ಹೆಣ್ಣು ಮಕ್ಕಳು ತಾಯಿಯಾಗುವ ಕಾರಣಕ್ಕೆ ಅವರು ಸಣ್ಣ ವಯಸ್ಸಿನಲ್ಲೇ ಏಜ್ ಆದವರ ಹಾಗೆ ಕಾಣುತ್ತಾರೆ. ಅಲ್ಲದೇ, ತಾಯಿಯಾದ ಬಳಿಕ, ಹಲವು ಜವಾಬ್ದಾರಿಗಳು ಹೆಗಲೇರುತ್ತದೆ. ಮನೆ ಕೆಲಸ, ಮಕ್ಕಳನ್ನು ನೋಡಿಕೊಳ್ಳೋದು, ಮನೆಯವರನ್ನ ನೋಡಿಕೊಳ್ಳುವುದು. ಇದೆಲ್ಲದರ ಬಗ್ಗೆ ನಿಮಗೆ ಸಮಯ ಕೊಡಲು ನಿಮ್ಮಿಂದಲೇ ಸಾಧ್ಯವಾಗೋದಿಲ್ಲಾ. ಆದ್ರೆ ನೀವು 40 ದಾಟಿದ ಮೇಲೂ ಆರೋಗ್ಯವಾಗಿರಬೇಕು ಅಂದ್ರೆ, ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು ತೆಗೆದುಕೊಳ್ಳದಿದ್ದಲ್ಲಿ, ಕಷ್ಟವಾಗುತ್ತದೆ. ಹಾಗಾಗಿ ನಾವಿಂದು 40 ದಾಟಿದ ಬಳಿಕ ಮಹಿಳೆಯರು ಯಾವ ಟಿಪ್ಸ್‌ಗಳನ್ನು ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..
ಮಗುವಿನ ಮೆದುಳಿನ ಉತ್ತಮ ಬೆಳವಣಿಗೆಗೆ, ಗರ್ಭಿಣಿಯರು ಈ ಆಹಾರ ಸೇವಿಸಬೇಕು..
ಮೊದಲನೇಯ ಟಿಪ್ಸ್ ಅಂದ್ರೆ, 40 ದಾಟಿದ ಬಳಿಕ ಯೋಗ, ವ್ಯಾಯಾಮ, ವಾಕಿಂಗ್, ಸೈಕ್ಲಿಂಗ್, ಡಾನ್ಸ್, ಜಾಗಿಂಗ್ ಇವುಗಳಲ್ಲಿ ಯಾವುದು ಸಾಧ್ಯವಾಗುತ್ತದೆಯೋ, ಅದನ್ನು ಮಾಡಿ. ಆದ್ರೆ ಇವನ್ನೆಲ್ಲ 40 ದಾಟಿದ ಮೇಲೆಯೇ ಶುರು ಮಾಡಬೇಕು ಅಂತೇನಿಲ್ಲ. ಮೊದಲೇ ಇಂಥ ಉತ್ತಮ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಿ. ಇದರಿಂದ ಕೈ ಕಾಲು ನೋವು ಅನುಭವಿಸುವ ಸಮಯ ಬರುವುದಿಲ್ಲ.
ಎರಡನೇಯ ಟಿಪ್ಸ್, ಉತ್ತಮ ಆಹಾರವನ್ನ ತಿನ್ನಬೇಕು. ಮಹಿಳೆಯರಿಗೆ ಮನೆಕೆಲಸ, ಪತಿ- ಮಕ್ಕಳು, ಹಿರಿಯರನ್ನು ನೋಡಿಕೊಳ್ಳುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲು ಆಗುವುದಿಲ್ಲ. ಆದ್ರೆ 40 ದಾಟುತ್ತಿದ್ದಂತೆ, ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಕೊಡಲೇಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಲೇಬೇಕು. ಆಹಾರದಲ್ಲಿ ಸೊಪ್ಪು, ಹಣ್ಣು, ತರಕಾರಿ, ಡ್ರೈಫ್ರೂಟ್ಸ್ ಸೇವಿಸಲೇಬೇಕು. ಇನ್ನು ನೀವು ಜಂಕ್ ಫುಡ್ ಪ್ರಿಯರಾಗಿದ್ದರೆ, ಅದನ್ನು ತಿನ್ನೋದನ್ನ ಕಡಿಮೆ ಮಾಡಿ.
ಪಿಸಿಓಡಿ ಸಮಸ್ಯೆ ಪರಿಹಾರಕ್ಕೆ ಸೇವಿಸಬೇಕಾದ ಆಹಾರಗಳಿವು..
ಮೂರನೇಯ ಟಿಪ್ಸ್. 40 ದಾಟಿದ ಬಳಿಕ ಹೆಣ್ಣು ಮಕ್ಕಳಿಗೆ ಹಲವು ತಲೆಬಿಸಿ ಇರುತ್ತದೆ. ಮಕ್ಕಳ ಮದುವೆ ಟೆನ್ಶನ್, ಓದಿನ ಟೇನ್ಶನ್, ಅವರ ಭವಿಷ್ಯದ ಟೆನ್ಶನ್, ಪತಿಯ ಆರೋಗ್ಯದ ಟೆನ್ಶನ್ ಹೀಗೆ ಹಲವು ತಲೆಬಿಸಿ ಇರುತ್ತದೆ. ಆದ್ರೆ ಎಲ್ಲದಕ್ಕೂ ಟೆನ್ಶನ್ ತೆಗೆದುಕೊಂಡ್ರೆ, ಬಿಪಿ, ಶುಗರ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಎಲ್ಲ ವಿಷಯಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.
ಇತ್ತೀಚೆಗೆ ಮಹಿಳೆಯರು, ವಯಸ್ಸಾದವರಿಗಾಗಿಯೇ ಕೆಲವು ಕ್ಲಬ್ಗಳು ಶುರುವಾಗಿದೆ. ಅಲ್ಲಿ ಯೋಗಾಭ್ಯಾಸ ಸೇರಿ ಹಲವು ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಅಂಥಕಡೆ ಹೋಗಿ ಸಮಯ ಕಳೆಯಿರಿ. ಧ್ಯಾನ ಮಂದಿರ, ಭಜನಾ ಮಂಡಳಿಗೆ ಸೇರಿ. ಸಂಜೆ ತಂಪಾದ ಗಾಳಿ ಸವಿಯುತ್ತಾ, ಪತಿ- ಮಕ್ಕಳೊಂದಿಗೆ ವಾಕಿಂಗ್ ಹೋಗಿ. ಒಟ್ಟಿನಲ್ಲಿ ಚೈತನ್ಯಾದಾಯಕರಾಗಿರುವಂತೆ ನೋಡಿಕೊಳ್ಳಿ.