ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಬಾಧಿತ ಯುವತಿಯೊಬ್ಬಳು ಮಾಜಿ ಶಾಸಕ ರಮೇಶ್ ಜಾರಕಿಹೊಳಿ ( Ramesh jarakiholi) 2021ರ ಮಾರ್ಚ್ 26ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ (Cubbon Park Police Station) ದೂರು ನೀಡಿದ್ದಳು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿತ್ತು. ನಂತರ ಶಾಸಕ ರಮೇಶ್ ಜಾರಕಿಹೊಳಿಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಹ ನೀಡಿದರು. ಆರೋಪಿತ ರಮೇಶ್ ಜಾರಕಿಹೊಳಿ ಕೋರಿಕೆಯ ಮೇರೆಗೆ ವಿಶೇಷ ತನಿಖಾ ತಂಡದ ರಚನೆಯನ್ನು ಸಹ ಮಾಡಲಾಗಿತ್ತು. ಈ ಕುರಿತು ಹೈಕೋರ್ಟ್ ನಲ್ಲಿ ಫೆಬ್ರವರಿ 3ರಂದು ಎಸ್ಐಟಿ ತನಿಖಾ ವರದಿ (SIT Investigation Report) ಸಲ್ಲಿಸಲು ಅನುಮತಿ ನೀಡಲಾಗಿತ್ತು. ಹೈಕೋರ್ಟ್ (high court)ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಬಾಧಿತ ಯುವತಿ ಈಗ ಸುಪ್ರೀಂಕೋರ್ಟಿಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಎಸ್ಐಟಿ ತನಿಖಾ ತಂಡದ ರಚನೆ ಅಸಿಂಧು, ಎಸ್ಐಟಿ ತನಿಖೆ ತಂಡದ ಮುಖ್ಯಸ್ಥ ಸೌಮೆಂದು ಮುಖೆರ್ಜೀ ತನಿಖಾ ವರದಿಗೆ ಸಹಿ ಹಾಕಿರಲಿಲ್ಲ. ಈ ಕುರಿತು ವಿಚಾರಣೆ ನಡೆಸಿದಾಗ ತನಗೂ ವರದಿಗೂ ಸಂಬಂಧವಿಲ್ಲದಂತೆ ಹೇಳಿಕೆ ನೀಡಿದ್ದಾರೆ, ನಂತರ ಅದೇ ವರದಿಯನ್ನು ಅನುಮೋದಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.ಈ ಎಲ್ಲಾ ಬೆಳವಣಿಗೆಯು ಅನುಮಾನವನ್ನು ಉಂಟುಮಾಡಿದ್ದು, ಎಸ್ಐಟಿ ತಂಡದ ರಚನೆ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ. ಎಸ್ಐಟಿ ತಂಡದ ರಚನೆ ಅಸಿಂಧು ಆದರೆ ತನಿಖಾ ವರದಿಯ ಸಹ ಅಸಿಂಧು ಕೊಳ್ಳುತ್ತದೆ ಎಂದು ಹೈಕೋರ್ಟ್ ನ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕೆಂದು ಯುವತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಳೆ.