ರಿಲ್ಯಾಕ್ಸ್ ಮೋಡ್ ನಲ್ಲಿ ಬ್ಲೂ ಬಾಯ್ಸ್

ಲಂಡನ್: ಏಕದಿನ ವಿಶ್ವಕಪ್ ಮಹಾ ಸಮರ ಆರಂಭವಾಗಿ ಎರಡು ದಿನ ಕಳೆದಿದೆ. ಇದುವರೆಗು ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ  ದಕ್ಷಿಣ ಆಫ್ರಿಕಾ ವಿರುದ್ದ ಇಂಗ್ಲೆಂಡ್ ಗೆಲುವು ದಾಖಲಿಸಿದ್ರೆ. ನಿನ್ನೆ ನಡೆದ ಎರಡನೇಯ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ದಾಖಲಿಸಿದೆ.  ಮೇ 5ರಂದು ನಡೆಯಲಿರೋ ವಿಶ್ವಕಪ್ ಟೂರ್ನಿಯ ಮೊದಲ ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಹೆದರಿಸುತ್ತಿದ್ದು, ಸದ್ಯ ಬ್ಲೂ ಬಾಯ್ಸ್ ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾರೆ.

ಭಾರತ ಕ್ರಿಕೆಟ್​​ ತಂಡದ ಪ್ರಮುಖ ಆಟಗಾರರರಾದ ಮಹೇಂದ್ರ ಸಿಂಗ್​ ಧೋನಿ, ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮ ಹಾಗೂ ತಂಡದ ಇತರೆ ಆಟಗಾರರು ಇತ್ತೀಚಿಗೆ ಲಂಡನ್ ಸಮೀಪದಲ್ಲಿರುವ ಕಾಡಿನಲ್ಲಿ ವಿಹರಿಸಿದ್ರು. ಅಲ್ಲದೆ ವಿವಿಧ ಸಫಾರಿಗಳಿಗೆ ವಿಸಿಟ್ ಕೊಟ್ಟು ಎಂಜಾಯ್ ಮಾಡಿದ್ರು.ಸದ್ಯ ಈ ಪೋಟೋಗಳನ್ನ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಮಹೇಂದ್ರ ಸಿಂಗ್​ ಧೋನಿ, ಕುಲ್​ದೀಪ್​​ ಯಾದವ್​, ಯಜುವೇಂದ್ರ ಚಹಾಲ್​​, ವಿಜಯ​ ಶಂಕರ್​​​​​​, ಹಾರ್ದಿಕ್​​ ಪಾಂಡ್ಯ ಮತ್ತು ಶಿಖರ್​ ಧವನ್​ ಮಿಲಿಟರಿ ಸಮವಸ್ತ್ರ ಹೋಲುವ ಬಟ್ಟೆ ಧರಿಸಿ ಪೋಟೋಗೆ ಪೋಸ್​​ ನೀಡಿದರೆ, ಕೊಹ್ಲಿ, ಜಡೇಜಾ, ರೋಹಿತ್​​ ಮತ್ತು ಕೇಧರ್​​ ಜಾಧವ್​​​​​​​ ಚಹಾ ಹೀರುತ್ತಾ ಚಳಿಯನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್​ ಆಗಿವೆ. ಸದ್ಯ ಈ ಪೋಟೋಗಳಿಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಿಸಿಸಿಐ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬ ನೀವು ಇಂಗ್ಲೆಂಡ್​​ಗೆ ಹೋಗಿರುವುದು ವಿಶ್ವಕಪ್​​ ಆಡಲು, ಈ ರೀತಿ ಜಾಲಿಯಾಗಿ ಸುತ್ತಾಡಲು ಅಲ್ಲ ಎಂಬುದನ್ನ ನೆನಪಿಡುವಂತೆ ಬರೆದುಕೊಂಡಿದ್ದಾರೆ.

ಅಮರ್ ಬಗ್ಗೆ ಓಕೆ, ಡಿ ಬಾಸ್ ಬಗ್ಗೆ ಕಿಚ್ಚ ಮೌನವೇಕೆ…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=V60CFNmcqlI

About The Author