ಇಂದಿನ ಕಾಲದಲ್ಲಿ ಎಲ್ಲ ರೋಗಕ್ಕಿಂತ ಅಪಾಯಕಾರಿ ಮತ್ತು ತುಂಬಾ ಹಬ್ಬುತ್ತಿರುವ ರೋಗ ಅಂದರೆ, ಬೊಜ್ಜು ಎಂಬ ರೋಗ. ಹೌದು ಬೊಜ್ಜು ನೋಡೋಕ್ಕೆ ನಾರ್ಮಲ್ ಆಗಿ ಕಂಡರೂ, ಇದರಿಂದಲೇ ತರಹೇವಾರಿ ರೋಗಗಳು ಬರೋದು. ಜಂಕ್ ಫುಡ್ ಸೇವನೆಯಿಂದ ಸ್ಲೋ ಆಗಿ ಬೊಜ್ಜು ಬೆಳೆಯೋದು ನಮಗೆ ಗೊತ್ತಾಗೋದೇ ಇಲ್ಲ. ಅದು ತರುವ ತರಹೇವಾರಿ ರೋಗ ಬಂದಾಗಲೇ, ಬೋಜ್ಜು ಎಷ್ಟು ಕೆಟ್ಟದ್ದು ಅಂತಾ ನಮ್ಮ ಗಮನಕ್ಕೆ ಬರೋದು. ಹಾಗಾಗಿ ನಾವಿಂದು ಬೊಜ್ಜು ಕರಗಿಸುವುದು ಹೇಗೆ ಅಂತಾ ಹೇಳಲಿದ್ದೇವೆ.
ನಿಮ್ಮ ದೇಹದ ಬೊಜ್ಜು ಇಳಿಸಬೇಕಂದ್ರೆ ನೀವು ಮೆಟ್ಟಿಲನ್ನ ಹತ್ತು ಇಳಿದು ಮಾಡಬೇಕು. ಕೆಲ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ವಾಕಿಂಗ್ ಮತ್ತು ಜಾಗಿಂಗ್ ಮಾಡುವುದಕ್ಕಿಂತಲೂ ಹೆಚ್ಚು, ಮೆಟ್ಟಿಲು ಇಳಿದರೆ ಮತ್ತು ಹತ್ತಿದರೆ ಒಳ್ಳೆಯದು ಅಂತ. ಹಾಗಾಗಿ ಮೆಟ್ಟಿಲು ಹತ್ತೋದು ಇಳಿಯೋದನ್ನ ಅಭ್ಯಾಸ ಮಾಡಿ. ಮೊದಲ ಬಾರಿಗೆ ಒಂದೆರಡು ಸಲ, ಉದಾಸೀನವಾಗಬಹುದು. ಆದರೆ ಪ್ರಾಕ್ಟೀಸ್ ಆದ ಮೇಲೆ, ಮೆಟ್ಟಿಲೆ ಉತ್ತಮ ಅನ್ನಿಸಲ್ಪಡುತ್ತದೆ.
ಮೆಟ್ಟಿಲು ಅಂತಲ್ಲ. ನೀವು ಎತ್ತರವಿರುವ ಜಾಗವನ್ನ ಹತ್ತಿ , ಇಳಿದರೂ ಉತ್ತಮ. ಮೂರನೇ ಫ್ಲೋರ್‌ನಲ್ಲಿರುವ ಮನೆಗೆ ಹೋಗಬೇಕೆಂದಲ್ಲಿ, ಲಿಫ್ಟ್ ಬದಲು ಮೆಟ್ಟಿಲು ಬಳಸಿ. ಮೆಟ್ರೋದಲ್ಲಿ ಚಲಿಸಲು ಹೊರಟರೆ, ಅಲ್ಲಿಯೂ ಲಿಫ್ಟ್ ಬದಲು, ಮೆಟ್ಟಿಲು ಬಳಸಿ. ಒಟ್ಟಾರೆಯಾಗಿ ನಿಮಗೆ ಯಾವಾಗ್ಯಾವಾಗ ಮೆಟ್ಟಿಲು ಹತ್ತಿ ಹೋಗುವ ಅವಕಾಶ ಸಿಗುತ್ತದೆಯೋ, ಅವಾಗೆಲ್ಲ ಮೆಟ್ಟಿಲನ್ನೇ ಬಳಸಿ.
ನೀವು ಪಟ ಪಟ ಅಂತ ಮೆಟ್ಟಿಲನ್ನ ಹತ್ತಿ ಹೋಗಬೇಕೆಂದಿಲ್ಲ. ಮೆಲ್ಲಗೆ ಹೋದರೂ ನಡೆಯುತ್ತೆ. ಮೆಟ್ರೋ, ಮಾಲ್, ಅಪಾರ್ಟ್‌ಮೆಂಟ್ ಎಲ್ಲ ಕಡೆಯೂ ನಿಮಗೆ ಮೆಟ್ಟಿಲು ಉಪಯೋಗಿಸುವ ಅವಕಾಶ ಸಿಗುತ್ತದೆ. ಇನ್ನು ನೀವು ವಯಸ್ಸಿನಲ್ಲಿ ಸಣ್ಣವರಾಗಿದ್ದು, ಈಗಿನಿಂದಲೇ ಲಿಫ್ಟ್ ಬದಲು ಮೆಟ್ಟಿಲು ಬಳಸಲು ಶುರು ಮಾಡಿದ್ರೆ, ವಯಸ್ಸಾದ ಬಳಿಕ, ನಿಮಗೆ ಕೈ ಕಾಲು ನೋವು ಬರೋದಿಲ್ಲ. ಆಗ ನೀವು ಸ್ಟ್ರಾಂಗ್ ಆಗಿ ಇರುತ್ತೀರಿ.