Sunday, June 22, 2025

Latest Posts

ಸೌತೇಕೌಯಿ ಸೇವನೆ ಬಗ್ಗೆ ನಿಮಗಿರಲಿ ಈ ಎಚ್ಚರಿಕೆಯ ಮಾಹಿತಿ..

- Advertisement -

ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ ಸಮಯದಲ್ಲಿ ಸೌತೇಕಾಯಿ ತಿನ್ನಬೇಕು. ಯಾರು ಸೌತೇಕಾಯಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..

ಸೌತೇಕಾಯಿ ಸೇವನೆಯನ್ನು ಸಂಜೆ ಬಳಿಕ ಮಾಡಬೇಡಿ. ಸಂಜೆ ಬಳಿಕ ಯಾವುದೇ ತಂಪು ಹಣ್ಣು, ತರಕಾರಿ, ಮೊಸರನ್ನು ಸೇವಿಸಬಾರದು. ಇವೆಲ್ಲವೂ ನಮ್ಮ ದೇಹದಲ್ಲಿ ವಿಷದಂತೆ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಸೌತೇಕಾಯಿಯನ್ನು ಸಂಜೆ ಬಳಿಕ ತಿನ್ನಬೇಡಿ. ಇನ್ನು ಕಫದ ಸಮಸ್ಯೆ, ಪದೇ ಪದೇ ಶೀತವಾಗುವ ಸಮಸ್ಯೆ ಇದ್ದವರು, ಸೌತೇಕಾಯಿ ತಿಂದರೆ ಅಲರ್ಜಿ ಎನ್ನುವವರು ಸೌತೇಕಾಯಿ ಸೇವನೆ ಮಾಡದಿದ್ದರೆ ಉತ್ತಮ.

ಹಾಗಾದ್ರೆ ಯಾವಾಗ ಸೌತೇಕಾಯಿ ತಿನ್ನಬೇಕು ಅಂದ್ರೆ, ತಿಂಡಿ ತಿಂದ ಬಳಿಕ ಮತ್ತು ಮಧ್ಯಾಹ್ನ ಊಟದವರೆಗೂ ನೀವು ಸೌತೇಕಾಯಿಯನ್ನು ತಿನ್ನಬಹುದು. ಈ ಸಮಯದಲ್ಲಿ ನೀವು ಸೌತೇಕಾಯಿ ತಿನ್ನುವುದರಿಂದ ನಿಮ್ಮ ಆರೋಗ್ಯದೊಂದಿಗೆ, ಸೌಂದರ್ಯ ವೃದ್ಧಿಯಾಗುತ್ತದೆ. ಪ್ರತಿದಿನ ನೀವು ಲಿಮಿಟಿನಲ್ಲಿ ಸೌತೇಕಾಯಿ ಸೇವನೆ ಮಾಡಿದರೆ, ನಿಮ್ಮ ದೇಹದ ಬಣ್ಣ ತಿಳಿಯಾಗುತ್ತದೆ. ನಿಮ್ಮ ದೇಹದ ತೂಕ ಇಳಿಯುತ್ತದೆ. ನಿಮ್ಮ ಕೂದಲ ಆರೋಗ್ಯ ಉತ್ತಮವಾಗಿರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.

ಎಣ್ಣೆಸ್ನಾನ ಮುಖ್ಯ ಅಂತಾ ಹೇಳೋದ್ಯಾಕೆ ಗೊತ್ತಾ..?

ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ

ಯೂರಿನ್ ಇನ್ಫೆಕ್ಷನ್ಗೆ ಮನೆಯಲ್ಲೇ ಮಾಡಿ ಮದ್ದು..

- Advertisement -

Latest Posts

Don't Miss