Hubli News: ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ, ಅಂಜಲಿ ಹತ್ಯೆ ಆರೋಪಿ ಗಿರೀಶ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ತನ್ನ ಮಗಳ ಹತ್ಯೆ ಬಗ್ಗೆ ಸಿಐಡಿ ಬಳಿ, ನೇಹಾ ತಂದೆ ನಿರಂಜನ್ ಹಿರೇಮಠ್ ಮಾತನಾಡಿದ್ದು, ಆ ಬಳಿಕ ಮಾಧ್ಯಮದವರ ಬಳಿ ಮಾತನಾಡಿದ್ದಾರೆ.
ನಾನು ಇವತ್ತು ಸಿಐಡಿ ಅಧಿಕಾರಿಗಳ ಸಮಯ ಕೇಳಿದ್ದೆ. ನಾನು ಕೂಡ ಕೆಲವು ಮಾಹಿತಿಯನ್ನ ಹೇಳಿದ್ದೇನೆ. ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನ ಯಾವ ಸಿಐಡಿ ಅಧಿಕಾರಿ ತನಿಖೆ ಮಾಡುತ್ತಿದ್ದಾರೆ ಅನ್ನೊದರ ಮಾಹಿತಿ ಕೂಡ ಪಡೆದುಕೊಂಡಿದ್ದೇನೆ. ಕಳೆದ ಒಂದು ತಿಂಗಳಿಂದ ನನ್ನ ಮಗಳಾದ ನೇಹಾ ಹತ್ಯೆ ಕೇಸ್ ತನಿಖೆ ನಡೆಯಿತ್ತಿದೆ. ಈ ಕುರಿತಾಗಿ ಕೆಲವು ಮಾಹಿತಿಯನ್ನ ಕೇಳಿದೆ. ಅವರು ತನಿಖೆ ನಡೆಯುತ್ತಿದೆ ಅಂತ ತಿಳಿಸಿದ್ರು ಎಂದು ನಿರಂಜನ್ ಹೇಳಿದ್ದಾರೆ.
ಇದು ವರೆಗೂ ನೇಹಾ ಕೇಸ್ ನಲ್ಲಿ ಒಬ್ಬರನ್ನ ಮಾತ್ರ ಅರೆಸ್ಟ್ ಮಾಡಿದ್ದಾರೆ. ನಾನು ಇದನ್ನು ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ದೇನೆ. ಅಲ್ಲದೆ ಯಾರಾದ್ರೂ ಮೇಲೆ ಅನುಮಾನವಿದ್ರೆ ಬರೆದು ಕೊಡಿ ಅಂತ ಹೇಳಿದ್ದಾರೆ. ನಾಳೆ ಸಿಐಡಿ ಡಿಜಿ ಅವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ನಿಮ್ಮ ಮನೆಗೆ ಭೇಟಿ ನೀಡ್ತಾರೆ ಅಂತ ತಿಳಿಸಿದ್ರು. ಎರಡು ಪ್ರಕರಣಗಳ ಕುರಿತಾಗಿ ಮಾಹಿತಿ ಪಡೆಯಲು ಹಾಗೂ ಮೀಟಿಂಗ್ ಮಾಡಲು ಡಿಜಿ ಬರುತ್ತಿದ್ದಾರೆ ಅಂತ ಮಾಹಿತಿ ನೀಡಿದ್ರು ಎಂದು ನಿರಂಜನ್ ಹೇಳಿದ್ದಾರೆ.
ಅಂಜಲಿ ಮನೆಯಲ್ಲಿ ಯಾರೂ ಇಲ್ಲ,ತಂದೆ ಇಲ್ಲ ,ಸಹೋದರ ಇಲ್ಲ. ನಾನು ಆ ವಾರ್ಡ್ ಸದಸ್ಯನಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಅಂಜಲಿ ಹತ್ಯೆ ಕೇಸ್ ಕೂಡಾ ಪಾಸ್ಟ್ ಟ್ರ್ಯಾಕ್ ಕೊಡಬೇಕು. ಸಂಪೂರ್ಣವಾಗಿ ಅಂಜಲಿ ಪ್ರಕರಣವನ್ನು ಬೇಧಿಸಬೇಕು ಎಂದು ನಿರಂಜನ್ ಹೇಳಿದ್ದಾರೆ.
ನಾವ ಯಾರ ಕೈಗೊಂಬೆ ಆಗಿ ಕೆಲಸ ಮಾಡಲ್ಲ ಅಂದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗೋ ಭರವಸೆ ಇದೆ. ನಾಳೆ ಸಿಐಡಿ ಡಿಜಿ ಬಂದು ನಮ್ಮ ಜೊತೆ ಮಾತಾಡಲಿದ್ದಾರೆ. ನೇಹಾ ಕೊಲೆ ಕೇಸ್ ವಿಚಾರವಾಗಿ ಡಿಜಿ ಅವರು ಚರ್ಚೆ ಮಾಡಲಿದ್ದಾರೆಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ನಾನು ನೇಹಾ ಕೊಲೆ ಕೇಸ್ ದಿಕ್ಕ ತಪ್ಪಿಸೋ ಕೆಲಸ ಆಗಬಾರದು ಎಂದು ಮನವಿ ಮಾಡಿದ್ದೇನೆ ಎಂದ ನಿರಂಜನ ಹಿರೇಮಠ ಎಂದು ನಿರಂಜನ್ ಹೇಳಿದ್ದಾರೆ.
ಇನ್ನು ಮುಂದೆ ಅಯೋಧ್ಯಾ ರಾಮಮಂದಿರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ
ಅಂಜಲಿ ಕೇಸ್ ಆರೋಪಿ ಗಿರೀಶ್‌ಗೆ ಸಿಐಡಿ ಡ್ರಿಲ್: ಸಂತ್ರಸ್ತತ ಮಹಿಳೆಯನ್ನು ಕರೆಸಿ ವಿಚಾರಣೆ