Spiritual: ವಿವಾಹ ಎಂದರೆ, ಇಬ್ಬರ ಜೀವನವನ್ನೇ ಬದಲಾಯಿಸುವ ಶುಭಕಾರ್ಯ. ಈ ಶುಭಕಾರ್ಯದಿಂದ ಕೆಲವರ ಜೀವನ ಉತ್ತಮವಾಗಿ ಬದಲಾದರೆ, ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಏಕೆಂದರೆ, ಮದುವೆಯ ಬಗ್ಗೆ, ತಾನು ವಿವಾಹವಾಗುವ ಜೀವನ ಸಂಗಾತಿಯ ಬಗ್ಗೆ ಹಲವಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥ ಜೀವನ ಸಂಗಾತಿ ಸಿಕ್ಕಿಲ್ಲವೆಂದಲ್ಲಿ, ಅವರು ಜೀವನ ಪೂರ್ತಿ ಒಲ್ಲದ ಮನಸ್ಸಿನಿಂದಲೇ ಸಂಸಾರ ಸಾಗಿಸಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ವಿವಾಹದ ಬಗ್ಗೆ ಕಲ ವಿಷಯಗಳನ್ನು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಉತ್ತಮ ಕುಟುಂಬದ ಕನ್ಯೆ ಕುರೂಪಿಯಾಗಿದ್ದರೂ ಆಕೆಯನ್ನ ವರಿಸಬೇಕು. ಕುಟುಂಬಸ್ಥರು ಉತ್ತಮರಾಗಿದ್ದರೆ, ಅವರ ಗುಣಗಳು ಒಳ್ಳೆಯದಿರುತ್ತದೆ. ಹಾಗಾಗಿ ಅಂಥ ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣಿಗೂ ಅವರು ಉತ್ತಮ ಸಂಸ್ಕಾರವನ್ನೇ ಕೊಟ್ಟಿರುತ್ತಾರೆ. ಅಂಥ ಹೆಣ್ಣು ನೋಡಲು ಸುಂದರವಾಗಿರದಿದ್ದರೂ ಕೂಡ, ಕುರೂಪಿಯಾಗಿದ್ದರೂ ಕೂಡ ಅಂಥವಳನ್ನು ವರಿಸಬೇಕು ಎನ್ನುತ್ತಾರೆ ಚಾಣಕ್ಯರು. ಏಕೆಂದರೆ, ಹೆಣ್ಣು ಕುರೂಪಿಯಾಗಿದ್ದರೂ ಕೂಡ, ಆಕೆಯ ಗುಣ ಚೆನ್ನಾಗಿದ್ದರೆ, ಆಕೆಯನ್ನು ವಿವಾಹವಾದವರ ಜೀವನ ಸುಖಮಯವಾಗಿರುತ್ತದೆ. ಏಕೆಂದರೆ, ಆಕೆಗೆ ಅತೀ ಆಸೆ, ಕೊಂಕು ಬುದ್ಧಿ ಇರುವುದಿಲ್ಲ.
ಸೌಂದರ್ಯ ನೋಡಿ ಎಂದಿಗೂ ವಿವಾಹವಾಗಬಾರದು. ಸುಂದರವಾಗಿರುವ ಪತ್ನಿ ಸದಾ ಪತಿಯ ಜೀವನಕ್ಕೆ ಮಾರಕ ಎನ್ನುತ್ತಾರೆ ಚಾಣಕ್ಯರು. ಆಕೆ ಸುಂದರವಾಗಿಯೂ, ಉತ್ತಮ ನಡತೆಯುಳ್ಳವಳೂ, ಕೊಂಕು ಬುದ್ಧಿ, ಅತೀ ಆಸೆ ಇಲ್ಲದಿದ್ದವಳೂ ಆಗಿದ್ದಲ್ಲಿ, ನಿಮ್ಮ ಜೀವನ ಉತ್ತಮವಾಗಿರುತ್ತದೆ. ಆದರೆ ಆ ಹೆಣ್ಣು ಬರೀ ಸುಂದರವಾಗಿದ್ದು, ಹಣಕ್ಕಾಗಿ ಆಸೆ ಮಾಡುವವಳು, ಕೊಂಕು ಬುದ್ಧಿಯವಳು, ಸರಿಯಾದ ನಡತೆ ಇಲ್ಲದವಳು ಆಗಿದ್ದಲ್ಲಿ, ಆಕೆ ನಿಮ್ಮನ್ನು ಎಂದಿಗೂ ಪ್ರೀತಿಸುವುದಿಲ್ಲ. ಬದಲಾಗಿ ನೀವು ಸಿರಿವಂತರಾಗಿದ್ದಲ್ಲಿ, ಆಕೆ ನಿಮ್ಮ ಸಿರಿವಂತಿಕೆಯನ್ನಷ್ಟೇ ಪ್ರೀತಿಸುತ್ತಾಳೆ. ಹಾಗಾಗಿ ಬರೀ ಸೌಂದರ್ಯವನ್ನು ನೋಡಿ, ಹೆಣ್ಣನ್ನು ವರಿಸಬೇಡಿ ಎನ್ನುತ್ತಾರೆ ಚಾಣಕ್ಯರು.
ಮದುವೆಯಾಗುವಾಗ ಗಂಡು ಹೆಣ್ಣಿನ ಮನೆತನ ಸಮಾನವಾಗಿರಬೇಕು. ಬಡವರ ಮನೆಯಿಂದ ಹೆಣ್ಣು ತರಬೇಕು ಮತ್ತು ಶ್ರೀಮಂತರ ಮನೆಗೆ ಹೆಣ್ಣು ಕೊಡಬೇಕು ಎನ್ನುವ ಮಾತು, ಈ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಆದರೆ ಬಡ ಮನೆಯಿಂದ ಶ್ರೀಮಂತ ಮನೆಗೆ ಸೊಸೆಯಾಗಿ ಬಂದ ಹೆಣ್ಣನ್ನು ಮತ್ತು ಆಕೆಯ ಕುಟುಂಬಸ್ಥರನ್ನು ದೂಷಿಸುವವರು ಈಗಲೂ ಇದ್ದಾರೆ. ಹೆಣ್ಣಿನ ಕಡೆಯವರು ಅಷ್ಟು ಅನುಕೂಲಸ್ಥರಲ್ಲ, ನಾವು ಕೇಳಿದಷ್ಟು ಕೊಟ್ಟಿಲ್ಲವೆಂದು ಜೀವನಪೂರ್ತಿ ಹೆಣ್ಣಿನ ಮನಸ್ಸನ್ನು ನೋಯಿಸುತ್ತ ಕೊಂಕು ಮಾತನಾಡುವವರು ಇದ್ದಾರೆ. ಹಾಗಾಗಿ ಚಾಣಕ್ಯರು, ಮದುವೆಯಾಗುವ ಗಂಡು ಮತ್ತು ಹೆಣ್ಣಿನ ಮನೆಯವರು ಶ್ರೀಮಂತಿಕೆ, ಪ್ರತಿಷ್ಠೆಯ ವಿಷಯದಲ್ಲಿ ಸಮಾನವಾಗಿರಬೇಕು ಎಂದು ಹೇಳಿದ್ದಾರೆ.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..