Thursday, November 21, 2024

Latest Posts

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

- Advertisement -

ರಾಮಾಯಣದಲ್ಲೂ ಪಾಂಡವರ ಬಗ್ಗೆ ಉಲ್ಲೇಖಿಸಲಾಗಿದೆ. ಅದೇ ರೀತಿ ಮಹಾಭಾರತದಲ್ಲೂ ರಾಮನ ವಂಶಸ್ಥರು ಇರುವ ಬಗ್ಗೆ ಉಲ್ಲೇಖವಿದೆ. ಅದೇ ರೀತಿ ಪಾಂಡವರು ಶ್ರೀಲಂಕಾಕ್ಕೆ ಬಂದು, ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿದ್ದರಂತೆ.. ಈ ಕಥೆಯ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಮಹಾಭಾರತ ಯುದ್ಧಕ್ಕೂ ಮುನ್ನ ಪಾಂಡವರಿಗೆ ಮತ್ತು ಕೌರವರಿಗೆ ತಮ್ಮ ಸೈನ್ಯವನ್ನ ಸಿದ್ಧಗೊಳಿಸಬೇಕಿತ್ತು. ಹಾಗಾಗಿ ಇಬ್ಬರೂ ಸೈನ್ಯ ಸೇರಿಸುವ ತಯಾರಿ ಮಾಡುತ್ತಿದ್ದರು. ಕೌರವರು 12 ಸೇನೆಯನ್ನು ಸಿದ್ಧಗೊಳಿಸಿದ್ದರು. ಆದರೆ ಪಾಂಡವರು ಬರೀ 7 ಸೈನ್ಯವನ್ನು ಸಿದ್ಧಪಡಿಸಿದ್ದರು. ಆಗ ಪಾಂಡವರು ಕುಂತಿಯ ಬಳಿ ಈ ಬಗ್ಗೆ ಸಲಹೆ ಕೇಳಿದರು. ಕುಂತಿ, ಲಂಕೆಗೆ ಹೋಗಿ, ಮಂಢೋಧರಿಯನ್ನು ಭೇಟಿಯಾಗಿ, ಅವರ ಸೈನ್ಯದ ಸಹಾಯ ಕೇಳು ಎಂದು ಹೇಳುತ್ತಾಳೆ.

ಕುಂತಿಯ ಮಾತಿನಂತೆ ಪಾಂಡವರು, ದಕ್ಷಿಣಕ್ಕೆ ಅಂದ್ರೆ ಲಂಕೆಗೆ ಹೋಗಿ, ಮಂಡೋಧರಿಯನ್ನು ಭೇಟಿಯಾದರು. ಆದರೆ ಅದಾಗಲೇ ತ್ರೇತಾಯುಗದಲ್ಲಿ ರಾವಣ ಮತ್ತು ಮೇಘರಾಜ ತೀರಿಹೋಗಿದ್ದು, ವಿಭೀಷಣ ದೇವರ ಧ್ಯಾನದಲ್ಲಿ ಮಗ್ನನಾಗಿದ್ದಾನೆ. ಹಾಗಾಗಿ ಅವನು ಯುದ್ಧ ಮಾಡಲಾಗುವುದಿಲ್ಲ. ಹಾಗಾಗಿ ನಮ್ಮ ಸೈನ್ಯದ ಕೆಲ ಸೈನಿಕರನ್ನ ನಿಮ್ಮೊಂದಿಗೆ ಕಳುಹಿಸಿಕೊಡುತ್ತೇನೆ ಎಂದು ಮಂಡೋಧರಿ ಪಾಂಡವರಿಗೆ ಹೇಳುತ್ತಾಳೆ. ವಿಭೀಷಣ ತಮ್ಮೊಂದಿಗೆ ಯುದ್ಧಕ್ಕೆ ಬರುವುದಿಲ್ಲವೆಂದು ಕೇಳಿ ಪಾಂಡವರಿಗೆ ಬೇಸರವಾಗುತ್ತದೆ.

