Friday, November 22, 2024

Latest Posts

ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ2

- Advertisement -

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ಶಂಖಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ಇದರ ಮುಂದುವರಿದ ಭಾಗವಾಗಿ, ಇನ್ನುಳಿದ ಶಂಖಗಳ ಬಗ್ಗೆ ವಿವರಣೆ ನೀಡಲಿದ್ದೇವೆ..

ಪೌಂಡ್ರ ಶಂಖ: ಇದನ್ನ ಭೀಮ ಬಳಸುತ್ತಿದ್ದ. ಇದನ್ನ ಭೀಮನು ಅಷ್ಟೇ ಬಳಸಬಹುದಿತ್ತು. ಬೇರೆ ಯಾರಿಂದಲೂ ಈ ಶಂಖ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಊದುವುದು ದೂರದ ಮಾತು, ಇದನ್ನು ಎತ್ತಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಯಾಕಂದ್ರೆ ಇದರ ಗಾತ್ರವೇ ಅಷ್ಟು ದೊಡ್ಡದಿತ್ತು. ಈ ಶಂಖವನ್ನ ಭೀಮ ಬಳಸಿದಾಗ, ಮನುಷ್ಯರ ಜೊತೆ, ದೇವತೆಗಳು ಕೂಡ ಕಂಪಿಸುತ್ತಿದ್ದರು. ಈ ಶಂಖ ನಾಗಲೋಕದ ನಾಗರಾಜ ಭೀಮನಿಗೆ ಕೊಟ್ಟಿದ್ದ.

ದೇವದತ್ತ ಶಂಖ: ಇದು ಪಾಂಚಜನ್ಯದಷ್ಟೇ ಶಕ್ತಿಶಾಲಿ ಶಂಖವಾಗಿತ್ತು. ಇದನ್ನು ಅರ್ಜುನ ಬಳಸುತ್ತಿದ್ದ. ಇದನ್ನು ವರುಣ ದೇವ ಅರ್ಜುನನಿಗೆ ವರವಾಗಿ ನೀಡಿದ್ದ. ಇದನ್ನು ಧರಿಸಿ ಯುದ್ಧ ಮಾಡಿದರೆ, ಆ ಯುದ್ಧದಲ್ಲಿ ಸೋಲಲು ಸಾಧ್ಯವೇ ಇರಲಿಲ್ಲ. ಮಹಾಭಾರತ ಯುದ್ಧದ ವೇಳೆ ಪಾಂಚಜನ್ಯ ಮತ್ತು ದೇವದತ್ತ ಶಂಖವನ್ನು ಒಟ್ಟಾಗಿ ಬಾರಿಸಿಯೇ, ಹಲವು ಯೋಧರನ್ನು ಓಡಿಸಲಾಗಿತ್ತು.

ಸುಘೋಷ ಶಂಖ: ನಕುಲ ಬಳಸುತ್ತಿದ್ದ ಶಂಖವಿದು. ಈ ಶಂಖ ಊದಿದ್ದಲ್ಲಿ, ಅಲ್ಲಿದ್ದ ನಕಾರಾತ್ಮಕ ಅಂಶ ಮಾಯವಾಗುತ್ತಿತ್ತು. ಮತ್ತು ಆ ಸ್ಥಳ ಧನಾತ್ಮಕತೆಯಿಂದ ಕೂಡಿರುತ್ತಿತ್ತು.

ಮಣಿಪುಷ್ಪಕ ಶಂಖ: ಸಹದೇವ ಬಳಸುತ್ತಿದ್ದ ಶಂಖವಿದು. ಈ ಶಂಖಗಳ ಮೇಲೆ ಮಣಿಗಳು ಇದ್ದ ಕಾರಣ, ಇದನ್ನು ಮಣಿಪುಷ್ಪಕ ಶಂಖವೆಂದು ಕರೆಯಲಾಗುತ್ತಿತ್ತು. ನಕುಲ ಮತ್ತು ಸಹದೇವನಿಗೆ ಈ ಶಂಖವನ್ನು ಅಶ್ವಿನಿ ಕುಮಾರರು ಕೊಟ್ಟಿದ್ದರು.

ವಿದಾರಕ ಶಂಖ: ಇದನ್ನು ದುರ್ಯೋಧನ ಬಳಸುತ್ತಿದ್ದ. ವಿದಾರಕದ ಅರ್ಥವೇನೆಂದರೆ, ದುಃಖ ಕೊಡುವವನು ಎಂದರ್ಥ. ಈ ಶಂಖವನ್ನು ಊದಿದಾಗ, ಆ ಸ್ಥಳದಲ್ಲಿದ್ದವರಿಗೆ ದುಃಖವಾಗುತ್ತಿತ್ತು.

ಶಿವ ಹುಲಿಯ ಚರ್ಮವನ್ನು ಬಳಸಲು ಕಾರಣವೇನು..?

ಶ್ರೀರಾಮನಿಗೆ ಕಬಂಧ ರಾಕ್ಷಸನೂ ಉಪಕಾರ ಮಾಡಿದ್ದನಂತೆ.. ಯಾಕೆ ಗೊತ್ತೇ..? ಭಾಗ 1

ಶ್ರೀರಾಮನಿಗೆ ಕಬಂಧ ರಾಕ್ಷಸನೂ ಉಪಕಾರ ಮಾಡಿದ್ದನಂತೆ.. ಯಾಕೆ ಗೊತ್ತೇ..? ಭಾಗ 2

- Advertisement -

Latest Posts

Don't Miss