ಈ 5 ವಿಷಕಾರಿ ವಸ್ತುಗಳು ನಿಮ್ಮ ಆರೋಗ್ಯವನ್ನೇ ಸರ್ವನಾಶ ಮಾಡಿಬಿಡತ್ತೆ..

Health tips: ನಾವು ಪ್ರತಿದಿನ ಸೇವಿಸುವ ಕೆಲ ಆಹಾರಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಆಹಾರಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾವಿಂದು ನಮ್ಮ ಆರೋಗ್ಯವನ್ನು ಹಾಳು ಮಾಡುವ 5 ವಿಷಕಾರಿ ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೊದಲನೇಯದ್ದು ಹಸಿರು ಆಲೂಗಡ್ಡೆ. ಹಸಿರು ಆಲೂಗಡ್ಡೆಯಲ್ಲಿ ವಿಷಕಾರಿ ಅಂಶವಿದ್ದು, ಇದರ ಸೇವನೆಯಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಅಲ್ಲದೇ, ನೀವು ಇದನ್ನು ಅತೀಯಾಗಿ ಸೇವಿಸಿದರೆ, ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಯಾಕಂದ್ರೆ ಇದು ಸ್ಲೋ ಪಾಯ್ಸನ್ ರೀತಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ನಿಮಗೆ ತಲೆನೋವು, ವಾಂತಿ-ಬೇಧಿ ಆಗಿ, ನಿಮ್ಮ ದೇಹದ ಶಕ್ತಿಯೆಲ್ಲ ಕುಂದುಹೋಗುತ್ತದೆ.

ಎರಡನೇಯದ್ದು, ಜಾಯಿಕಾಯಿ. ಜಾಯಿಕಾಯಿಯ ಸೇವನೆ ಮಿತವಾಗಿ ಮಾಡಬೇಕು. ವಾರಕ್ಕೆ ಒಮ್ಮೆ ಮಾಡಬಹುದು. ಅದು ಕೊಂಚವೇ ಕೊಂಚ, ಮಸಾಲೆ ಪದಾರ್ಥ ಬಳಸಿ ಯಾವುದಾದರೂ ಪದಾರ್ಥ ತಯಾರಿಸುವಾಗ ಇದರ ಬಳಕೆ ಮಾಡಬಹುದು. ಮಕ್ಕಳಿಗೂ ಇದನ್ನು ಕೊಡಲಾಗುತ್ತದೆ. ಹಾಗಾಗಿ ಮಕ್ಕಳಿಗೂ ವಾರಕ್ಕೆ ಎರಡು ಬಾರಿ ಸ್ವಲ್ಪ ಜಾಯಿಕಾಯಿ ತೇಯ್ದು ನೆಕ್ಕಿಸಬಹುದು. ಇದು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಮೂರನೇಯದ್ದು ಕಹಿ ಬಾದಾಮಿ. ಕೆಲವೊಮ್ಮೆ ನೀವು ಕಡಿಮೆ ರೇಟಿಗೆ ಡ್ರೈಫ್ರೂಟ್ಸ್ ಸಿಗತ್ತೆ ಎಂದು, ಬಾದಾಮಿ ತಂದಿರುತ್ತೀರಿ. ಅದರಲ್ಲಿ ಮುಕ್ಕಾಲು ಭಾಗ ಕಹಿ ಬಾದಾಮಿಗಳೇ ನಿಮಗೆ ಸಿಗಬಹುದು. ಆಗ ನೀವು, ಅದನ್ನು ಬಿಸಾಕದೇ, ಕಹಿಯಾದರೆ ಆಗಲಿ ಎಂದು ತಿಂದರೆ, ನೀವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತೀರಿ.

ನಾಲ್ಕನೇಯದ್ದು ರೆಡ್ ಕಿಡ್ನಿ ಬೀನ್ಸ್. ಅಂದ್ರೆ ರಾಜ್ಮಾ. ರಾಜ್ಮಾ ಬಳಸುವವರು ಅದನ್ನೂ ಪೂರ್ತಿಯಾಗಿ ಬೇಯಿಸಿ, ತಿನ್ನಬೇಕು. ಅರ್ದಂಭರ್ಧ ಬೇಯಿಸಿದ ರಾಜ್ಮಾ ಸೇವಿಸುವುದರಿಂದ, ನಿಮ್ಮ ಆರೋಗ್ಯ ಸಂಪೂರ್ಣವಾಗಿ ಹಾಳಾಗುತ್ತದೆ.

ಐದನೇಯದ್ದು ಬ್ರೌನ್ ರೈಸ್. ನಿಮಗೆ ಆಶ್ಚರ್ಯವಾಗಬಹುದು. ಮತ್ತು ನಿಮ್ಮಲ್ಲಿ ಈ ಪ್ರಶ್ನೆಯೂ ಉದ್ಭವಿಸಬಹುದು. ಬ್ರೌನ್ ರೈಸ್ ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾ ಹೇಳಲಾಗತ್ತೆ. ಆದರೆ ಬ್ರೌನ್ ರೈಸ್ ನಮ್ಮ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂದು. ನಿಜ ಬ್ರೌನ್ ರೈಸ್ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ. ಆದರೆ ನೀವು ಅದನ್ನು ಬಳಸುವಾಗ 4ರಿಂದ 5 ಬಾರಿ ಚೆನ್ನಾಗಿ ತೊಳೆದು ಬಳಸಬೇಕು. ಇಲ್ಲದಿದ್ದಲ್ಲಿ, ಇದರಲ್ಲಿರುವ ಧೂಳು ಕ್ಯಾನ್ಸರ್‌ಕಾರಕವಾಗಿರುತ್ತದೆ. ಹಾಗಾಗಿ ಬ್ರೌನ್ ರೈಸ್ ತಯಾರಿಸುವಾಗ, ಅದನ್ನು ಸ್ವಚ್ಛ ನೀರಿನಲ್ಲಿ 4ರಿಂದ 5 ಬಾರಿ ತೊಳೆದು, ಸ್ವಚ್ಛಗೊಳಿಸಿ, ಬಳಿಕ ಅನ್ನ ತಯಾರಿಸಿ.

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

About The Author