ಪೂರಿಗೆ ಸಖತ್ ಟೇಸ್ಟಿಯಾಗಿರುತ್ತೆ ಈ ಚನಾ ಆಲೂ ಗ್ರೇವಿ..

Recipe: ಇಂದು ಪೂರಿಯೊಟ್ಟಿಗೆ ತಿನ್ನುವ ಕಡಲೆ ಮತ್ತು ಆಲೂಗಡ್ಡೆ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಬೇಯಿಸಿದ ಆಲೂ, ಕಡಲೆ, 2 ಟೊಮೆಟೋ, 2 ಹಸಿಮೆಣಸು, ಚಿಕ್ಕ ತುಂಡು ಶುಂಠಿ, 4 ಸ್ಪೂನ್ ಎಣ್ಣೆ, ಜೀರಿಗೆ, ಸೊಂಪು, ಪಲಾವ್ ಎಲೆ, ಚಕ್ಕೆ, ಲವಂಗ, ಹಿಂಗು, ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, 1 ಸ್ಪೂನ್ ಕಡಲೆ ಹಿಟ್ಟು, ಚಾಟ್ ಮಸಾಲೆ, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು, ಕಸೂರಿ ಮೇಥಿ, ಉಪ್ಪು.

ಮೊದಲು ಟೊಮೆಟೋ, ಶುಂಠಿ, ಹಸಿಮೆಣಸಿನಕಾಯಿ ಮಿಕ್ಸಿ ಜಾರ್‌ಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಸೋಂಪು, ಪಲಾವ್ ಎಲೆ, ಚಕ್ಕೆ, ಲವಂಗ, ಚಿಟಿಕೆ ಹಿಂಗು, ಹಾಕಿ ಹುರಿಯಿರಿ. ಬಳಿಕ, ಟೊಮೆಟೋ ಪೇಸ್ಟ್, ಅರಿಶಿನ, ಖಾರದ ಪುಡಿ, ಉಪ್ಪು, ಧನಿಯಾ ಪುಡಿ, ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ.

ಇದಕ್ಕೆ ಒಂದು ಗ್ಲಾಸ್ ನೀರು, ಬೇಯಿಸಿದ ಕಪ್ಪು ಕಡಲೆ, ಆಲೂಗಡ್ಡೆ, ಚಾಟ್ ಮಸಾಲೆ, ಗರಂ ಮಸಾಲೆ ಹಾಕಿ, ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಕೊಂಚ ಹೊತ್ತು ಬೇಯಿಸಿ. ಬಳಿಕ, ಇದಕ್ಕೆ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿದರೆ, ಚನಾ ಆಲೂ ಗ್ರೇವಿ ರೆಡಿ.

ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

ಮಕ್ಕಳಲ್ಲಿ ಅತೀಯಾದ ಬೊಜ್ಜಿಗೆ ಕಾರಣವೇನು..?

ಗ್ರೀನ್ ಟೀ, ಲೆಮನ್ ಟೀ ಸೇವನೆ ಆರೋಗ್ಯಕ್ಕೆ ಕೆಟ್ಟದ್ದೋ, ಒಳ್ಳೆಯದೋ..?

About The Author