Thursday, July 23, 2026

karnataka newz

ಕಾನೂನು ಸಮರಕ್ಕೆ ರೆಡಿಯಾದ ಕಾಂಗ್ರೆಸ್..!

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆ ನೀಡಿರೋ ಕಾಂಗ್ರೆಸ್-ಜೆಡಿಎಸ್ ಶಾಸಕರ ವಿರುದ್ಧ ಕಾನೂನು ಸಮರಕ್ಕೆ ಕಾಂಗ್ರೆಸ್ ಮುಂದಾಗಿದೆ. ದೋಸ್ತಿಗೆ ಟಾಟಾ ಹೇಳಿ ಬಿಜೆಪಿ ಹೊಸ್ತಿಲಲ್ಲಿ ನಿಂತಿರೋ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರ ವಿರುದ್ಧ ಇದೀಗ ಕಾಂಗ್ರೆಸ್ ಕಾನೂನು ಸಮರ ಸಾರಿದ್ದು, ನಾಲ್ಕೈದು ಶಾಸಕರ ಅನರ್ಹತೆಗೆ ದೂರು ನೀಡಲು ನಿರ್ಧರಿಸಿದೆ. ರಾಜೀನಾಮೆ ನೀಡಿ ಮುಂಬೈ...

ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಸಚಿವರುಗಳ ಸಾಮೂಹಿಕ ರಾಜೀನಾಮೆ ಪಡೆಯೋ ಮೂಲಕ ಸಚಿವ ಸಂಪುಟ ಪುನಾರಚಿಸಿ ಅತೃಪ್ತರನ್ನು ಒಲಿಸಿಕೊಳ್ಳೋ ದೋಸ್ತಿಗಳ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸಿಎಂ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ. ರಾಜಕೀಯ ಚದುರಂಗದಾಟದಲ್ಲಿ ಮುಳುಗಿಹೋಗಿರೋ ರಾಜ್ಯ ರಾಜಕಾರಣಿಗಳ ಒಂದೊಂದೂ ನಡೆ ಒಂದೊಂದು ರೀತಿಯ ತಿರುವು ಪಡೆದುಕೊಳ್ತಿದೆ. ಸಚಿವರುಗಳ ರಾಜೀನಾಮೆ...

‘ನಾಗೇಶ್ ಕೈ ಕೊಡ್ತಾರೆ ಅಂತ ನನಗೆ ಮೊದಲೇ ಗೊತ್ತಿತ್ತು’- ಮಾಜಿ ಸಂಸದ ಮುನಿಯಪ್ಪ

ಬೆಂಗಳೂರು: ಪಕ್ಷೇತರ ಶಾಸಕ ಎಚ್.ನಾಗೇಶ್ ರನ್ನು ನಂಬಬೇಡಿ ಅಂತ ನಾನು ಕಾಂಗ್ರೆಸ್ ನಾಯಕರಿಗೆ ಮೊದಲೇ ಹೇಳಿದ್ದೆ. ಆದ್ರೆ ಇವತ್ತು ಅವರೇ ರಾಜೀನಾಮೆ ನೀಡಿ ಹೋಗಿದ್ದಾರೆ ಅಂತ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ, ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡಿರೋ ವಿಚಾರವಾಗಿ...

ಬರಿಗಾಲಿನಲ್ಲಿ ಓಡಾಡುತ್ತಿರುವ ಸಚಿವ ಎಚ್.ಡಿ.ರೇವಣ್ಣ..!

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿರೋ ಮಧ್ಯೆ ಸಚಿವ ಎಚ್.ಡಿ ರೇವಣ್ಣ ಬರಿಗಾಲಿನಲ್ಲಿ ಓಡಾಡುತ್ತಿರೋದು ಕಂಡುಬಂದಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ. ನಿಂಬೆಹಣ್ಣುಗಳನ್ನು ಕೈಲಿಡಿದುಕೊಂಡು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಸಚಿವ ಎಚ್.ಡಿ ರೇವಣ್ಣ ಟೀಕೆಗೆ ಗುರಿಯಾಗಿದ್ರು. ಇದೀಗ ರೇವಣ್ಣ ಮತ್ತೆ ಇಂಥಾದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಹೌದು, ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆದ್ದಿರೋ ಮಧ್ಯೆ ರೇವಣ್ಣ ನಿನ್ನೆಯಿಂದಲೂ ಬರಿಗಾಲಿನಲ್ಲಿ ಓಡಾಡುತ್ತಿರೋದು ಕಂಡುಬಂದಿದೆ. ಇಂದು...

