ಕರಾವಳಿ ಭಾಗದಲ್ಲಿ ಉಂಟಾದಂತಹ ಹಿಜಾಬ್ ವಿವಾದ (Hijab Controversy) ಈಗ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜ್ಯದಲ್ಲಿ ಅನೇಕ ಕಡೆ ಪ್ರತಿಭಟನೆಗಳು ನಡೆದಿದೆ, ಹಾಗೂ ಚರ್ಚೆಗಳು ನಡೆದಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ಯುವತಿಯೊಬ್ಬರು, ಕೋರ್ಟ್ (Court) ಗೆ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ಏಕಸದಸ್ಯಪೀಠ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ (Justice Krishna S Dixit) ಈ ವಿವಾದ ಧರ್ಮ ಸೂಕ್ಷ್ಮತೆಯನ್ನು ಹೊಂದಿರುವುದರಿಂದ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದ್ದರು. ನಿನ್ನೆ ಈ ವಿಚಾರವಾಗಿ ಹೈಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದ ಬಳಿಕ ವಿವಾದ ಮುಗಿಯುವವರೆಗೂ ಧರ್ಮದ ಗುರುತುಗಳನ್ನು ಹೊಂದುವಂತಿಲ್ಲ ಎಂದು ಮಧ್ಯಂತರ ಆದೇಶವನ್ನು ಹೊರಡಿಸಿತ್ತು. ಈಗ ಹಿಜಾಬ್ ವಿವಾದ ಕುರಿತಂತೆ ನವಂಬರ್ ನಲ್ಲಿಯೇ ಮಾಸ್ಟರ್ ಪ್ಲಾನ್ ನಡೆದಿದ್ದು ಎಂದು ಹೇಳಲಾಗುತ್ತಿದೆ.ಈ ಯುವತಿಯರು ಹಿಜಾಬ್ ವಿವಾದಕ್ಕೂ ಮುನ್ನ ಟ್ವಿಟರ್ ಖಾತೆ ತೆರೆದು CFI ಪ್ರಮೋಟ್ ಗೆ (Promote CFI) ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಜಾಬ್ ವಿವಾದ ಕುರಿತು ಯುವತಿಯರಾದ ಅಲ್ಮಾಸ್ (Almas), ಮುಸ್ಕಾನ್(Muskan), ಅಲಿಯಾ ಅಸಾದಿ ಸೇರಿ ಹಲವರು ಏಕಕಾಲಕ್ಕೆ ಟ್ವಿಟರ್ ಖಾತೆ (Twitter account) ತೆರೆದಿದ್ದಾರೆ. ನಂತರ ನವಂಬರ್ ನಲ್ಲಿ ಬಾಬ್ರಿ ಮಸೀದಿ ತೀರ್ಪಿನ ವಿರುದ್ಧ ಯುವತಿಯರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ CFI ರಾಷ್ಟ್ರಧ್ಯಕ್ಷ (CFI President) ಪ್ರತಿಕ್ರಿಯೆ ನೀಡಿದ್ದಾರೆಂದು ವಿಜಯ್ ಪಟೇಲ್ (Vijay Patel) CFI ಟ್ವಿಟರ್ ಟ್ರೆಂಡ್ ರಹಸ್ಯ ಬಯಲು ಮಾಡಿದ್ದಾರೆ. ಹಿಜಾಬ್ ವಿವಾದಕ್ಕೂ ಮೊದಲೇ CFI ನಲ್ಲಿ ಇವರು ಸಕ್ರಿಯರಾಗಿದ್ದರು. ನಂತರ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಟ್ವೀಟ್ (National Education Policy) ಮಾಡಿದ್ದರು. ನವೆಂಬರ್ 21ರಂದು ಮಸೀದಿಯಲ್ಲಿ ಮೈಕ್ ಬಳಕೆಗೆ ಸಮರ್ಥಿಸಿ ಟ್ವೀಟ್ ಮಾಡಿದ್ದರು. ನಂತರ ಡಿಸೆಂಬರ್ 12ರಂದು ದೆಹಲಿ ದಂಗೆಯ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಟ್ವೀಟ್ ಮಾಡಿದ್ದರು. ನಂತರ ಡಿಸೆಂಬರ್ 24 ರ ಬಳಿಕ ಹಿಜಾಬ್ ಹೋರಾಟವನ್ನು ಆರಂಭಿಸಿದ್ದರು ಎಂಬುವ ಅನೇಕ ಕುತೂಹಲಕಾರಿ ಅಂಶಗಳು ಟ್ವಿಟರ್ ಹಿಸ್ಟರಿಯಿಂದ ಬಹಿರಂಗವಾಗಿದೆ.