Saturday, July 5, 2025

Latest Posts

ಮುಂಜಾನೆಯ ಈ ಅಭ್ಯಾಸ ನಿಮ್ಮ ಜೀವನವನ್ನೇ ಚೇಂಜ್ ಮಾಡುತ್ತದೆ..

- Advertisement -

ನಿಮ್ಮ ಮುಂಜಾನೆ ಉತ್ತಮವಾಗಿದ್ರೆ,  ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವು ಮುಂಜಾನೆ ಉತ್ತಮ ಅಭ್ಯಾಸಗಳನ್ನು ಮಾಡಬೇಕು. ಹಾಗಾದ್ರೆ ಮುಂಜಾನೆಯ ಯಾವ 5 ಅಭ್ಯಾಸದಿಂದ ನಮ್ಮ ಜೀವನ ಉತ್ತಮವಾಗಿ ಇರಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಅಭ್ಯಾಸ, ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಮುಂಜಾನೆ 4ರಿಂದ 5 ಗಂಟೆಯೊಳಗೆ ಏಳುವುದನ್ನ ಅಭ್ಯಾಸ ಮಾಡಿಕೊಳ್ಳಿ. ಈ ಅಭ್ಯಾಸದಿಂದ ನೀವು ಇಡೀ ದಿನ ಫ್ರೆಶ್ ಆಗಿ ಇರುತ್ತೀರಿ. ಮನೆಗೆಲಸ ಆಫೀಸು ಕೆಲಸ, ಧ್ಯಾನ, ವ್ಯಾಯಾಮ ಸೇರಿ ನಿಮ್ಮ ಎಲ್ಲಾ ಕೆಲಸ ಮಾಡಲು, ನಿಮಗೆ ಹೆಚ್ಚು ಸಮಯ ಸಿಗುತ್ತದೆ. ಅಲ್ಲದೇ, ಇಡೀ ದಿನ ನೀವು ಚೈತನ್ಯದಾಯಕವಾಗಿರುತ್ತೀರಿ. ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಎರಡನೇಯ ಅಭ್ಯಾಸ, ಈ ದಿನ ಏನು ಮಾಡಬೇಕು ಎಂದು ರಾತ್ರಿಯೇ ನಿರ್ಧರಿಸುವುದು. ನೀವು ಮರುದಿನ ಬೆಳಿಗ್ಗೆ ಎದ್ದು ರಾತ್ರಿ ಮಲಗುವ ತನಕವೂ, ಎಷ್ಟು ಗಂಟೆಗೆ, ಏನೇನು ಕೆಲಸ ಮಾಡಬೇಕು. ಎಲ್ಲೆಲ್ಲಿ ಹೋಗಬೇಕು ಎಂಬುದರ ಬಗ್ಗೆ ನಿಮ್ಮ ಪ್ಲಾನ್ ರೆಡಿ ಮಾಡಿಕೊಂಡಿರಿ. ಮರುದಿನ್ ಎದ್ದು ಅದೇ ಪ್ಲಾನ್ ಪ್ರಕಾರ, ನಿಮ್ಮ ಕೆಲಸ ಮಾಡಿ. ಆಗ ನೋಡಿ, ನಿಮ್ಮ ಜೀವನ ಎಷ್ಟು ಪರ್ಫೆಕ್ಟ್ ಆಗಿರುತ್ತದೆ.

ಮೂರನೇಯ ಅಭ್ಯಾಸ, ಎದ್ದ ತಕ್ಷಣ ನೀರು ಕುಡಿಯುವುದು. ನಾವು ನೀರು ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ, ಹಲವು ಬಾರಿ ಮಾಹಿತಿ ನೀಡಿದ್ದೇವೆ. ಅದೇ ರೀತಿ, ನೀವು ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ಅಥವಾ ರಾತ್ರಿ ತಾಮ್ರದ ತಂಬಿಗೆಯಲ್ಲಿ ಇಟ್ಟ ನೀರನ್ನು ಕುಡಿಯಿರಿ. ಯಾವುದೇ ಕಾರಣಕ್ಕೂ ಹೆಚ್ಚು ಬಿಸಿ ಅಥವಾ ಫ್ರಿಜ್‌ ನೀರು ಕುಡಿಯಬೇಡಿ. ಹೀಗೆ ಬೆಳಿಗ್ಗೆ ಎದ್ದ ತಕ್ಷಣ, ಬ್ರಶ್ ಮಾಡುವ ಮುಂಚೆ ನೀರು ಕುಡಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಸೌಂದರ್ಯವೂ ವೃದ್ಧಿಯಾಗುತ್ತದೆ.

