Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಶ್ರೀಮಂತಿಕೆಗೆ ಹೆಸರಾಗಿದೆ. ಇನ್ನು ಕೆಲವು ತನ್ನ ಸುಂದರ ಕಲಾಕೃತಿಯಿಂದ ಪ್ರಸಿದ್ಧವಾಗಿದೆ. ಇನ್ನು ಕೆಲವು ಪವಾಡಗಳಿಂದ ಪ್ರಸಿದ್ಧವಾಗಿದೆ. ಆದರೆ ಇಂದು ನಾವು ಭಾರತದ ಅತ್ಯಂತ ಸ್ವಚ್ಛ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.
ಭಾರತದ ಸ್ವಚ್ಛ ದೇವಸ್ಥಾನವೆಂದರೆ, ಗುಜರಾತ್‌ನ ಸೋಮನಾಥೇಶ್ವರ ದೇವಸ್ಥಾನ ಮತ್ತು ಮಧುರೈನ ಮೀನಾಕ್ಷಿ ದೇವಸ್ಥಾನ. ಎರಡೂ ದೇವಸ್ಥಾನಗಳು ಬರೀ ಸ್ವಚ್ಛತೆಗಷ್ಟೇ ಅಲ್ಲ, ಶ್ರೀಮಂತಿಕೆಗೂ ಹೆಸರಾಗಿದೆ. ಇಲ್ಲಿ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ದೇಣಿಗೆ ಬರುತ್ತದೆ. ಭಾರತದ 10 ಶ್ರೀಮಂತ ದೇವಸ್ಥಾನಗಳಲ್ಲಿ ಸೋಮನಾಥ್ ಮತ್ತು ಮೀನಾಕ್ಷಿ ದೇವಾಲಯವೂ ಇದೆ.
ಮಧುರೈನಲ್ಲಿ ಮೀನಾಕ್ಷಿ ರೂಪದಲ್ಲಿರುವ ಪಾರ್ವತಿಯನ್ನು ಮತ್ತು ಸುಂದರೇಶ್ವರನ ರೂಪದಲ್ಲಿರುವ ಶಿವನನ್ನು ಪೂಜಿಸಲಾಗುತ್ತದೆ. ಆದರೆ ಇಲ್ಲಿ ಸುಂದರೇಶ್ವರಿನಿಗಿಂತ ಮೊದಲು ಮತ್ತು ಹೆಚ್ಚು ಪೂಜೆ ನಡೆಯುವುದೇ ಮೀನಾಕ್ಷಿಗೆ. ಸುಂದರ ಶಿಲ್ಪಕಲೆಯನ್ನು ಹೊಂದಿರುವ ಈ ದೇವಸ್ಥಾನದ್ಲಲಿ 12 ಭವ್ಯವಾದ ಗೋಪುರಗಳಿದೆ. ಈ ದೇವಸ್ಥಾನ ದೊಡ್ಡದಾಗಿದ್ದರೂ ಕೂಡ, ಸ್ವಚ್ಛವಾಗಿರಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಆಯೋಜಿಸಿದ್ದ ಸ್ವಚ್ಛಭಾರತ ಸ್ಪರ್ಧೆಯಲ್ಲಿ ಅತ್ಯಂತ ಸ್ವಚ್ಛವಾದ ದೇವಸ್ಥಾನ ಎಂಬ ಪ್ರಖ್ಯಾತಿಗೆ ಮಧುರೈ ದೇವಸ್ಥಾನ ಹೆಸರಾಗಿದೆ.
ಎರಡನೇಯ ದೇವಸ್ಥಾನ ಗುಜರಾತ್‌ನ ಸೋಮೇಶ್ವರ ದೇವಸ್ಥಾನ. ಸೌರಾಷ್ಟ್ರದ ಪ್ರಭಾಸ್ ಎಂಬಲ್ಲಿ ಈ ದೇವಸ್ಥಾನವಿದ್ದು, ಇಲ್ಲಿ ಶಿವನ ರೂಪವಾದ ಸೋಮೇಶ್ವರನನ್ನು ಪೂಜಿಸಲಾಗುತ್ತದೆ. 12 ಜ್ಯೋತಿರ್ಲಿಂಗಗಳಲ್ಲಿ ಸೋಮೇಶ್ವರ ದೇವಸ್ಥಾನ ಕೂಡ ಒಂದಾಗಿದ್ದು, 56 ಕಂಬಗಳ ಮೇಲೆ ಈ ಬೃಹತ್ ದೇವಸ್ಥಾನವನ್ನು ಕಟ್ಟಲಾಗಿದೆ. ಈ ದೇವಸ್ಥಾನ ಕೂಡ ದೊಡ್ಡದಾಗಿದ್ದರೂ, ಇಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗಿದೆ.