Tuesday, February 24, 2026

karnatakatv live

ರೈಲುಗಳಲ್ಲಿ ನಕಲಿ ನೀರು ಮಾರಾಟ- 800 ಜನರ ಬಂಧನ

ನವದೆಹಲಿ: ಇನ್ನು ಮುಂದೆ ರೈಲುಗಳಲ್ಲಿ ಪ್ರಯಾಣ ಮಾಡೋವಾಗ ಬಾಟಲಿ ನೀರುಗಳನ್ನು ಕೊಂಡುಕೊಳ್ಳೋ ಮುನ್ನ ಎಚ್ಚರದಿಂದಿರಿ. ಯಾಕಂದ್ರೆ ದೇಶಾದ್ಯಂತ ರೈಲುಗಳಲ್ಲಿ ನಕಲಿ ನೀರು ಬಾಟಲಿಗಳ ಮಾರಾಟ ಜಾಲ ಬೆಳಕಿಗೆ ಬಂದಿದ್ದು, ಸುಮಾರು 800 ಮಂದಿಯನ್ನು ಬಂಧಿಸಲಾಗಿದೆ. ರೈಲುಗಳಲ್ಲಿ ನೀರು ಬಾಟಲಿಗಳಿಗೆ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ರೈಲ್ವೇ...

ಐಸಿಸಿ ವಿಶ್ವಕಪ್- ಭಾರತಕ್ಕೆ 240 ರನ್ ಗುರಿ ನೀಡಿದ ನ್ಯೂಜಿಲೆಂಡ್

ಇಂಗ್ಲೆಂಡ್: ಟೀಂ ಇಂಡಿಯಾ- ನ್ಯೂಜಿಲೆಂಡ್ ನಡುವಿನ ಏಕ ದಿನ ವಿಶ್ವಕಪ್ ನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ಇದೀಗ ಕ್ಲೈಮಾಕ್ಸ್ ತಲುಪಿದೆ. ಇಂದು ಇನ್ನಿಂಗ್ಸ್ ಪೂರೈಸಿರೋ ನ್ಯೂಜಿಲೆಂಡ್ ತಂಡ ಭಾರತಕ್ಕೆ 240 ರನ್ ಗಳ ಗುರಿ ನೀಡಿದೆ. ನಿನ್ನೆ ಮಂಗಳವಾರ ಮಳೆಯಿಂದಾಗಿ ನ್ಯೂಜಿಲೆಂಡ್-ಭಾರತ ನಡುವಿನ ಪಂದ್ಯ ಸ್ಥಗಿತಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್...

ಕೈ ಚೆಲ್ಲಿದ ರಾಜ್ಯಪಾಲರು- ಬಿಜೆಪಿ ನಿಯೋಗಕ್ಕೆ ಹಿನ್ನಡೆ..!

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅತೃಪ್ತರ ರಾಜೀನಾಮೆಯನ್ನು ಊರ್ಜಿತ ಗೊಳಿಸಿ ಬಿಜೆಪಿಗೆ ಸರ್ಕಾರ ರಚಿಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿ ನಿಯೋಗಕ್ಕೆ ಹಿನ್ನಡೆಯಾಗಿದೆ. ಶಾಸಕರ ರಾಜೀನಾಮೆ ಅಂಗೀಕಾರ ವಿಚಾರವಾಗಿ ವಿಧಾನಸಭಾ ಸ್ವೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿದ್ದಾರೆ ಈ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಶಾಸಕರ ರಾಜೀನಾಮೆಯನ್ನು...

ಸಚಿವ ಡಿಕೆಶಿ ಮುಂಬೈ ಪೊಲೀಸರ ವಶಕ್ಕೆ..!

ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿದೇ ತೀರುತ್ತೇನೆ ಅಂತ ಪಟ್ಟು ಹಿಡಿದು ರಿನೈಸೆನ್ಸ್ ಹೋಟೆಲ್ ಮುಂಭಾಗ ಕುಳಿತಿದ್ದ ಸಚಿವ ಡಿ.ಕೆ ಶಿವಕುಮಾರ್ ರನ್ನು ಇದೀಗ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದಲೂ ಮುಂಬೈನ ರಿನೈಸೆನ್ಸ್ ಹೋಟೆಲ್ ಮುಂಭಾಗ ಇತರೆ ಶಾಸಕರೊಂದಿಗೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆಶಿಯವರನ್ನು ಮುಂಬೈ...

ನಿಂಬೆಹಣ್ಣು ಹಿಡಿದು ಸಚಿವ ರೇವಣ್ಣ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಯಕರ್ತರು..!

ಮಂಡ್ಯ: ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಕೈಹಾಕಿದ್ದಾರೆ ಅಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ಡಿಸಿ ಮೂಲಕ ದೂರು ನೀಡಿದ್ದಾರೆ. ರಾಜ್ಯದಲ್ಲಿ ಬರ ಆವರಿಸಿ, ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದು, ಇಂಥಹ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಎಚ್.ಡಿ ರೇವಣ್ಣ ವರ್ಗಾವಣೆ ದಂಧೆ ನಡೆಸೋ ಮೂಲಕ ಅಧಿಕಾರ ದುರ್ಬಳಕೆ...

