Political News: ಫೆಬ್ರವರಿ 7ರಂದು ತೆಲಂಗಾಣ ವಿಧಾನಪರಿಷತ್ ಮೂರು ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, 1 ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. ಆದರೆ ಸದ್ಯ ಆಡಳಿತದಲ್ಲಿರುವ ಕಾಂಗ್ರೆಸ್ ಸೋಲನುಭವಿಸಿದೆ.
ಮೇಡಕ್, ನಿಜಾಮಾಬಾದ್, ಆದಿಲಾಬಾದ್, ಕರೀಂನಗರ ಪದವೀಧರ ಕ್ಷೇತ್ರದಿಂದ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಅಂಜಿ ರೆಡ್ಡಿಯವರು ಕಾಂಗ್ರೆಸ್‌ನ ನರೇಂದ್ರ ರೆಡ್ಡಿ ವಿರುದ್ಧ 5 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದಾರೆ.
ಮೇಡಕ್, ನಿಜಾಮಾಬಾದ್, ಆದಿಲಾಬಾದ್, ಕರೀಂನಗರ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯ್‌ರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಕಾ ಕೋಮರಯ್ಯ ಗೆಲುವು ಸಾಧಿಸಿದ್ದಾರೆ. ವಾರಂಗಲ್-ಖಮ್ಮಮ್- ನಲ್ಗೊಂಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀಪಾಲ್ ರೆಡ್ಡಿ ಪಿಂಗಿಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಮೂರು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ ಪಕ್ಷ ಪದವಿಧರ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಹಾಕಿತ್ತು. ಬಿಆರ್‌ಎಸ್ ಚುನಾವಣೆಯಿಂದ ದೂರ ಉಳಿದಿತ್ತು. ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ, ಬೆಡಿ ಸಂಜಯ್ ಕುಮಾರ್ ಮತ್ತು ಇತರ ಬಿಜೆಪಿ ನಾಯಕರು ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಮಾಡಿದ್ದರು.
ಸಿಎಂ ಎ ರೇವಂತ್ ರೆಡ್ಡಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಮಹೇಶ್ ಕುಮಾರ್ ಗೌಡ, ಇತರ ಹಿರಿಯ ಪಕ್ಷದ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಯ ಪರ ಚುನಾವಣ ಪ್ರಚಾರ ಮಾಡಿದ್ದರು.