- Advertisement -
ನವದೆಹಲಿ : ದೇಶದಲ್ಲಿನ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮಂಗಳವಾರ ಲೋಕಸಭೆಗೆ ಕೇಂದ್ರ ಗೃಹ ಸಚಿವ ನರೇಂದ್ರ ಸಿಂಗ್ ತೋಮರ್ ವರದಿ ನೀಡಿದ್ದಾರೆ. 2019ರಲ್ಲಿ ದೇಶದಲ್ಲಿನ ರೈತರ ಆತ್ಮಹತ್ಯೆ ಪ್ರಕರಣ 5967 ಪ್ರಕರಣಗಳು ಕಂಡುಬಂದಿದ್ದು, ಈ ಬಾರಿ ಇಳಿಮುಖ ಕಂಡಿದೆ. 2020 ರಲ್ಲಿ 5579 ರೈತರ ಆತ್ಮಹತ್ಯೆ ಪ್ರಕರಣ ಕಂಡುಬಂದಿದ್ದು, ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ ಮಹಾರಾಷ್ಟ್ರದಲ್ಲಿ (2567) ಕಂಡುಬಂದಿದೆ. ನಂತರ ಸ್ಥಾನದಲ್ಲಿ ಕರ್ನಾಟಕ 1072, ಆಂಧ್ರಪ್ರದೇಶ 564, ತೆಲಂಗಾಣ 466,ಮಧ್ಯಪ್ರದೇಶ 235, ಛತ್ತೀಸ್ ಗಡ 227 ಪ್ರಕರಣಗಳು ಕಂಡುಬಂದಿದ್ದು ಮೊದಲ 5 ಸ್ಥಾನವನ್ನು ಪಡೆದುಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಲೋಕಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
- Advertisement -