‘ಅತೃಪ್ತರು ಮುಂಬೈ ಹೋಗಲು ನಾನು ಕಾರಣ ಅಲ್ಲ- ಸಿಎಂ ಮೇಲೆ ಅವರ ಸಿಟ್ಟು’- ಗುಲಾಂ ನಬಿ ಆಜಾದ್ ಗೆ ಸಿದ್ದು ಉತ್ತರ..!

ಬೆಂಗಳೂರು: ರಾಜ್ಯ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಬೆಂಗಳೂರಿಗೆ ಆಗಮಿಸಿರೋ ಎಐಸಿಸಿ ವರಿಷ್ಠ ಗುಲಾಂ ನಬಿ ಆಜಾದ್ ಶಾಸಕರ ಅತೃಪ್ತಿ ಕುರಿತಾಗಿ ರಾಜ್ಯ ನಾಯಕರೊಂದಿಗೆ ಇಡೀ ರಾತ್ರಿ ಚರ್ಚಿಸಿದ್ರು. ಈ ವೇಳೆ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿ ಮೇಲಿನ ಸಿಟ್ಟಿನಿಂದಾಗಿ ಸಮಸ್ಯೆ ಎದುರಾಗಿದೆ ಅಂತ ವರಿಷ್ಠರಿಗೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಕಗ್ಗಂಟಾಗುತ್ತಿರೋ ರಾಜಕೀಯ ಬಿಕ್ಕಟ್ಟು...

‘ಸಿಎಂಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜೀನಾಮೆ ಕೊಡಲಿ’- ಮಾಜಿ ಸಿಎಂ ಬಿಎಸ್ವೈ

ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಂಡಿದ್ದು ಕೂಡಲೇ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಯಡಿಯೂರಪ್ಪ, ಅತೃಪ್ತ ಶಾಸಕರ ಹಕ್ಕನ್ನು ಕಸಿದುಕೊಂಡು ಸರ್ಕಾರ ಅವರ ಮೇಲೆ ದಬ್ಬಾಳಿಕೆ...

ರಸ್ತೆಯಲ್ಲೇ ನಿಂತು ಟಿಫನ್ ಮಾಡಿದ ಡಿಕೆಶಿ..!

ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿ ಹೇಗಾದ್ರೂ ಮನವೊಲಿಸ್ತೀನಿ ಅಂತ ಹುಮ್ಮಸ್ಸಿನಿಂದ ಬೆಂಗಳೂರಿನಿಂದ ಹೊರಟ ಸಚಿವ ಡಿ.ಕೆ ಶಿವಕುಮಾರ್ ಗೆ ಶಾಸಕರು ತಂಗಿರೋ ಹೋಟೆಲ್ ಗೆ ಎಂಟ್ರಿ ಸಿಗದ ಪರಿಣಾಮ ಇದೀಗ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ. ಅಲ್ಲದೆ ರಸ್ತೆಯಲ್ಲೇ ನಿಂತು ಬೆಳಗಿನ ಉಪಹಾರ ಕೂಡ ಸೇವಿಸಿದ್ರು. ತನ್ನ ಗ್ಯಾಂಗ್ ಕಟ್ಟಿಕೊಂಡು ಅತೃಪ್ತರನ್ನು ಭೇಟಿಯಾಗಿ...

ಸ್ಪೀಕರ್ ಏಟಿಗೆ ಅತೃಪ್ತರ ಎದಿರೇಟು- ಸುಪ್ರೀಂಕೋರ್ಟ್ ಮೊರೆಹೋದ ಶಾಸಕರು..!

ಮುಂಬೈ: ರಾಜೀನಾಮೆ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಅಂತ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು ಮುಂಬೈನಿಂದ ಸುಪ್ರೀಂ ಕೋರ್ಟ್ ತಲುಪಿದೆ. ರಾಜೀನಾಮೆ ನೀಡಿದ ಹೊರತಾಗಿಯೂ ಅದನ್ನು ಅಂಗೀಕಾರಿಸೋದಕ್ಕೆ ಸ್ಪೀಕರ್ ಇಲ್ಲ ಸಲ್ಲದ ಕಾರಣ ನೀಡಿ ವಿಳಂಬ...

ನಾಳೆ ಮುಂಬೈಗೆ ಹಾರಲಿರುವ ಟ್ರಬಲ್ ಶೂಟರ್ ಡಿಕೆಶಿ..!

ಬೆಂಗಳೂರು: ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಮುಂಬೈ ಸೇರಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಲು ನಾಳೆ ಕಾಂಗ್ರೆಸ್ ನ ಟ್ರಬಲ್ ಶೂಟರ್ ಸಚಿವ ಡಿಕೆಶಿ ಭೇಟಿ ಮಾಡಲಿದ್ದಾರೆ. ಅತೃಪ್ತರ ಶಾಸಕರಿಗೆ ಸಿದ್ದರಾಮಯ್ಯ ರಾಜೀನಾಮೆ ಹಿಂಪಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೆ ಕಾಂಗ್ರೆಸ್ ಅತೃಪ್ತರ ಮನವೊಲಿಕೆಗೆ ಮುಂದಾಗಿದೆ. ಈ ನಿಟ್ಚಿನಲ್ಲಿ ಸಭೆ...
- Advertisement -spot_img

Latest News

ಹೊರಾಸಿಯೊ ಸೈಕ್ಲೋನ್ ಅಬ್ಬರಕ್ಕೆ ರಾಜ್ಯದಲ್ಲಿ ವರುಣನ ಆರ್ಭಟ!

ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...
- Advertisement -spot_img