ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ..
ವಿಶಾಲಕಾಯದ ರಾಕ್ಷಸನಾದ ಕುಂಭಕರ್ಣ ಓರ್ವ ವಿಜ್ಞಾನಿಯಾಗಿದ್ದ. ಇದು ಹಲವರಿಗೆ ತಿಳಿಯದ ವಿಷಯವಾಗಿದ್ದರೂ ಕೂಡ, ಇದು ಸತ್ಯ. ಯಾಕಂದ್ರೆ ಈಗಲೂ ಕುಂಭಕರ್ಣನ ಗುಪ್ತ ಪ್ರಯೋಗ ಶಾಲೆ ಗಳು ಭಾರತ ಸೇರಿ, ಹಲವೆಡೆ ಇದೆ. ಸುರಂಗದಲ್ಲಿ ಕುಂಭಕರ್ಣ ಪ್ರಯೋಗ ಶಾಲೆ ಮಾಡಿದ್ದನೆಂದು ಹೇಳಲಾಗುತ್ತದೆ.
ಆದ್ರೆ ಕುಂಭಕರ್ಣ ಎಂಥ ಹೊಟ್ಟೆಬಾಕನಾಗಿದ್ದನೆಂದರೆ, ಹಲವು ಊರಿನವರು ಉಣ್ಣುವ ಭೋಜನವನ್ನು ಇವನೊಬ್ಬನೇ ತಿಂದು ಮುಗಿಸುತ್ತಿದ್ದ. ಹಸಿವು ನೀಗದಿದ್ದರೆ, ಪ್ರಜೆಗಳನ್ನೇ ತಿನ್ನುತ್ತಿದ್ದ. ಈ ಬಗ್ಗೆ ಬ್ರಹ್ಮನಿಗೆ ಚಿಂತೆ ಶುರುವಾಯಿತು. ಇವನು ಹೀಗೆ ತಿನ್ನುತ್ತಿದ್ದರೆ, ಈ ಲೋಕದಲ್ಲಿರುವ ಆಹಾರ ಮತ್ತು ಜನರೆಲ್ಲ ನಾಶವಾಗಿ ಹೋಗುತ್ತಾರೆಂದು ಯೋಚನೆ ಶುರುವಾಯಿತು.
ಒಮ್ಮೆ ಕುಂಭಕರ್ಣ ಇಂದ್ರಾಸನ ಬೇಕೆಂದು ಬೃಹ್ಮನನ್ನು ಕುರಿತು ತಪಸ್ಸು ಮಾಡಿದ. ಇದೇ ಸಮಯಕ್ಕೆ ಸರಸ್ವತಿ ದೇವಿ, ಕುಂಭಕರ್ಣನ ನಾಲಿಗೆಯ ಮೇಲೆ ಕುಳಿತಳು, ಆಗ ಕುಂಭಕರ್ಣ, ಇಂದ್ರಾಸನ ಬೇಡುವ ಜಾಗದಲ್ಲಿ ನಿದ್ರಾಸನ ಕೇಳಿಬಿಟ್ಟ. ಬ್ರಹ್ಮ ತಥಾಸ್ತು ಎಂದ. ಈ ಕಾರಣಕ್ಕೆ ಕುಂಭಕರ್ಣ ಆರು ತಿಂಗಳಿಗೊಮ್ಮೆ ನಿದ್ದೆಯಿಂದ ಎದ್ದು. ಭೂರಿ ಭೋಜನ ತಿಂದು, ಮತ್ತೆ ಆರು ತಿಂಗಳು ಮಲಗುತ್ತಾನೆ.