- Advertisement -
Recipe: ಬೇಸಿಗೆಯಲ್ಲಿ ತಂಪು ತಂಪಾದ ಪೇಯ ಕುಡಿಯಬೇಕು ಎನ್ನಿಸಿದರೆ ನೀವು ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಿ ಕುಡಿಯಬಹುದು. ನಾವಿಂದು ನಾರ್ಮಲ್ ಆಗಿರುವ ಕಲ್ಲಂಗಡಿ ಜ್ಯೂಸ್ ಬದಲು, ಮಾಕ್‌ಟೇಲ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣಿನ ಹೋಳು, ನಿಂಬೆರಸ, ಪುದೀನಾ ಎಲೆ ಹಾಕಿ ಜ್ಯೂಸ್ ತಯಾರಿಸಿ. ಒಂದು ಗ್ಲಾಸ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ, ಕೊಂಚ ಸಕ್ಕರೆ ಪುಡಿ ಮತ್ತು ಸೋಡಾ ಮಿಕ್ಸ್ ಮಾಡಿದ್ರೆ, ವಾಟರ್‌ಮೆಲನ್ ಮಾಕ್ಟೇಲ್ ರೆಡಿ. ಇದನ್ನು ನಿಂಬೆಹಣ್ಣು, ಕಲ್ಲಂಗಡಿ ಹಣ್ಣಿನ ಹೋಳು, ಪುದೀನಾ ಎಲೆಯೊಂದಿಗೆ ಗಾರ್ನಿಶ್ ಮಾಡಿ, ಸವಿಯಲು ಕೊಡಿ.
ಇನ್ನೊಂದು ಕಲ್ಲಂಗಡಿ ಹಣ್ಣಿನ ರೆಸಿಪಿ ನೊಡೋದಾಾದ್ರೆ, ಕಲ್ಲಂಗಡಿ ಹೋಳು, ರೋಸ್ ಸಿರಪ್, ಕೊಂಚ ಚಾಟ್ ಮಸಾಲೆ, ಕೊಂಚ ನಿಂಬೆರಸ, ಕೊಂಚ ಉಪ್ಪು, ಬೇಕಾದ್ರೆ ಕೊಂಚ ಸಕ್ಕರೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜ್ಯೂಸ್ ಮಾಡಿ ಸವಿಯಿರಿ.
- Advertisement -