ಹಾಗಾಗಿ ಇರುವ ಸಣ್ಣ ಸೈನ್ಯದೊಂದಿಗೆ ಮರಳಿ ಹಸ್ತಿನಾಪುರಕ್ಕೆ ಹೋಗಲು ಸಿದ್ಧವಾಗುತ್ತಾರೆ. ಆದ್ರೆ ಅದಾಗಲೇ ರಾತ್ರಿಯಾಗಿದ್ದು, ಲಂಕೆಯಲ್ಲೇ ರಾತ್ರಿ ಕಳೆದು, ಮುಂಜಾನೆ ಹೊರಟರಾಯಿತು ಎಂದು ಲಂಕೆಯಲ್ಲೇ ನಿಲ್ಲುತ್ತಾರೆ. ರಾತ್ರಿ ಸ್ನಾನ ಮಾಡಬೇಕೆಂದು ಆ ಸ್ಥಳದಲ್ಲಿ ಎಲ್ಲಾದರೂ ಸರೋವರ ಕಾಣುತ್ತಾ ಎಂದು ಹುಡುಕುತ್ತಾರೆ.

ಅಲ್ಲೇ ಒಂದು ಸರೋವರ ಕಾಣುತ್ತದೆ. ಆದರೆ ಅದು ಸರೋವರವಾಗಿರುವುದಿಲ್ಲ. ಅದು ಕುಂಭಕರಣನ ತಲೆ ಬುರುಡೆಯಲ್ಲಿ ಹೊಕ್ಕ ನೀರಾಗಿರುತ್ತದೆ. ರಾಮ ಬಿಟ್ಟ ಬಾಣದಿಂದ ಕುಂಭಕರಣನ ರುಂಡ ಭೂಮಿಗೆ ಬಿದ್ದಿತ್ತು. ಆ ತಲೆ ಬುರುಡೆ ಸಿಕ್ಕಾಪಟ್ಟೆ ಭಾರವಾಗಿತ್ತು. ಆ ತಲೆ ಬುರುಡೆಯನ್ನು ಅಲ್ಲಿಂದ ತೆಗೆದು ಹಾಕಲು ಯಾರಿಗೂ ಸಾಧ್ಯವಾಗಿರುವುದಿಲ್ಲ. ಹಾಗಾಗಿ ಆ ಬುರುಡೆಯನ್ನು ಅಲ್ಲೇ ಬಿಡಲಾಗಿತ್ತು. ಆ ಬುರುಡೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಹಾಗಾಗಿ ಅದು ಸರೋವರದ ರೀತಿ ಕಾಣಿಸಿತ್ತು.

ಪಾಂಡವರು ಅದರೊಳಗೆ ಸ್ನಾನಕ್ಕೆ ಹೋದರು. ಆದರೆ ಕೆಲ ಸಮಯದ ಬಳಿಕ ಪಾಂಡವರು ನೀರಿನಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಓರ್ವ ಸೈನಿಕ, ಮಂಢೋಧರಿಗೆ ಈ ವಿಷಯ ತಿಳಿಸಿದ. ಮಂಡೋಧರಿ ತನ್ನ ಸಾನಿಕರನ್ನು ಕರೆತಂದು, ಕುಂಭಕರಣನ ತಲೆ ಬುರುಡೆಯನ್ನು ತಿರುಗುವಂತೆ ಮಾಡಿದಳು. ನಂತರ ಮುಳುಗುತ್ತಿದ್ದ ಪಾಂಡವರು, ಬದುಕಿ ಹೊರಬಂದರು. ಆಗ ಪಾಂಡವರು ನೀವು ಸರೋವರವನ್ನು ಹೇಗೆ ತಿರುಗಿಸಿದಿರಿ. ಇದೆಂಥಾ ಚಮತ್ಕಾರ ಎಂದು ಹೇಳಿದರು. ಅದಕ್ಕೆ ಮಂಡೋಧರಿ ಇರುವ ವಿಷಯವನ್ನು ಪಾಂಡವರಿಗೆ ಹೇಳಿದಳು. ಈ ರೀತಿ ಸರೋವರವೆಂದು ತಿಳಿದು, ಪಾಂಡವರು ಕುಂಭಕರಣನ ತಲೆ ಬುರುಡೆಯೊಳಗೆ ಹೋಗಿ ಬಂದರು.

ಚಾರುಕೀರ್ತಿ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದ ಗೋಪಾಲಯ್ಯ..

ಹವನ ಮಾಡುವಾಗ ಸ್ವಾಹಾ ಎಂದು ಹೇಳಲು ಕಾರಣವೇನು..?

ದೇವತೆಗಳು ಏಕೆ ಮದ್ಯಪಾನ ಮಾಡುತ್ತಿದ್ದರು..? ಸೋಮರಸದ ರಹಸ್ಯ..

- Advertisement -

Latest Posts

Don't Miss