Tuesday, October 22, 2024

Latest Posts

Summer Special: ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ರೆಸಿಪಿ..

- Advertisement -

ನಾವು ಸಮ್ಮರ್ ಸ್ಪೇಶಲ್ನಲ್ಲಿ ಹಲವು ತರಹದ ರೆಸಿಪಿಯನ್ನ ನಿಮಗೆ ಹೇಳಿದ್ದೇವೆ. ಇಂದು ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್‌ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

5ರಿಂದ 6 ದಳ ಕೇಸರಿ, ಎರಡು ಸ್ಪೂನ್ ಕಸ್ಟರ್ಡ್ ಪುಡಿ, ಒಂದು ದೊಡ್ಡ ಬೌಲ್ ಕಾಯಿಸಿದ ಹಾಲು, ನಾಲ್ಕರಿಂದ ಐದು ಸ್ಪೂನ್ ಸಕ್ಕರೆ, ನಾಲ್ಕು ಸ್ಪೂನ್ ಹಾಲಿನ ಕೆನೆ, ಒಂದು ದೊಡ್ಡ ಬೌಲ್ ಸಣ್ಣದಾಗಿ ಕತ್ತರಿಸಿದ, ಬಾಳೆಹಣ್ಣು, ಸೇಬುಹಣ್ಣು, ಪಪ್ಪಾಯಿ ಹಣ್ಣು, ಮಸ್ಕ್‌ ಮೆಲನ್. ಚಿಕ್ಕು ಹಣ್ಣು, ದ್ರಾಕ್ಷಿ ಹಣ್ಣು, ಸೀಸನ್ ಇದ್ದಾಗ ಮಾವಿನ ಹಣ್ಣು. ಇಷ್ಟು ಮಿಕ್ಸ್ ಫ್ರೂಟ್ಸ್. ಸಣ್ಣದಾಗಿ ಕತ್ತರಿಸಿದ ಕಾಜು, ಬಾದಾಮ್, ಪಿಸ್ತಾ, ಒಣದ್ರಾಕ್ಷಿ, ಹಸಿ ಖರ್ಜೂರ, ಅಂಜೂರ, ಅಖ್ರೂಟ್, ಒಣಗಿಸಿದ ಕಲ್ಲಂಗಡಿ ಬೀಜ, ಒಣಗಿಸಿದ ಕುಂಬಳಕಾಯಿ ಬೀಜ. ಸಾಧ್ಯವಾದರೆ ಚೆರ್ರಿ ಹಣ್ಣು ಬಳಸಿ. ಇವಿಷ್ಟು ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್‌ ಮಾಡಲು ಬೇಕಾಗುವ ಸಾಮಗ್ರಿ.

ಮೊದಲು ಎರಡು ಸ್ಪೂನ್ ಹಾಲಿಗೆ ಕೇಸರಿ ದಳ ಹಾಕಿ ನೆನೆಸಿಡಿ. ಈಗ ಫ್ರೂಟ್ಸ್ ಕಟ್ ಮಾಡಿ, ಬೌಲ್‌ಗೆ ಹಾಕಿ ಫ್ರಿಜ್‌ನಲ್ಲಿರಿಸಿ. ಒಂದು ಪಾತ್ರೆಗೆ ಕಾಯಿಸಿದ ಹಾಲು, ಸಕ್ಕರೆ, ಕಸ್ಟರ್ಡ್ ಪುಡಿ ಮತ್ತು ನೆನೆಸಿಟ್ಟುಕೊಂಡ ಕೇಸರಿ ಹಾಲು ಸೇರಿಸಿ, ಕೊಂಚ ಥಿಕ್ ಆಗುವವರೆಗೂ ಕಾಯಿಸಿ. ಹೆಚ್ಚಿಗೆ ಥಿಕ್ ಆದ್ರೆ ಟೇಸ್ಟ್ ಹಾಳಾಗತ್ತೆ. ಹಾಗಾಗಿ ಕ್ರೀಮಿ ಟೆಕ್ಸಚರ್ ಬರುವವರೆಗೂ ಮಾತ್ರ, ಕಾಯಿಸಿ. ಗ್ಯಾಸ್ ಆಫ್ ಮಾಡಿ.

ಈ ಮಿಶ್ರಣವನ್ನು ಆರಲು ಬಿಡಿ. ನಂತರ ಇದನ್ನ ಬಾಕ್ಸ್‌ಗೆ ಹಾಕಿ ಫ್ರಿಜರ್‌ನಲ್ಲಿರಿಸಿ. ಎರಡು ಗಂಟೆ ಬಳಿಕ ಈ ಮಿಶ್ರಣವನ್ನು ಹೊರ ತೆಗೆದು, ಮಿಕ್ಸಿ ಜಾರ್‌ಗೆ ಹಾಕಿ, ಇದರೊಂದಿಗೆ ಹಾಲಿನ ಕೆನೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಮತ್ತೆ ಅದೇ ಬಾಕ್ಸ್‌ನಲ್ಲಿರಿಸಿ ಎರಡು ಗಂಟೆ ಫ್ರೀಜರ್‌ನಲ್ಲಿರಿಸಿ. ಈಗ ರೆಡಿಯಾದ ಕಸ್ಟರ್ಡ್ ಮತ್ತು ಫ್ರೂಟ್ಸ್, ಡ್ರೈಫ್ರೂಟ್ಸ್ ಮಿಕ್ಸ್ ಮಾಡಿದ್ರೆ, ಕೇಸರ್, ಕಸ್ಟರ್ಡ್ ಫ್ರೂಟ್ಸ್ ಸಲಾಡ್‌ ರೆಡಿ. ಇದಕ್ಕೆ ಟೂಟಿ ಫ್ರೂಟಿ, ಚೆರ್ರಿ ಹಣ್ಣಿನಿಂದ ಗಾರ್ನಿಶ್ ಮಾಡಿ, ಸವಿಯಲು ಕೊಡಿ.

- Advertisement -

Latest Posts

Don't Miss