Health News: ಮಹಿಳೆಯರು ಜೀವನದಲ್ಲಿ ಹಲವು ಘಟ್ಟಗಳನ್ನ ದಾಟಬೇಕಾಗುತ್ತದೆ. ಯವ್ವನದಲ್ಲಿರುವಾಗ ಋತುಚಕ್ರ ಅನುಭವಿಸುವುದರಿಂದ ಹಿಡಿದು, ವೃದ್ಧೆಯಾಗುವಾಗ ಋತುಚಕ್ರ ನಿಲ್ಲುವವರೆಗೂ ಹಲವು ಘಟ್ಟಗಳನ್ನು ದಾಟಬೇಕು. ಗರ್ಭಿಣಿ, ಬಾಣಂತನ ಹೀಗೆ, ಇವೆಲ್ಲ ಅನುಭವಿಸಲು, ಕುಟುಂಬದ ಜವಾಬ್ದಾರಿ ಹೊರಲು ಆಕೆಗೆ ಸಾಕಷ್ಟು ಶಕ್ತಿ ಬೇಕಾಗುತ್ತದೆ. ಹಾಗಾಗಿ ನಾವಿಂದು, ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗಾಗಿ ಸೇವಿಸಲೇಬೇಕಾದ ಎರಡು ರೆಸಿಪಿಗಳ ಬಗ್ಗೆ ಸಂಪೂರ್ಣ ವಿವರ ನೀಡಲಿದ್ದೇವೆ.
ಕಲೋಂಜಿಯ ಚಟ್ನಿಪುಡಿ ಮತ್ತು ಕಲೋಂಜಿ ಲಾಡು ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ಕಲೋಂಜಿಯನ್ನು ದೇಹದಲ್ಲಿ ಕಫ ಮತ್ತು ವಾತ ದೋಷ ಸಮವಾಗಿರಿಸಲು ಬಳಸಲಾಗುತ್ತದೆ. ಇದು ಮಹಿಳೆಯರ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ರೋಗಗಳಿಗೆ ಪರಿಹಾರ ಸಿಗುತ್ತದೆ.
ಮೊದಲನೇಯದಾಗಿ ಕಲೋಂಜಿ ಚಟ್ನಿ ಪುಡಿ ರೆಸಿಪಿ. 1 ಟೇಬಲ್ ಸ್ಪೂನ್ ಕಲೋಂಜಿ, 1 ಟೇಬಲ್ ಸ್ಪೂನ್ ಎಳ್ಳು, ಅಗಸೆಬೀಜ, ನೆಲ್ಲಿಕಾಯಿ ಪುಡಿ, ವೋಮ, ಅವಶ್ಯಕತೆ ಇದ್ದರೆ, ಉಪ್ಪು. ಉಪ್ಪು, ನೆಲ್ಲಿಕಾಯಿ ಪುಡಿ ಬಿಟ್ಟು ಉಳಿದೆಲ್ಲವನ್ನ ಹುರಿದು ಪುಡಿ ಮಾಡಿ. ಇದಕ್ಕೆ ನೆಲ್ಲಿಕಾಯಿ ಪುಡಿ, ಉಪ್ಪು ಸೇರಿಸಿದರೆ, ಕಲೋಂಜಿ ಚಟ್ನಿ ಪುಡಿ ರೆಡಿ. ಊಟ ಮಾಡುವಾಗ, ಚಪಾತಿ, ರೊಟ್ಟಿಯೊಂದಿಗೆ ಸ್ವಲ್ಪ ಸ್ವಲ್ಪ ಈ ಪುಡಿ ಸೇರಿಸಿ ಸವಿಯಿರಿ.
ಎರಡನೇಯದಾಗಿ ಕಲೋಂಜಿ ಲಾಡು ರೆಸಿಪಿ. 1 ಸ್ಪೂನ್ ಕಲೋಂಜಿ, ಶುಂಠಿ ಪುಡಿ, ಬೆಲ್ಲದ ಪುಡಿ. ಮೊದಲು ಕಲೋಂಜಿಯನ್ನು ಹುರಿಯಿರಿ. ಇದಕ್ಕೆ ಶುಂಠಿ ಪುಡಿ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ. ಇದರಿಂದ ಚಿಕ್ಕ ಚಿಕ್ಕ ಲಾಡು ತಯಾರಿಸಿ. ನೆಲ್ಲಿಕಾಯಿಯಷ್ಟು ಚಿಕ್ಕ ಲಾಡುವಾಗಿರಲಿ. ಎರಡು ದಿನಕ್ಕೆ ಒಂದು ಲಾಡು ತಿಂದರೆ ಸಾಕು. ಆರೋಗ್ಯ ಉತ್ತಮವಾಗಿರುತ್ತದೆ.
‘ಬ್ರ್ಯಾಂಡ್ ಬೆಂಗಳೂರು, ಬೆಟರ್ ಬೆಂಗಳೂರು ಮೂಲಕ ಗ್ಲೋಬಲ್ ಬೆಂಗಳೂರು ನಿರ್ಮಾಣವೇ ನಮ್ಮ ಧ್ಯೇಯ’
ಲಿಂಗಾಯಿತ ನಾಯಕರ ನಿರ್ಲಕ್ಷ್ಯ ವಿಚಾರ: ಎಂ.ಬಿ.ಪಾಟೀಲ್- ಯತ್ನಾಳ್ ಮಧ್ಯೆ ಟ್ವೀಟ್ ವಾರ್..
ವ್ಹೀಲ್ ಚೇರ್ ಇಲ್ಲದ್ದಕ್ಕೆ, ಸ್ಕೂಟಿಯಲ್ಲೇ ಆಸ್ಪತ್ರೆಯ ಲಿಫ್ಟ್ ಏರಿ ಹೋದ ವ್ಯಕ್ತಿ : ವೀಡಿಯೋ ವೈರಲ್