Friday, September 20, 2024

Latest Posts

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

- Advertisement -

Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು ತಿನ್ನಲು ಕೊಡಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಿಚಾರ ಅಂದ್ರೆ, ನಿಮ್ಮ ಮಗು ಬಾಳೆಹಣ್ಣು ತಿಂದ್ರೆ,ಅದಕ್ಕೆ ಯಾವುದೇ ಅಲರ್ಜಿ ಆಗುವುದಿಲ್ಲ ಅಲ್ಲವೇ ಎಂಬುದನ್ನು ನೀವು ಗಮನದಲ್ಲಿಟ್ಟು ಬಾಳೆಹಣ್ಣು ಕೊಡಿ. ಅಥವಾ ವೈದ್ಯರ ಸಲಹೆ ಪಡೆದು ಬಾಳೆಹಣ್ಣು ತಿನ್ನಲು ಕೊಡಬೇಕು. ಅದರಲ್ಲೂ ನಿಮ್ಮ ಮಗುವಿಗೆ 1 ವರ್ಷ ತುಂಬಿದ ಬಳಿಕವೇ ಬಾಳೆಹಣ್ಣು ತಿನ್ನಲು ಕೊಡಿ.

ಬಾಳೆಹಣ್ಣಿನ ಸ್ಮೂದಿ ಮಾಡಿ ತಿನ್ನಿಸಬಹುದು. ಅಥವಾ ಬಾಳೆಹಣ್ಣಿನ ಪೇಸ್ಟ್ ಮಾಡಿ, ಪ್ಯಾನ್‌ನಲ್ಲಿ ತುಪ್ಪದ ಜೊತೆ ಹುರಿದು ಕೂಡ ತಿನ್ನಿಸಬಹುದು. ಮಿಲ್ಕ್ ಶೇಕ್ ಮಾಡಿಯಾದರೂ ಕುಡಿಸಬಹುದು. ಆದರೆ ನಿಮ್ಮ ಮಗು ಇದರಲ್ಲಿ ಯಾವ ಪದಾರ್ಥವನ್ನು ಸೇವಿಸಿದರೂ, ಅದರ ಆರೋಗ್ಯದಲ್ಲೇನೂ ಏರುಪೇರಾಗಬಾರದು. ಒಮ್ಮೆ ಅದರ ಆರೋಗ್ಯದಲ್ಲಿ ಸಮಸ್ಯೆಯಾದಂತೆ ಕಂಡುಬಂದರೆ, ಮತ್ತೆ ಬಾಳೆಹಣ್ಣಿನ ಪದಾರ್ಥ ಕೊಡದಿರುವುದು ಉತ್ತಮ.

ಆದರೆ ನಿಮ್ಮ ಮಗುವಿಗೆ ಬಾಳೆಹಣ್ಣಿನ ಈ ಪದಾರ್ಥಗಳಲ್ಲಿ ಯಾವುದು ತಿಂದರೂ, ಅದರ ಆರೋಗ್ಯ ಸರಿ ಇದ್ದಲ್ಲಿ, ನೀವು ಸ್ಮೂದಿ, ಮಿಲ್ಕ್ ಶೇಕ್ ಯಾವುದಾದರೂ ಒಂದನ್ನು ತಿನ್ನಲು ಕೊಡಿ. ಜೊತೆಗೆ ತುಪ್ಪ ಡ್ರೈಫ್ರೂಟ್ಸ್ ಪುಡಿ ಸೇರಿಸಿದರೂ, ರುಚಿಯ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

- Advertisement -

Latest Posts

Don't Miss