜಪ ಮಾಡುತ್ತಿದ್ದಾರೆ. ಎಲ್ಲರಿಗೂ ಧನ ಬೇಕು. ಹಾಗಾಗಿ ಅವರು ಜಪ ಮಾಡುತ್ತಾರೆಂದು ಹೇಳುತ್ತಾಳೆ.
ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!
ಅದಕ್ಕೆ ವಿಷ್ಣು, ಅವರೆಲ್ಲ ಲಕ್ಷ್ಮೀ ಲಕ್ಷ್ಮೀ ಎಂದ ಜಪ ಮಾಡುವುದಿಲ್ಲ. ಬದಲಾಗಿ ನಾರಾಯಣ ನಾರಾಯಣ ಎಂದು ಜಪ ಮಾಡುತ್ತಿದ್ದಾರೆ. ಹಾಗಾಗಿ ಅವರು ನನ್ನ ಬಗ್ಗೆ ಭಕ್ತಿ ಮಾಡುತ್ತಿದ್ದಾರೆಂದು ಹೇಳುತ್ತಾನೆ. ಆದ್ರೆ ಲಕ್ಷ್ಮೀ, ಇಲ್ಲ ಇಲ್ಲ ಅವರೆಲ್ಲ ದುಡ್ಡಿಗಾಗಿ, ನನ್ನನ್ನು ಒಲಿಸಿಕೊಳ್ಳುವುದಕ್ಕೆ ನಿಮ್ಮ ಜಪ ಮಾಡುತ್ತಿದ್ದಾರೆಂದು ಹೇಳುತ್ತಾಳೆ. ಆಗ ಇಬ್ಬರ ಮಧ್ಯೆ, ಹಾಗಾದ್ರೆ ಭಕ್ತರು ಯಾಕೆ ಭಕ್ತಿ ಮಾಡುತ್ತಿದ್ದಾರೆಂದು ಪರೀಕ್ಷಿಸಿಯೇ ಬಿಡೋಣ ಎಂಬ ಮಾತು ಬರುತ್ತದೆ.
ವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಭೂಲೋಕಕ್ಕೆ ಹೋಗುತ್ತಾನೆ. ಅಲ್ಲಿ ಓರ್ವನ ಮನೆಗೆ ಹೋಗಿ, ತಾನು ಈ ಊರಿನಲ್ಲಿ ಪ್ರವಚನ ಹೇಳಲು ಬಂದಿದ್ದೇನೆ ಎನ್ನುತ್ತಾನೆ. ಆಗ ಆ ಮನೆಯ ಯಜಮಾನ, ಸರಿ ನೀವು ನಿಮ್ಮ ಪ್ರವಚನ ಮುಗಿಸಿ, ಈ ಊರಿನಿಂದ ಹೋಗುವವರೆಗೂ ನನ್ನ ಮನೆಯಲ್ಲಿರಿ ಎಂದು ಹೇಳುತ್ತಾನೆ. ಮೊದಲ ದಿನ ಪ್ರವಚನ ಶುರುವಾಗುತ್ತದೆ. ಹೆಚ್ಚಿನ ಜನ ಬರುತ್ತಾರೆ. ಮರುದಿನ ಇನ್ನೂ ಹೆಚ್ಚು ಜನ ವಿಷ್ಣುವಿನ ಪ್ರವಚನ ಕೇಳಲು ಬರುತ್ತಾರೆ.
ವಿಷ್ಣುವಿನ ಅನುಗ್ರಹಕ್ಕಾಗಿ ಧನುರ್ಮಾಸದಲ್ಲಿ ಈ ನಿಯಮಗಳನ್ನೂ ಪಾಲಿಸಿ ನಿಷ್ಠೆಯಿಂದ ಪೂಜಿಸಿ..!
ಆಗ ಜನ ನನ್ನಲ್ಲೆಷ್ಟು ಭಕ್ತಿ ಮಾಡುತ್ತಾರೆಂದು ವಿಷ್ಣುವಿಗೆ ಖುಷಿಯಾಗುತ್ತದೆ. ಇದೇ ಸಮಯಕ್ಕೆ ಲಕ್ಷ್ಮೀ ದೇವಿ ವೃದ್ಧೆಯ ವೇಷದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಓರ್ವ ಹೆಂಗಸು ಮನೆಗೆ ಬೀಗ ಹಾಕಿ, ವಿಷ್ಣುವಿನ ಕೀರ್ತನೆ ಕೇಳಲು ಹೊರಟಿದ್ದಳು. ಅವಳ ಮನೆಗೆ ವೃದ್ಧೆ ಹೋದಳು. ಅವಳಲ್ಲಿ ನೀರು ಕೇಳಿದಳು. ಆದರೆ ಆ ಹೆಂಗಸು, ಹೊತ್ತಾಗಿದೆ ಅಮ್ಮಾ, ನನಗೆ ಪ್ರವಚನ ಕೇಳಲು ಹೋಗಬೇಕು ಎನ್ನುತ್ತಾಳೆ.
ತುಂಬಾ ಬಾಯಾರಿಕೆಯಾಗಿದೆ, ತಡೆಯಲು ಆಗುತ್ತಿಲ್ಲ. ಸ್ವಲ್ಪ ನೀರಷ್ಟೇ ಕೊಟ್ಟು ಹೋಗು ಎನ್ನುತ್ತಾಳೆ. ಹೆಂಗಸಿಗೆ ಕರುಣೆ ಬರುತ್ತದೆ. ಆಕೆ ವೃದ್ಧೆಗೆ ನೀರು ಕೊಡುತ್ತಾಳೆ. ವೃದ್ಧೆ ನೀರು ಕುಡಿದು, ಲೋಟ ವಾಪಸ್ ಕೊಡುವಾಗ, ಅದು ಚಿನ್ನದ ಲೋಟೆಯಾಗಿ ಬದಲಾಗುತ್ತದೆ. ನಂತರ ಏನಾಗುತ್ತದೆ, ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.