Health Tips: ಜೀನಿಯನ್ನು ಹೇಗೆ ತಯಾರಿಸುತ್ತಾರೆ..? ಇದರ ಸೇವನೆಯಿಂದ ಏನೇನು ಆರೋಗ್ಯ ಲಾಭವಾಗುತ್ತದೆ. ಜೀನಿಯನ್ನು ಹೇಗೆ ತಯಾರಿಸಬೇಕು..? ಇದರ ಸೇವನೆಯಿಂದ ಎಷ್ಟೆಲ್ಲ ಜನ ಆರೋಗ್ಯ ಲಾಭ ಪಡೆದಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಲ್ಲೋರ್ವ ಕಿರಾಣಿ ವ್ಯಾಪಾರಿ, ಜೀನಿ ಸೇವಿಸಿ, ಇಡೀ ದಿನ ಎನರ್ಜಿಯಿಂದ ಇರುತ್ತಾರಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಇಲ್ಲೋರ್ವ ವ್ಯಕ್ತಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಇವರು ಬೆಳಿಗ್ಗೆ ಅಂಗಡಿಗೆ ಬಂದ್ರೆ, ವ್ಯಾಪಾರ ಮಾಡಿ, ಮಧ್ಯಾಹ್ನ ಊಟಕ್ಕೆ ಹೋಗುತ್ತಾರೆ. ಬಳಿಕ ಬಂದು ರಾತ್ರಿಯೇ ಮನೆಗೆ ಹೋಗೋದು. ಅಲ್ಲಿವರೆಗೆ ಇವರಿಗೆ ಸುಸ್ತಾಗಿ ಹೋಗತ್ತೆ ಅಂತಾ ನೀವು ಅಂದುಕೊಂಡಿರಬಹುದು. ಆದರೆ ಇಲ್ಲಾ, ಇವರಿಗೆ ಸುಸ್ತಾಗೋದಿಲ್ಲಾ. ಬದಲಾಗಿ ಇವರು ದಿನಪೂರ್ತಿ ಚೈತನ್ಯದಾಯಕರಾಗಿ ಇರುತ್ತಾರೆ. ಏಕೆಂದರೆ ಇವರು ಪ್ರತಿದಿನ ಜೀನಿ ಕುಡಿಯುತ್ತಾರೆ.
ಅಲ್ಲದೇ, ಕೆಲವು ಬಾರಿ, ಗ್ರಾಹಕರ ಸಂಖ್ಯೆ ಹೆಚ್ಚಾದಾಗ, ಮನೆಗೆ ಊಟಕ್ಕೆ ಹೋಗಲು ಸಾಧ್ಯವಾಗದೇ ಇದ್ದಾಗ, ಇವರು ಅಂಗಡಿಯಲ್ಲೇ ಜೀನಿ ಮಾಡಿ ಸೇವಿಸುತ್ತಾರೆ. ಇವರಿಗೆ 50 ವರ್ಷ ದಾಟಿದ್ದರೂ ಕೂಡ, ಇವರು ಅಕ್ಕಿ ಚೀಲದಂಥ ಭಾರವನ್ನು ಹೊರುತ್ತಾರೆ. ಅಲ್ಲದೇ, ತಮ್ಮ ಅಂಗಡಿಗೆ ಬರುತ್ತಿದ್ದ ಗ್ರಾಹಕರಿಗೂ, ಜೀನಿ ಸೇವನೆಯ ಲಾಭವನ್ನು ಇವರು ಹೇಳುತ್ತಿರುತ್ತಾರಂತೆ. ಇವರ ಗ್ರಾಹಕರೊಬ್ಬರಿಗೆ 14 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಆಗ ಅವರಿಗೆ ಒಬ್ಬರು ಜೀನಿ ಕುಡಿಯಿರಿ ಎಂದು ಸಲಹೆ ನೀಡಿದ್ದರಂತೆ.
ಅದೇ ರೀತಿ ಪತಿ-ಪತ್ನಿ ಇಬ್ಬರೂ 3 ತಿಂಗಳು ತಪ್ಪದೇ ಜೀನಿ ಸೇವಿಸಿದರು. ಈಗ ಅವರಿಗೆ ಹೆಣ್ಣು ಮಗು ಹುಟ್ಟಿದೆ. ಜೀನಿ ಸೇವನೆಯಿಂದ ಬರೀ ಶುಗರ್, ಬಿಪಿ, ಕೈ ಕಾಲು ನೋವು ಅಷ್ಟೇ ಅಲ್ಲದೇ, ಸಂತಾನ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..