‘ಮಂತ್ರಿಗಿರಿ ಕೊಡ್ತೀವಿ, ಬಿಜೆಪಿ ಮಾತ್ರ ಸೇರಬೇಡಿ’- ಅತೃಪ್ತರಲ್ಲಿ ಸಿದ್ದು ಮನವಿ

ಬೆಂಗಳೂರು: ಮೈತ್ರಿ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ದೋಸ್ತಿಗಳನ್ನು ಪೇಚಾಟಕ್ಕೆ ಸಿಲುಕಿಸಿರೋ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರ್ಜರಿ ಆಫರ್ ನೀಡಿದ್ದಾರೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ನಿಮಗೆ ಸಚಿವ ಸ್ಥಾನ ನೀಡ್ತೇವೆ ಅಂತ ಅತೃಪ್ತರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಶಾಸಕರು ಮತ್ತು ಸಚಿವರುಗಳಿಗೆ ಉಪಹಾರಕೂಟದ ಹೆಸರಿನಲ್ಲಿ ಆಹ್ವಾನಿಸಿ ಅವರಿಂದ ಸಾಮೂಹಿಕ ರಾಜೀನಾಮೆ...

ರೆಸಾರ್ಟ್ ಸೇರಲಿರುವ ಜೆಡಿಎಸ್ ಶಾಸಕರು..!

ಮಡಿಕೇರಿ: ರಾಜ್ಯದಲ್ಲಿ ನಡೆಯುತ್ತಿರೋ ರಾಜಕೀಯ ಮೇಲಾಟಗಳಿಂದ ದೋಸ್ತಿ ನಾಯಕರು ಹೈರಾಣಾಗಿದ್ದಾರೆ. ಇದೀಗ ನಿಷ್ಠಾವಂತರನ್ನು ತಮ್ಮ ಬಳಿಯೇ ಉಳಿಸಿಕೊಳ್ಳೋದಕ್ಕೆ ಜೆಡಿಎಸ್ ಮುಂದಾಗಿದ್ದು ತನ್ನ ಶಾಸಕರಿಗಾಗಿ ರೆಸಾರ್ಟ್ ನಿಗದಿಪಡಿಸಿದ್ದು, ಈಗಾಗಲೇ ರೂಂಗಳನ್ನು ಕೂಡ ಬುಕ್ ಮಾಡಿದೆ. ತೆರೆ ಮರೆಯಲ್ಲಿ ಬಿಜೆಪಿ ನೆಡೆಸ್ತಿರೋ ಆಪರೇಷನ್ ಕಮಲಕ್ಕೆ ಬೆದರಿದ ಮೈತ್ರಿ ನಾಯಕರು ಇದೀಗ ತಮ್ಮ ಬಳಿಯಿರೋ ಶಾಸಕರನ್ನು ಬಿಜೆಪಿ ಕೈಗೆ ಸಿಗದಂತೆ...

‘ನನ್ನ ಕ್ಷೇತ್ರಕ್ಕೆ ನೀರು ಬಿಡಿ- ಇಲ್ಲದಿದ್ರೆ ರಾಜೀನಾಮೆ ಕೊಡ್ತೀನಿ’- ಕೈ ಶಾಸಕ ಎಚ್ಚರಿಕೆ

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಜೋರಾಗಿ ನಡೆಯುತ್ತಿರೋ ಮಧ್ಯೆಯೇ ಕೈ ಶಾಸಕ ತನ್ನ ಕ್ಷೇತ್ರಕ್ಕೆ ನೀರು ಬಿಡದಿದ್ರೆ ತಾವು ರಾಜೀನಾಮೆ ಕೊಡುವುದಾಗಿ ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಮ್ಮ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ನೀರು ಹರಿಬಿಡದಿದ್ದರೆ ನಾನು ಖಂಡಿತ ರಾಜೀನಾಮೆ ನೀಡುತ್ತೇನೆ ಅಂತ ಕಾಂಗ್ರೆಸ್ ನಾಯಕರಿಗೆ...