ನಾಲ್ಕನೇಯ ಅಭ್ಯಾಸ, ಬೆಳಿಗ್ಗೆ ತಿಂಡಿ ತಿನ್ನುವ ಮುಂಚೆಯೇ ಸ್ನಾನ ಮಾಡುವುದು. ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ಒಳ್ಳೆಯ ಬಟ್ಟೆ ಧರಿಸಿ ದಿನ ಶುರು ಮಾಡಿದ್ರೆ, ನಿಮ್ಮಲ್ಲಿ ಒಂದು ಉಲ್ಲಾಸ ಬರುತ್ತದೆ. ಎಲ್ಲ ಕೆಲಸ ಮಾಡಲು ನಿಮ್ಮಲ್ಲಿ ಚೈತನ್ಯವಿರುತ್ತದೆ. ಬೇಕಾದಲ್ಲಿ ನೀವೇ ಒಮ್ಮೆ ಪರಿಕ್ಷಿಸಿಕೊಳ್ಳಿ, ಸ್ನಾನ ಮಾಡದೇ, ಕೊಳಕಾದ ಬಟ್ಟೆಯಲ್ಲಿ ನೀವಿದ್ದರೆ, ಆ ದಿನವೆಲ್ಲ ನೀವು ಮಂಕಾಗಿರುತ್ತೀರಿ. ಆದ್ರೆ ತಿಂಡಿಗೂ ಮುನ್ನ ಸ್ನಾನ ಮಾಡಿ, ಒಳ್ಳೆ ಬಟ್ಟೆ ಧರಿಸಿ, ದಿನ ಶುರು ಮಾಡಿದ್ರೆ, ನಿಮ್ಮ ದಿನ ಎಷ್ಟು ಚೆನ್ನಾಗಿರತ್ತೆ ಅಂತಾ ನೀವೇ ನೋಡುತ್ತೀರಿ. ಶಾಲೆ, ಕಾಲೇಜು, ಆಫೀಸಿಗೆ ಹೋಗುವವರು ಈ ಕಾರಣಕ್ಕಾಗಿಯೇ ಅಷ್ಟು ಎನರ್ಜಿಯಿಂದ ಕೂಡಿರುತ್ತಾರೆ.

ಐದನೇಯ ಅಭ್ಯಾಸ, ಕುಳಿತಲ್ಲೇ ಕುಳಿತುಕೊಳ್ಳದೇ, ಕೊಂಚ ವ್ಯಾಯಾಮ, ಧ್ಯಾನ, ಮನೆಗೆಲಸ ಮಾಡುವುದು. ನೀವು ಬೆಳಿಗ್ಗೆ ಎದ್ದ ತಕ್ಷಣ, ನೀರು ಕುಡಿದು, ಸ್ವಲ್ಪ ಧ್ಯಾನ ಅಥವಾ ವ್ಯಾಯಾಮ ಮಾಡಿ. ನಂತರ ಮನೆಗೆಲಸ ಮಾಡಿ. ಇದಾದ ಬಳಿಕ ಸ್ನಾನ ಮಾಡಿ, ತಿಂಡಿ ತಿಂದು, ಬೇಕಾದ್ರೆ 10 ರಿಂದ 15 ನಿಮಿಷ ರೆಸ್ಟ್ ಮಾಡಿ. ನಂತರ ನಿಮ್ಮ ಪ್ಲಾನ್ ಪ್ರಕಾರ, ನಿಮ್ಮ ದಿನವನ್ನು ಶುರು ಮಾಡಿ. ಇವಿಷ್ಟನ್ನ ನೀವು ಫಾಲೋ ಮಾಡಿದ್ರೆ, ನಿಮ್ಮ ಜೀವನ ಒಳ್ಳೆ ರೀತಿಯಲ್ಲಿ ಬದಲಾಗುತ್ತದೆ.

‘ಗುರುವಾರ ಅಥವಾ ಶುಕ್ರವಾರ ಹಾಸನದ ಟಿಕೆಟ್ ಫೈನಲ್’.

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

- Advertisement -

Latest Posts

Don't Miss