Saturday, July 27, 2024

Latest Posts

Summer Special: ಹವ್ಯಕ ಶೈಲಿ ತಂಬುಳಿ ರೆಸಿಪಿ: Part 2

- Advertisement -

Recipe: ಬೇಸಿಗೆಯಲ್ಲಿ ಆದಷ್ಟು ನಾವು ದೇಹಕ್ಕೆ ತಂಪು ನೀಡುವ ಆಹಾರವನ್ನೇ ಸೇವಿಸಬೇಕು. ಹಾಗಾಗಿ ನಾವಿಂದು ಹವ್ಯಕ ಶೈಲಿಯ ತಂಬುಳಿ ರೆಸಿಪಿ ಹೇಳಲಿದ್ದೇವೆ.

ಈರುಳ್ಳಿ ತಂಬ್ಳಿ: 1 ಈರುಳ್ಳಿ, ಕೊಬ್ಬರಿ ತುರಿ, ಹಸಿಮೆಣಸು, ಉಪ್ಪು ಕೊಂಚ ಮೊಸರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ, ಬಳಿಕ ಎಷ್ಟು ಬೇಕೋ ಅಷ್ಟು ನೀರು ಮತ್ತು ಮೊಸರು ಸೇರಿಸಿದರೆ ಈರುಳ್ಳಿ ತಂಬ್ಳಿ ರೆಡಿ..

ನುಗ್ಗೆಸೊಪ್ಪಿನ ತಂಬ್ಳಿ: ಕೊಂಚ ನುಗ್ಗೆಸೊಪ್ಪನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ ಒಣಮೆಣಸು ಹುರಿಯಿರಿ. ಈಗ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಉಪ್ಪು, ಮೊಸರು, ಹುರಿದ ಮಿಶ್ರಣ ಸೇರಿಸಿ, ಗ್ರೈಂಡ್ ಮಾಡಿ. ಇದನ್ನು ಪಾತ್ರೆಗೆ ಹಾಕಿ, ಬೇಕಷ್ಟು ಮೊಸರು, ನೀರು ಸೇರಿಸಿ.

ಸಾಂಬಾರ್‌ಬಳ್ಳಿ(ಸಾಂಬ್ರಬಳ್ಳಿ) ತಂಬುಳಿ: ನಾಲ್ಕೈದು ಸಾಂಬ್ರಬಳ್ಳಿ ಎಲೆ ಜೊತೆ, ಕೊಂಚ ಜೀರಿಗೆ ಹಾಕಿ, ತುಪ್ಪದಲ್ಲಿ ಹುರಿದುಕೊಳ್ಳಬೇಕು. ಇದರೊಂದಿಗೆ ಒಣಮೆಣಸನ್ನು ಸಹ ಹುರಿದುಕೊಳ್ಳಬೇಕು. ಬಳಿಕ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಉಪ್ಪು, ಮೊಸರು ಹಾಕಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಪಾತ್ರೆಗೆ ಹಾಕಿ, ಮೊಸರು ನೀರು ಹಾಕಿ ಮಿಕ್ಸ್ ಮಾಡಿದ್ರೆ, ತಂಬ್ಳಿ ರೆಡಿ..

ಈ ತಂಬ್ಳಿಗಳಿಗೆ ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ.

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

- Advertisement -

Latest Posts

Don't Miss