Sports News: ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ನಮನ್ ಓಜಾ ತಂದೆ ವಿನಯ್ ಓಜಾ, ಬ್ಯಾಂಕ್ ಹಣ ದುರುಪಯೋಗಪಡಿಸಿಕೊಂಡ ಕೇಸ್ ಅಡಿಯಲ್ಲಿ, ಶಿಕ್ಷೆ ಪ್ರಕಟಗೊಳಿಸಲಾಗಿದೆ.
https://youtu.be/89GKIiwt9kk?si=Y9yGdPOSDXsEpj4I
ಬ್ಯಾಂಕ್ ಆಫ್ ಮಹಾರಾಷ್ಟ್ರದ ಒಂದು ಬ್ರ್ಯಾಂಚ್ ಮಧ್ಯಪ್ರದೇಶದ ಜೋಲಖೇಡ್ ಎಂಬ ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಬ್ಯಾಂಕ್ನಲ್ಲಿ ವಿನಯ್...
Web Story: ಸಂಬಂಧಿಕರು, ಸ್ನೇಹಿತರು ಯಾರದ್ದಾದರೂ ಮದುವೆ ಇದ್ದಾಗ, ಏನಾದರೂ ಉಡುಗೊರೆ ನೀಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಯಾವ ಉಡುಗೊರೆ ನೀಡಬೇಕು ಎಂಬ ಕಳವಳವಿರುತ್ತದೆ. ಹಾಗಾಗಿ ನಾವಿಂದು ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು ಎಂದು ವಿವರಿಸಲಿದ್ದೇವೆ.
ನೀವು ಪಾತ್ರೆ ಸಾಮಾನು, ಬಟ್ಟೆ, ಬ್ಯಾಗ್ ಸೇರಿ ಉಪಯುಕ್ತ ವಸ್ತು ಕೊಟ್ಟಾಗ, ಅದರಿಂದ ಅವರಿಗೆ ಸಹಾಯವಾಗಬಹುದು. ಆದರೆ...
Political News: ನಂದಿನಿ ಬ್ರ್ಯಾಂಡ್ನ ದೋಸೆ, ಇಡ್ಲಿ ಪ್ರಿಮಿಕ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಂದು ಸಿಎಂ ಸಿದ್ದರಾಮಯ್ಯ ಇಡ್ಲಿ, ದೋಸೆ ರೆಡಿಮಮೇಡ್ ಹಿಟ್ಟನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ, ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ,...
Dharwad News: ಧಾರವಾಡ: ಮುತ್ತೂಟ್ ಫೈನಾನ್ಸ್‌ನಲ್ಲಿ ಚಿನ್ನ ಅಡವಿಟ್ಟು, ಅದರಿಂದ ಸಿಗುವ ಹಣವನ್ನು ತಮ್ಮ ಕಷ್ಟಕಾಲಕ್ಕೆ ಬಳಸುವ ಜನ ಹಲವರಿದ್ದಾರೆ. ಆದರೆ ನೀವು ಇನ್ನು ಮುಂದೆ ಮುತ್ತೂಟ್ ಫೈನಾನ್ಸ್‌ನಲ್ಲಿ ಆಭರಣವನ್ನು ಅಡವಿಡುವಾಗ ಎಚ್ಚರಿಕೆಯಿಂದ ಇರಬೇಕು.
ಏಕೆಂದರೆ, ಧಾರವಾಡದ ಟಿಪ್ಪು ಸರ್ಕಲ್ ಬಳಿ ಇರುವ ಮುತ್ತೂಟ್ ಫೈನಾನ್ಸ್‌ನಲ್ಲಿ ಗೋಡೆಯೇ ಎದ್ದು ಹೊಲ ಮೇಯ್ದಂತಾಗಿದೆ. ಏಕೆಂದರೆ ಇಲ್ಲಿನ ಮ್ಯಾನೇಜರ್...
Dharwad News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ9 ಆರೋಪಿ ಧನರಾಜ್ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ರಾತ್ರಿ ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಆರೋಪಿ ಎಲೆಕ್ಟ್ರಿಕಲ್ ಮೆಗ್ಗರ್ ಡಿವೈಸ್ ಪೂರೈಕೆ ಮಾಡಿದ್ದ ಆರೋಪ ಇವರ ಮೇಲೆ ಬಂದಿತ್ತು. ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ...
Haveri News: ಹಾವೇರಿ: ಬೆಂಗಳೂರಿನ ನೆಲಮಂಗಲದ ಬಳಿ ಕಾರಿನ ಮೇಲೆ ಕಂಟೇನರ್ ಬಿದ್ದು ಒಂದೇ ಕುಟುಂಬರ್ ಆರು ಜನರು ಮೃತಪಟ್ಟಿರುವ ಭೀಕರ ದುರಂತ ಮಾಸುವ ಮುನ್ನವೇ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಎರಡು ಕಾರುಗಳ ಮಧ್ಯೆ ಭೀಕರ ರೆಸ್ತ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ...
Hubli News: ಹುಬ್ಬಳ್ಳಿ: ಸುಳ್ಳಿನ ತರಬೇತಿಗೆಂದೇ ಬಿಜೆಪಿ ಯಲ್ಲಿ ಪ್ರತ್ಯೇಕ ಕೇಂದ್ರವಿದೆ. ಬಿಜೆಪಿ ಅವರಿಗೆ ಸುಳ್ಳು ಹೇಳಲು ಒಂದು ಕ್ಲಾಸ್ ಇದೆ. ಸುಳ್ಳು ಹೇಳುವ ಟ್ರೈನಿಂಗ್ ಕೊಡಲು ಒಂದು ಇನ್ಸ್ಟಿಟ್ಯೂಟ್ ಇದೆ. ಆ ಇನ್ಸ್ಟಿಟ್ಯೂಟ್ ನಲ್ಲಿ ಕಲಿತು ಬಂದ ಗಿರಾಕಿ ಸಿಟಿ ರವಿ. ಆ ಇನ್ಸ್ಟಿಟ್ಯೂಟ್ ಆರ್ ಎಸ್ ಎಸ್ ಒಂದು ಬ್ರಾಂಚ್. ಅದು...
Sandalwood News: ನಟ ಶಿವರಾಜ್‌ಕುಮಾರ್ ವಿದೇಶಕ್ಕೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು, ಶಿವಣ್ಣನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಾ. ಶಿವರಾಜ್‌ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸುಸಂವಾದವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ.
https://youtu.be/89GKIiwt9kk?si=Y9yGdPOSDXsEpj4I
ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಅವರ...
sandalwood News: ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು, ಅವರು ಚಿಕಿತ್ಸೆ ಪಡೆದು ಹುಷಾರಾಗಿ ಮನೆಗೆ ಮರಳಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೂಡ, ಶಿವರಾಜ್‌ಕುಮಾರ್ ಅವರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಸಿಎಂ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ...
Hubli News: ಹುಬ್ಬಳ್ಳಿ: ನೂತನವಾದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯನ್ನು ಗೃಹ ಸಚಿವ ಜಿ. ಪರಮೇಶ್ವರ ಅವರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ...
Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ...