ಸಿಹಿ ಇಷ್ಟಪಡುವ ಪ್ರತಿಯೊಬ್ಬರೂ ತಿನ್ನುವ ಸ್ವೀಟ್ ಅಂದ್ರೆ ಬೆಲ್ಲ. ಯಾಕಂದ್ರೆ ಬೆಲ್ಲ ಆರೋಗ್ಯಕ್ಕೂ ಉತ್ತಮ, ತಿನ್ನಲು ಕೂಡ ರುಚಿಯಾಗಿರತ್ತೆ. ಹಾಗಾಗಿ ಹೆಚ್ಚು ಸ್ವೀಟ್ ಇಷ್ಟಪಡುವವರು ಬೆಲ್ಲವನ್ನ ತಿನ್ನುತ್ತಾರೆ. ನಾವಿಂದು ಶುದ್ಧ ಬೆಲ್ಲದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ..
ಬೆಲ್ಲ ಉಷ್ಣ ಪದಾರ್ಥವಾಗಿದೆ. ಮಧ್ಯಾಹ್ನ ಊಟವಾದ ಮೇಲೆ ನೀವು ಒಂದು ಚಿಕ್ಕ ತುಂಡು ಬೆಲ್ಲ ತಿಂದರೆ, ನಿಮ್ಮ ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ. ಆ್ಯಸಿಡಿಟಿ ಸಮಸ್ಯೆಗೂ ಮುಕ್ತಿ ಸಿಗುತ್ತದೆ. ಊಟವಾದ ಬಳಿಕ ಸಿಹಿ ತಿಂಡಿ ತಿನ್ನುವ ಬದಲು ಬೆಲ್ಲ ತಿನ್ನುವುದು, ಒಂದು ಆರೋಗ್ಯಕರ ಅಭ್ಯಾಸವೆಂದು ಆಯುರ್ವೇದದಲ್ಲಿ ಹೇಳಲಾಗಿದೆ.
ನಿಮಗೆ ಶೀತ, ನೆಗಡಿಯಾಗಿದ್ದರೆ ಅಥವಾ ಜ್ವರವಿದ್ದರೆ, ರಾತ್ರಿ ಮಲಗುವ ಮುನ್ನ ಸಣ್ಣ ತುಂಡು ಬೆಲ್ಲ ತಿಂದು, ಬೆಚ್ಚಗಿನ ಹಾಲು ಕುಡಿದು ನಿದ್ದೆ ಮಾಡಿ. ಇನ್ನು ನೀವು ಪ್ರತಿದಿನ ಉಂಡ ಬಳಿಕ ಬೆಲ್ಲ ತಿಂದರೆ, ನೀವು .ಯಂಗ್ ಆಗಿ ಕಾಣುತ್ತೀರಾ. ನಿಮ್ಮ ಮುಖ ಹೆಚ್ಚು ಸುಕ್ಕುಗಟ್ಟುವುದಿಲ್ಲ. ಬರೀ ಬೆಲ್ಲ ತಿನ್ನಲು ಆಗದಿದ್ದಲ್ಲಿ, ನೀವು ಹುರಿದ ಶೇಂಗಾದೊಂದಿಗೆ ಬೆಲ್ಲ ತಿನ್ನಿ. ಇದರಿಂದ ನಿಮ್ಮ ದೇಹದಲ್ಲಿ ರಕ್ತ ಹೆಚ್ಚುತ್ತದೆ. ಮೂಳೆ ಗಟ್ಟಿಯಾಗುತ್ತದೆ.
ಎನಿಮಿಯಾ ಸಮಸ್ಯೆಗೆ ಪರಿಹಾರ ಬೇಕಂದ್ರೆ, ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣವಾಗಬೇಕು ಅಂದ್ರೆ ನೀವು ಶುದ್ಧವಾದ ಬೆಲ್ಲದ ಸೇವನೆ ಮಾಡಬೇಕು. ನಿಮಗೆ ನಿಶ್ಶಕ್ತಿ ಕಾಡುತ್ತಿದ್ದಲ್ಲಿ ನೀವು ಬೆಲ್ಲ ತಿನ್ನಿ. ಸಾಧ್ಯವಾದಲ್ಲಿ ತುಪ್ಪ ಮತ್ತು ಬೆಲ್ಲ ಬೆರೆಸಿ ದೋಸೆ, ಚಪಾತಿ ಅಥವಾ ರೊಟ್ಟಿಯ ಜೊತೆ ತಿನ್ನಿ. ಇದು ರುಚಿಕರವೂ ಅಲ್ಲದೇ, ಆರೋಗ್ಯಕರವೂ ಆಗಿದೆ.
ಇನ್ನು ನಿಮಗೆ ಪ್ರತಿದಿನ ಸಿಹಿ ತಿನ್ನಲೇಬೇಕು ಅಂತಿದ್ರೆ, ನೀವು ಬೆಲ್ಲದ ಜೊತೆ ಶೇಂಗಾ ಅಥವಾ ಎಳ್ಳು ಮತ್ತು ತುಪ್ಪ ಬೆರೆಸಿ, ಲಾಡು ಮಾಡಿಟ್ಟು, ಪ್ರತಿದಿನ ತಿನ್ನಬಹುದು. ಚಳಿಗಾಲದಲ್ಲಿ ಈ ಲಾಡು ಮಾಡಿ ತಿಂದ್‌ರೆ, ನಿಮ್ಮ ದೇಹದಲ್ಲಿ ತಂಪಿನ ಜೊತೆ ಉಷ್ಣತೆಯ ಪ್ರಮಾಣ ಕೂಡ ಸಮವಾಗಿರುತ್ತದೆ.
ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..
ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