ಸೇತುವೆ ಮೇಲಿಂದ ರಾಜಕಾಲುವೆಗೆ ಬಿದ್ದ ಬಸ್- 29 ಮಂದಿ ಸ್ಥಳದಲ್ಲೇ ಸಾವು..!

ಉತ್ತರಪ್ರದೇಶ: ಸೇತುವೆ ಮೇಲಿನಿಂದ ರಾಜಕಾಲುವೆಗೆ ಬಸ್ ಉರುಳಿಬಿದ್ದ ಪರಿಣಾಮ 29 ಮಂದಿ ಪ್ರಯಾಣಿಕರು ಸಾವನ್ನಪ್ಪಿ 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯೊಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಲಖ್ನೌನಿಂದ ದೆಹಲಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಇಟ್ಮಾಡ್ಪುರ್ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ರಾಜಕಾಲುವೆಗೆ ಬಿದ್ದುಬಿಟ್ಟಿದೆ. ಪರಿಣಾಮ ಬಸ್ ನಲ್ಲಿದ್ದ 50 ಮಂದಿ...

ಕಾಂಗ್ರೆಸ್ ನ ಎಲ್ಲಾ ಸಚಿವರ ಸಾಮೂಹಿಕ ರಾಜೀನಾಮೆ..!

ಬೆಂಗಳೂರು: ಉಪಹಾರ ಕೂಟ ಏರ್ಪಡಿಸಿದ ಕಾಂಗ್ರೆಸ್ ನಾಯಕರು ಇದೀಗ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಚಿವರ ರಾಜೀನಾಮೆ ಪಡೆದಿದೆ. ಸರ್ಕಾರದಲ್ಲಿ ಕೋಲಾಹಲ ಎಬ್ಬಿಸಿ ಬಿಜೆಪಿ ಹೊಸ್ತಿಲಲ್ಲಿ ನಿಂತಿರೋ 14 ಮಂದಿ ಶಾಸಕರನ್ನು ಮತ್ತೆ ಕರೆತರೋದಕ್ಕೆ ಕಾಂಗ್ರೆಸ್ ನಾಯಕರು ಹಾಲಿ ಸಚಿವರ ಸಾಮೂಹಿಕ ರಾಜೀನಾಮೆ ಪಡೆದಿದ್ದಾರೆ. ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಏರ್ಪಡಿಸಲಾಗಿರುವ ಉಪಹಾರ ಕೂಟದಲ್ಲಿ ಭಾಗಿಯಾದ ಕಾಂಗ್ರೆಸ್...

ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್- ಸಚಿವ ಎಚ್.ನಾಗೇಶ್ ರಾಜೀನಾಮೆ..!

ಬೆಂಗಳೂರು: ಆಪರೇಷನ್ ಕಮಲದ ಭೀತಿಯಿಂದ ಪಕ್ಷೇತರ ಶಾಸಕರಾಗಿದ್ದ ಎಚ್. ನಾಗೇಶ್ ರನ್ನು ಸೆಳೆದು ಮಂತ್ರಿಗಿರಿ ನೀಡಿದ ದೋಸ್ತಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಇದೀಗ ಎಚ್.ನಾಗೇಶ್ ದೋಸ್ತಿಗಳಿಗೆ ಗುಡ್ ಬೈ ಹೇಳಿದ್ದಾರೆ. ಪಕ್ಷೇತರರಿಗೆ ಮಂತ್ರಿಗಿರಿ ನೀಡೋ ಮೂಲಕ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ದೋಸ್ತಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಣ್ಣ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img