ಚರ್ಮಕ್ಕೆ ಸಂಬಂಧಿಸಿದ ಹಲವು ತೊಂದರೆಗಳು ಶುರುವಾಗುವುದೇ ಬೇಸಿಗೆ ಕಾಲದಲ್ಲಿ. ತುರಿಕೆ, ಸೆಕೆ ಬೊಕ್ಕೆ, ಮೊಡವೆ ಇತ್ಯಾದಿ ಸಮಸ್ಯೆಗಳು ಎದುರಾಗುವ ಸಮಯವಿದು. ಹಾಗಾಗಿ ಇಂದು ನಾವು ಸಮ್ಮರ್ ಸ್ಪೆಶಲ್‌ನಲ್ಲಿ ಬಿಸಿಲಿನಿಂದ ನಿಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳಲು, ಬ್ಯೂಟಿ ಟಿಪ್ಸ್ ತಂದಿದ್ದೇವೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಸ್ಕಿನ್ ಕ್ಲೆನ್ಸಿಂಗ್. ಅರ್ಧ ಭಾಗ ಟೊಮೆಟೋವನ್ನು ತೆಗೆದುಕೊಂಡು, ಅದರಿಂದ ನಿಮ್ಮ ಮುಖಕ್ಕೆ ಎರಡು ನಿಮಿಷ ಮಸಾಜ್ ಮಾಡಿಕೊಳ್ಳಿ. ಇದು ಬ್ಲೀಚಿಂಗ್‌ನಂತೆಯೂ ಕಾರ್ಯ ನಿರ್ವಹಿಸಿ, ನಿಮ್ಮ ಮುಖದ ಬಣ್ಣವನ್ನ ತಿಳಿಗೊಳಿಸುತ್ತದೆ. ಟೊಮೆಟೋ ಮಸಾಜ್ ಮಾಡಿದ ಬಳಿಕ, ಒಂದು ಕಾಟನ್ ಬಟ್ಟೆ ಅಥವಾ ಕರ್ಚಿಫ್‌ನ್ನು ಬಿಸಿ ನೀರಿನಲ್ಲಿ ಅದ್ದಿ, ಕೊಂಚ ಹಿಂಡಿ, 10 ಸೆಕೆಂಡ್‌ಗಳ ಕಾಲ ಮುಖದ ಮೇಲಿರಿಸಿಕೊಳ್ಳಿ. ನಂತರ ಅದೇ ಬಟ್ಟೆಯಿಂದ ನಿಮ್ಮ ಮುಖವನ್ನು ವರೆಸಿಕೊಳ್ಳಿ.
ಎರಡನೇಯದಾಗಿ ಸ್ಕ್ರಬಿಂಗ್. ನ್ಯಾಚುರಲ್ ಆ್ಯಲೋವೆರಾ ಜೆಲ್ ಮತ್ತು ಒಂದು ಸ್ಪೂನ್ ತರಿ ತರಿಯಾದ ಅಕ್ಕಿ ಹಿಟ್ಟನ್ನ ಸೇರಿಸಿ, ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಎರಡು ನಿಮಿಷವಾದ್ರೂ ಇದರಿಂದ ನೀವು ಮಸಾಜ್ ಮಾಡಿಕೊಳ್ಳಬೇಕು. 15ರಿಂದ 20 ನಿಮಿಷ ಬಿಟ್ಟು, ನಂತರ ಉಗುರು ಬೆಚ್ಚು ನೀರಿನಿಂದ ಮುಖ ತೊಳೆದುಕೊಳ್ಳಿ. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ.

