Friday, November 22, 2024

Latest Posts

ಸಕ್ಕರೆ, ಬೆಲ್ಲ, ಜೇನುತುಪ್ಪ, ಈ ಮೂರರಲ್ಲಿ ಯಾವುದು ಉತ್ತಮ..?

- Advertisement -

Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ ನೀವು ಜೇನುತುಪ್ಪ ಬಳಸುವಾಗ, ಅದು ನಿಜವಾದ ಜೇನುತುಪ್ಪ ಹೌದೋ ಅಲ್ಲವೋ ಅನ್ನುವುದನ್ನು ತಿಳಿದುಕೊಂಡು, ಬಳಸಬೇಕು. ಇತ್ತೀಚೆಗೆ ಕೊಂಚ ಜೇನುತುಪ್ಪಕ್ಕೆ, ಬೆಲ್ಲದ ಪಾಕ ಸೇರಿಸಿ, ಅದನ್ನು ಜೇನುತುಪ್ಪವೆಂದು ಮಾರುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಪ್ಯೂರ್ ಜೇನುತುಪ್ಪವೂ ಕೂಡ ಲಭ್ಯವಿದೆ. ಅಂಥ ಜೇನುತುಪ್ಪ ಬಳಸಿದರೆ, ಆರೋಗ್ಯಕ್ಕೆ ಉತ್ತಮ.

ಇನ್ನು ಎರಡನೇಯ ಸ್ಥಾನದಲ್ಲಿ ಬೆಲ್ಲವಿದೆ. ಬೆಲ್ಲದ ಬಳಕೆ ಮಾಡುವಲ್ಲಿ ಬೆಲ್ಲವನ್ನೇ ಬಳಸಬೇಕಾಗುತ್ತದೆ. ಅಲ್ಲಿ ಜೇನುತುಪ್ಪ ಬಳಸಲು ಸಾಧ್ಯವಿಲ್ಲ. ಉದಾಹರಣೆಗೆ ಹಲವರು ಸಾಂಬಾರ್ ಮಾಡುವಾಗ ಬೆಲ್ಲ ಬಳಸುತ್ತಾರೆ. ಅಂಥ ಸಮಯದಲ್ಲಿ ಒಳ್ಳೆಯ ಬೆಲ್ಲವನ್ನ ಬಳಸಬೇಕು. ಕಪ್ಪು ಬೆಲ್ಲ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಅದರಲ್ಲೂ ಒಳ್ಳೆಯ ಕಪ್ಪು ಬೆಲ್ಲ ಮತ್ತು ಒಳ್ಳೆಯದಲ್ಲದ ಕಪ್ಪು ಬೆಲ್ಲವೂ ಇರುತ್ತದೆ. ಹಾಗಾಗಿ ಒಳ್ಳೆಯ ಕಪ್ಪು ಬೆಲ್ಲವನ್ನೇ ಬಳಸಿ.

ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಕೆಲವು ಕಡೆ ಸಕ್ಕರೆ ಬಳಕೆ ಮಾಡಲೇಬೇಕಾಗುತ್ತದೆ. ಆ ಸಮಯದಲ್ಲಿ ಲಿಮಿಟಿನಲ್ಲಿ ಸಕ್ಕರೆ ಬಳಸಿ.

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

- Advertisement -

Latest Posts

Don't Miss