Health Tips: ತಾಯಿಯಾಗುವುದು ಎಂದರೆ ಪ್ರತೀ ಹೆಣ್ಣು ಮಕ್ಕಳಿಗೂ ಸಂತಸದ ವಿಷಯ. ಏಕೆಂದರೆ, ಇದೇ ಆಕೆಯ ಹೆಣ್ತನವನ್ನು ಪೂರ್ಣಗೊಳಿಸುತ್ತದೆ. ಆದರೆ ಸಂತಾನ ಸಮಸ್ಯೆ ಇದ್ದರೆ, ಅದರ ಬಗ್ಗೆಯೇ ಕೊರಗಿರುತ್ತದೆ. ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಗರ್ಭಿಣಿಯಾಗಬೇಕಾದರೆ, ಯಾವ ಸಮಸ್ಯೆ ಇರಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಪ್ರತೀ ತಿಂಗಳು ಸರಿಯಾದ ಸಮಯಕ್ಕೆ, ಅಥವಾ ಎರಡ್ಮೂರು ದಿನ ಮುಂಚಿತವಾಗಿಯಾದರೂ ನೀವು ಮುಟ್ಟಾಗಬೇಕು. ನಿಮಗೆ ಬ್ಲೀಡಿಂಗ್ ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಮಸ್ಯೆ ಇರಬಾರದು. ಬ್ಲೀಡಿಂಗ್ ನಾರ್ಮಲ್ ಆಗಿರಬೇಕು. ಆದರೆ ನೀವು ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದೀರಿ. ಆಗಲೂ ನಿಮಗೆ ಸರಿಯಾಗಿ ಬ್ಲೀಡಿಂಗ್ ಆಗುತ್ತಿಲ್ಲವೆಂದಲ್ಲಿ, ನೀವು ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲೇಬೇಕು. ಇಲ್ಲವಾದಲ್ಲಿ, ಮುಂದೆ ನಿಮಗೆ ಬಂಜೆತನ ಕಾಡುತ್ತದೆ.
ಎರಡನೇಯದಾಗಿ 25ರಿಂದ 28 ವರ್ಷದೊಳಗೆ ವಿವಾಹವಾಗಿ, 30 ವರ್ಷ ತುಂಬುವುದರೊಳಗೆ ತಾಯಿಯಾಗುವ ಬಗ್ಗೆ ಯೋಚಿಸಬೇಕು. ಏಕೆಂದರೆ, ಹಲವರಿಗೆ 30 ವರ್ಷ ಕಳೆದ ಬಳಿಕ ಮಕ್ಕಳಾಗುವುದಿಲ್ಲ. ವಯಸ್ಸಾಗುತ್ತಿದ್ದಂತೆ, ಅಂಡೋತ್ಪತ್ತಿ ಕಡಿಮೆಯಾಗುತ್ತದೆ. ಹಾಗಾಗಿ 30 ವರ್ಷದೊಳಗೆ ತಾಯಿಯಾದರೆ ಉತ್ತಮ.
ಮೂರನೇಯದಾಗಿ ಹಲವು ವರ್ಷಗಳಿಂದ ಯಾವುದಾದರೂ ಖಾಯಿಲೆಯಿಂದ ಬಳಲುತ್ತಿದ್ದರೆ, ಅಂಥವರಿಗೂ ಸಂತಾನ ಸಮಸ್ಯೆಯಾಗಬಹುದು. ಹಾಗಾಗಿ ಆ ಖಾಯಿಲೆಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಇನ್ನು ಗರ್ಭಿಣಿಯಾಗಿ, ಅಬಾರ್ಷನ್ ಆದರೆ, ಎರಡನೇಯ ಬಾರಿ ತಾಯಿಯಾಗುವ ಮೊದಲು, ಈ ಬಗ್ಗೆ ವೈದ್ಯರ ಬಳಿ ವಿಚಾರಿಸುವುದು ಉತ್ತಮ.