ಇದರ ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಬ್ರಾಹ್ಮಣ ವೇಷ ಧರಿಸಿ, ಗಂಗಾ ನದಿಗೆ ಮೀಯಲು ಬಂದಿದ್ದ ದಾನ ಚಂದ್‌ನಿಗೆ ದಾನ ಕೊಡಲು ಕೇಳಿದ್ದ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಕಂಜೂಸು ವ್ಯಕ್ತಿ, ಬ್ರಾಹ್ಮಣನಿಗೆ ದಾನ ಮಾಡ್ತಾನಾ..? ಇಲ್ಲವಾ..? ಮುಂದೇನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಬ್ರಾಹ್ಮಣನನ್ನು ಕುರಿತು ಧ್ಯಾನಚಂದ ಈ ರೀತಿ ಹೇಳುತ್ತಾನೆ. ನಿಮ್ಮಂಥವರು ಇಲ್ಲಿ ಇರುತ್ತಾರೆ ಅಂತಲೇ, ನಾನು ಇಲ್ಲಿಗೆ ಬರುತ್ತಿರಲಿಲ್ಲ. ಆದ್ರೆ ನನ್ನ ಪತ್ನಿ ಒತ್ತಾಯ ಮಾಡಿದ್ದಕ್ಕಾಗಿ, ನಾನಿಲ್ಲಿ ಸ್ನಾನ ಮಾಡಲು ಬಂದಿದ್ದೆ. ನಾನು ಒಂದು ವರ್ಷಕ್ಕಾಗುವಷ್ಟು ಅಲ್ಲ, ಒಂದು ದಿನಕ್ಕಾಗುವಷ್ಟು ಕೂಡ ಕಾಣಿಕೆ ಕೊಡುವುದಿಲ್ಲ ಎಂದು ಹೇಳುತ್ತಾನೆ. ಆದ್ರೆ ಪಂಡಿತರು ದಾನ ಕೊಡಲೇಬೇಕೆಂದು ಒತ್ತಾಯಿಸುತ್ತಾರೆ.
ಅದಕ್ಕೆ ಜಿಪುಣ, ಸರಿ, ನಾನು ದಾನ ಕೊಡುವುದಿಲ್ಲ, ಸಾಲ ಕೊಡುತ್ತೇನೆ. ಆದ್ರೆ ನಿನಗೆ ಆ ಸಾಲ ಬೇಕಾದ್ದಲ್ಲಿ, ನೀನು ನನ್ನೊಂದಿಗೆ ನನ್ನ ಮನೆಗೆ ಬರಬೇಕು. ಯಾಕಂದ್ರೆ ನಾನು ಇಲ್ಲಿ ಖಾಲಿ ಕೈಯಲ್ಲಿ ಬಂದಿದ್ದೇನೆ ಎನ್ನುತ್ತಾನೆ. ಸರಿ ಎಂದು ಪಂಡಿತರು, ಜಿಪುಣನನ್ನು ಹಿಂಬಾಲಿಸಿಕೊಂಡು ಅವನ ಮನೆಗೆ ಹೋಗುತ್ತಾರೆ. ಆದ್ರೆ ಮನೆಗೆ ಸೇರಿದ ಜಿಪುಣ, ತಕ್ಷಣ ಬಾಗಿಲು ಹಾಕಿಕೊಳ್ಳುತ್ತಾನೆ. ಕೊಂಚ ಹೊತ್ತು ಬಿಟ್ಟು, ಬ್ರಾಹ್ಮಣ ಆ ಮನೆಯ ಬಾಗಿಲು ತಟ್ಟುತ್ತಾನೆ. ಮತ್ತು, ಯಜಮಾನ್ರೇ ನೀವು ನನಗೆ ದಾನ ಕೊಡುತ್ತೇನೆಂದು ಹೇಳಿದ್ದೀರಿ, ಬೇಗ ಕೊಡಿ, ನಾನು ಅದನ್ನು ತೆಗೆದುಕೊಂಡು ಹೊರಟು ಹೋಗುತ್ತೇನೆ ಎನ್ನುತ್ತಾರೆ.
