ಬೆಂಗಳೂರು: ಅತೃಪ್ತ ಶಾಸಕರ ವಿಪ್ ಉಲ್ಲಂಘನೆ ವಿಚಾರವಾಗಿ ನಿರ್ಧಾರ ಕೈಗೊಳ್ಳುವವರೆಗೂ ವಿಶ್ವಾಸಮತ ಯಾಚನೆ ಪ್ರಸ್ತಾಪ ಮುಂದೂಡಿಕೆ ಮಾಡಿ ಅನ್ನೋ ದೋಸ್ತಿ ಮನವಿಗೆ ಬಿಜೆಪಿ ಸಿಡಿದೆದ್ದಿದೆ. ಇಂದೇ ವಿಶ್ವಾಸಮತ ಯಾಚನೆಯಾಗಬೇಕು ಅಂತ ಪಟ್ಟು ಹಿಡಿದಿರೋ ಬಿಜೆಪಿ, ಇದೀಗ ರಾಜ್ಯಪಾಲರ ಮೊರೆ ಹೋಗಿದೆ.
ಇವತ್ತು ವಿಶ್ವಾಸಮತ ಯಾಚನೆಯಲ್ಲಿ ದೋಸ್ತಿಗಳಿಗೆ ಹಿನ್ನಡೆ ಫಿಕ್ಸ್ ಅಂತ ಬೀಗುತ್ತಿದ್ದ ಬಿಜೆಪಿ ಕನಸಿಗೆ ತಣ್ಣೀರೆರಚಿದಂತಾಗಿದೆ. ಇಂದು ವಿಶ್ವಾಸಮತ ಯಾಚನೆ ಕುರಿತಾಗಿ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕರು, ವಿಪ್ ಉಲ್ಲಂಘನೆ ಮಾಡಿದ ಶಾಸಕರ ಕುರಿತಾಗಿ ಇತ್ಯಾರ್ಥವಾಗುವವರೆಗೂ ವಿಶ್ವಾಸಮತ ಯಾಚನೆ ಮಾಡೋದು ಅಷ್ಟು ಸಮಂಜಸವಲ್ಲ ಅಂತ ಸ್ಪೀಕರ್ ರಮೇಶ್ ಕುಮಾರ್ ರವರಲ್ಲಿ ಮನವಿ ಮಾಡಿದ್ರು. ಹೀಗೆ ಆದ್ರೆ ಪರಿಸ್ಥಿತಿ ಕೈಮೀರಿ ಹೋಗುತ್ತೆ ಅನ್ನೋದನ್ನು ಅರಿತ ಬಿಜೆಪಿ ಇದೀಗ ರಾಜ್ಯಪಾಲರ ಮೊರೆ ಹೋಗಿದೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ಇಂದೇ ವಿಶ್ವಾಸಮತ ಯಾಚನೆಯಾಗಬೇಕು, ಹೀಗಾಗಿ ತಾವು ಮಧ್ಯ ಪ್ರವೇಶಿಸಬೇಕು ಅಂತ ಮನವಿ ಮಾಡಿದೆ.
ಇನ್ನು ಬಿಜೆಪಿ ನಿಯೋಗದ ಮನವಿ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರು ತಮ್ಮ ವಿಶೇಷಾಧಿಕಾರಿಯನ್ನು ಸ್ಪೀಕರ್ ಭೇಟಿ ಮಾಡುವಂತೆ ಕಳುಹಿಸಿಕೊಟ್ಟಿದೆ. ಇನ್ನು ಸಾಕಷ್ಟು ಗದ್ದಲವೆದ್ದಿದ್ದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಿಕೆ ಮಾಡಿರುವ ಸ್ಪೀಕರ್ ರಾಜ್ಯಪಾಲರ ವಿಶೇಷಾಧಿಕಾರಿಯನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ಹಿಂಪಡೆಯೋಕೆ ಕಾರಣವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