Health Tips: ಸೋಶಿಯಲ್ ಮೀಡಿಯಾ ಅಭಿವೃದ್ಧಿಯಾದ ಬಳಿಕ, ಹಲವರಿಗೆ ಹಲವು ವಿಷಯಗಳ ಬಗ್ಗೆ ಜ್ಞಾನ ಹೆಚ್ಚಾಗುತ್ತಿದೆ. ಸೌಂದರ್ಯದ ಬಗ್ಗೆಯೂ ತಿಳಿಯಲು, ಈ ಸೋಶಿಯಲ್ ಮೀಡಿಯಾ ಸಹಕಾರಿಯಾಗಿದೆ. ಅದೇ ರೀತಿ ಕೂದಲ ಬುಡಕ್ಕೆ ಈರುಳ್ಳಿ ರಸ ಹಚ್ಚಿದ್ರೆ, ಕೂದಲು ಉದುರುವುದು ನಿಲ್ಲುತ್ತದೆ ಎಂಬ ವಿಷಯ ಕೂಡ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಗೊತ್ತಾಗಿದೆ. ಆದರೆ ಈರುಳ್ಳಿ ರಸವನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಮಾತ್ರ, ಕೆಲವರಿಗೆ ಗೊತ್ತಿಲ್ಲ. ಈ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಕೂದಲ ಬುಡಕ್ಕೆ ಈರುಳ್ಳಿ ರಸ ಹಚ್ಚುವುದರಿಂದ, ಕೂದಲ ಬುಡ ಗಟ್ಟಿಯಾಗುತ್ತದೆ. ಅಲ್ಲದೇ, ಚಿಕ್ಕ ವಯಸ್ಸಿಗೆ ಕೆಲವರ ಕೂದಲು ಬಿಳಿಯಾಗುತ್ತದೆ. ಅಂಥವರು ಈರುಳ್ಳಿ ರಸ ಹಚ್ಚುವುದರಿಂದ ಅವರ ಕೂದಲು, ಕಪ್ಪಗಾಗುತ್ತದೆ. ತಲೆ ಹೊಟ್ಟು ಕಡಿಮೆ ಮಾಡುವಲ್ಲಿಯೂ ಈರುಳ್ಳಿ ರಸ ಸಹಕಾರಿಯಾಗಿದೆ. ಹೊಟ್ಟು ಕಡಿಮೆಯಾದಾಗ, ಕೂದಲು ಉದುರುವಿಕೆಯೂ ಕಡಿಮೆಯಾಗುತ್ತದೆ.
ಈರುಳ್ಳಿಯನ್ನು ತುರಿದು, ಅದರ ರಸ ತೆಗೆದು, ಡೈರೆಕ್ಟ್ ಆಗಿ ನೀವು ಕೂದಲ ಬುಡಕ್ಕೆ ಹಚ್ಚಬಹುದು. ಅಥವಾ ಒಂದು ದಿನ ಮೊದಲು ಬೆಳಗ್ಗಿನ ಹೊತ್ತು ಒಂದು ಸ್ಪೂನ್ ಅಕ್ಕಿಯನ್ನು ಅರ್ಧ ಗ್ಲಾಸ್ ನೀರಿನಲ್ಲಿ ನೆನೆಸಿಡಿ, ಮರುದಿನ ಆ ಅಕ್ಕಿಯನ್ನು ತೊಳೆದು, ನೀರು ಮತ್ತು ಅಕ್ಕಿಯನ್ನು ಸಪರೇಟ್ ಮಾಡಿ. ಅಕ್ಕಿ ತೊಳೆದ ನೀರಿಗೆ, ಈರುಳ್ಳಿ ರಸವನ್ನು ಸೇರಿಸಿ, ಸ್ಪ್ರೇ ಬಾಟಲಿಗೆ ಹಾಕಿ, ಕೂದಲಿಗೆ ಸ್ಪ್ರೇ ಮಾಡಿಕೊಳ್ಳಿ. ಕೂದಲ ಬುಡವನ್ನು 5 ನಿಮಿಷ ಮಸಾಜ್ ಮಾಡಿ. ಬಳಿಕ ಅರ್ಧ ಗಂಟೆಯಾದ ಮೇಲೆ ತಲೆ ಸ್ನಾನ ಮಾಡಿ.
ಕೆಲವರು ಈರುಳ್ಳಿ ರಸವನ್ನು ತೆಂಗಿನ ಎಣ್ಣೆ ಮತ್ತು ಹರಳೆಣ್ಣೆಯೊಂದಿಗೆ ಸೇರಿಸಿ, ಕೂದಲ ಬುಡಕ್ಕೆ ಹಚ್ಚುತ್ತಾರೆ. ಇದು ಕೆಲವರಿಗೆ ಸೂಟ್ ಆಗುತ್ತದೆ. ಇನ್ನು ಕೆಲವರಿಗೆ ನೆಗಡಿಯಾಗುತ್ತದೆ. ಮತ್ತೆ ಕೆಲವರು ಹರಳೆಣ್ಣೆ ಮತ್ತು ತೆಂಗಿನ ಎಣ್ಣೆ ಜೊತೆ ಈರುಳ್ಳಿ ರಸ ಸೇರಿಸಿ, ಕುದಿಸಿ ಎಣ್ಣೆ ತಯಾರಿಸಿ, ಬಳಸುತ್ತಾರೆ. ಇದು ಕೂದಲ ಆರೋಗ್ಯಕ್ಕೆ ಉತ್ತಮ ಎಣ್ಣೆಯಾಗಿರುತ್ತದೆ.