ಇದನ್ನು ಕೇಳಿದ ಜಿಪುಣನ ಪತ್ನಿ, ಏನುಂದ್ರೆ, ನಿಮ್ಮನ್ನು ಯಾರೋ ಕರೆಯುತ್ತಿದ್ದಾರೆ. ದಾನ ಬೇಕೆಂದು ಕೇಳುತ್ತಿದ್ದಾರೆ ಎಂದು ಹೇಳುತ್ತಾಳೆ. ಅದಕ್ಕೆ ಜಿಪುಣ, ಅವನಿಗೆ ಹೇಳು, ನನ್ನ ಪತಿಗೆ ಜ್ವರ ಬಂದಿದೆ. ಅವರು ಮಲಗಿದ್ದಾರೆ. ನೀವು ಇನ್ನೆರಡು ದಿನ ಬಿಟ್ಟು ಬನ್ನಿ, ಅವರು ನಿಮಗೆ ದಾನ ಕೊಡುತ್ತಾರೆಂದು ಹೇಳು ಎಂದು ಪತ್ನಿಯಲ್ಲಿ ಹೇಳುತ್ತಾನೆ. ಪತ್ನಿ, ಬ್ರಾಹ್ಮಣನ ಬಳಿ ಹಾಗೆ ಹೇಳುತ್ತಾಳೆ.
ಅದಕ್ಕೆ ಆ ಬ್ರಾಹ್ಮಣ, ಏನು ಯಜಮಾನರಿಗೆ ಆರೋಗ್ಯ ಸರಿ ಇಲ್ಲವೇ..? ಹಾಗಾದ್ರೆ ನಾನು ಇಲ್ಲೇ ಅವರ ಸೇವೆ ಮಾಡಿದ್ದುಕೊಂಡಿರುತ್ತೇನೆ. ಪಾಪ ಅವರೆಷ್ಟು ಬಳಲುತ್ತಾರೆ..? ನಾನು ಅವರ ಶುಶ್ರೂಷೆ ಮಾಡುತ್ತೇನೆ. ಅದರಿಂದ ಅವರು ಬಹುಬೇಗ ಆರಾಮವಾಗುತ್ತಾರೆ. ನನಗೆ ಇರಲು ವ್ಯವಸ್ಥೆ ಮಾಡಿ ಎನ್ನುತ್ತಾನೆ.
ಇದನ್ನು ಕೇಳಿದ ಜಿಪುಣನ ಪತ್ನಿ, ಪತಿಯ ಬಳಿ ಹೋಗಿ, ಬ್ರಾಹ್ಮಣ ಹೇಳಿದ ಮಾತನ್ನು ಹೇಳುತ್ತಾಳೆ. ಅದಕ್ಕೆ ಪತಿ, ಹಾಗಾದ್ರೆ ನಾನು ಸತ್ತು ಹೋಗಿದ್ದೇನೆಂದು ಆ ಬ್ರಾಹ್ಮಣನಲ್ಲಿ ಹೇಳು ಎಂದು ಪತ್ನಿಯಲ್ಲಿ ಹೇಳುತ್ತಾನೆ. ಆಕೆ ಒಲ್ಲದ ಮನಸ್ಸಿನಿಂದಲೇ, ಬ್ರಾಹ್ಮಣನ ಬಳಿ ಹೋಗಿ, ನನ್ನ ಪತಿ ತೀರಿಹೋಗಿದ್ದಾರೆ. ಹಾಗಾಗಿ ನಿಮಗಿನ್ನು ದಾನ ಸಿಗುವುದಿಲ್ಲ, ನೀವು ಹೋಗಬಹುದು ಎಂದು ಹೇಳುತ್ತಾಳೆ. ಹಾಗಾದ್ರೆ ಒಡೆಯನ ಸಾವಿನ ವಿಷಯ ಕೇಳಿ, ದಾನ ಸಿಗುವುದಿಲ್ಲ ಅಂತಾ ಆ ಬ್ರಾಹ್ಮಣ ಹಾಗೆ ಹೊರಟು ಹೋಗ್ತಾನಾ..? ಅಥವಾ ದಾನ ಪಡೆದೇ ಹೋಗ್ತಾನಾ..? ಈ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..