ಪುನೀತ್ ಪರ್ವಕ್ಕೆ ಕರುನಾಡು ಕಾದು ಕುಳಿತಿದೆ. ‘ಗಂಧದ ಗುಡಿ’ ಪ್ರಿ-ರಿಲೀಸ್ ಈವೆಂಟ್‌ಗೆ ದಿನಗಣನೆ ಶುರುವಾಗಿದೆ. ಇನ್ನೊಂದು ವಾರ ಅಷ್ಟೇ ಅದ್ಧೂರಿಯಾಗಿ ‘ಗಂಧದ ಗುಡಿ’ ಸಿನಿಮಾ ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾವನ್ನು ಸಂಭ್ರಮಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಪುನೀತ್ ರಾಜ್‌ಕುಮಾರ್ ಕರಿಯರ್‌ನ ಸ್ಪೆಷಲ್ ಸಿನಿಮಾ ಆಗಿರುವ ಕಾರಣಕ್ಕೆ ಪ್ರಿ-ರಿಲೀಸ್ ಕಾರ್ಯಕ್ರಮ ಜೋರಾಗಿ ನಡೆಯಲಿದೆ. ಅಭಿಮಾನಿಗಳು ಕೂಡ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಅಕ್ಟೋಬರ್ 21ಕ್ಕೆ ಪ್ರಿ-ರಿಲೀಸ್ ಈವೆಂಟ್ ನಡೆಯುತ್ತಿದೆ. ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಆಗಮಿಸಲಿರುವ ಗೆಸ್ಟ್ ಲಿಸ್ಟ್ ಅನ್ನು ಅಭಿಮಾನಿಗಳೇ ರಿಲೀಸ್ ಮಾಡಿದ್ದಾರೆ.
ಕಮಲ್ ಹಾಸನ್ ಸೂರ್ಯ ಫಿಕ್ಸ್ ದಕ್ಷಿಣ ಭಾರತದ ನಾಲ್ಕೂ ಚಿತ್ರರಂಗಕ್ಕೂ ‘ಗಂಧದ ಗುಡಿ’ ಪ್ರಿ-ರಿಲೀಸ್ ಈವೆಂಟ್‌ಗೆ ಆಹ್ವಾನ ನೀಡಲಾಗಿದೆ. ಸದ್ಯ ಈ ಕಾರ್ಯಕ್ರಮಕ್ಕೆ ಯಾರು ಬರಬಹುದು? ಅನ್ನೋ ಲಿಸ್ಟ್ ಹೊರಬಿದ್ದಿದೆ. ಅಪ್ಪು ಅಭಿಮಾನಿಗಳು ಅವರೆಲ್ಲರಿಗೂ ಸ್ವಾಗತ ಕೋರಿದ್ದಾರೆ. ಸದ್ಯ ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಬರೋದು ಕನ್ಫರ್ಮ್ ಆಗಿದೆ. ಹಾಗೇ ಸೂರ್ಯ ಕೂಡ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಪುನೀತ್ ಫ್ಯಾನ್ಸ್ ಶುಭ ಕೋರಿದ್ದಾರೆ.
ನರೇಶ್ ಪತ್ನಿಗೆ ನಡುಗಿದ್ರಾ ಪವಿತ್ರಾ ಲೋಕೇಶ್..? ನರೇಶ್ ಪವಿತ್ರಾ ಲೋಕೇಶ್ ನಡುವೆ ಬ್ರೇಕಪ್ ಆಯ್ತಾ..?!
ಟಾಲಿವುಡ್ ಸ್ಟಾರ್‌ಗಳೊಂದಿಗೆ ಪವರ್‌ಸ್ಟಾರ್‌ಗೆ ಉತ್ತಮ ಬಾಂಧವ್ಯವಿತ್ತು. ಎಲ್ಲರೊಂದಿಗೂ ಸ್ನೇಹ ಭಾವದಿಂದ ಅಪ್ಪುಗಾಗಿ ಟಾಲಿವುಡ್ ಬಲ್ಲಾಳ ದೇವ ರಾಣಾ ದಗ್ಗುಬಾಟಿ ಆಗಮಿಸುತ್ತಿದ್ದಾರೆ. ಹಾಗೇ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಕೂಡ ‘ಗಂಧದ ಗುಡಿ’ ಪ್ರಿ-ರಿಲೀಸ್ ಈವೆಂಟ್‌ನ ಪ್ರಮುಖ ಅತಿಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಆಕ್ಟೋಬರ್ 21ರಂದು ವೇದಿಕೆ ಮೇಲೆ ತಾರೆಯರ ಸಮಾಗಮವೇ ಆಗಲಿದೆ.
ಸ್ಯಾಂಡಲ್‌ವುಡ್ ಸ್ಟಾರ್ ಯಾರು? ಇತ್ತ ಕನ್ನಡ ಚಿತ್ರರಂಗದಿಂದ ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ, ಸಾಧು ಕೋಕಿಲಾ, ಧ್ರುವಾ ಸರ್ಜಾ ಸೇರಿದಂತೆ ಗಣ್ಯಾತೀ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಸೇರುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ತಾರಾಬಳಗವೇ ಸೇರಲಿದ್ದು, ಎಲ್ಲರಿಗೂ ಅಪ್ಪು ಫ್ಯಾನ್ಸ್ ‘ಪುನೀತ್ ಪರ್ವ’ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.