ಕೆಲವರಿಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತದೆ. ಏಕೆಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರಬಹುದು. ಅಥವಾ, ಅವರ ಮನಸ್ಸಿನಲ್ಲಿ ಭಯದ ವಾತಾವರಣವೂ ಇರಬಹುದು. ಹೀಗೆ ಇತ್ಯಾದಿ ಕಾರಣಗಳಿಂದ, ಕೆಟ್ಟ ಕನಸು ಬೀಳುತ್ತದೆ. ಹಾಗಾಗಿ ನಾವಿಂದು, ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ಮಲಗುವ ಮುನ್ನ ಕೈ ಕಾಲು ಮುಖ ತೊಳೆದು ಮಲಗಿ. ಅದರಲ್ಲೂ ಕಾಲನ್ನು ಸ್ವಚ್ಛವಾಗಿ ತೊಳೆದು ಮಲಗಬೇಕು. ಇದರಿಂದ ನಕಾರಾತ್ಮಕ ಶಕ್ತಿ ದೂರವಿರುತ್ತದೆ ಅನ್ನೋ ನಂಬಿಕೆ ಇದೆ. ಇದರ ಜೊತೆ, ಮುಖವನ್ನೂ ಕ್ಲೀನ್ ಆಗಿ ತೊಳೆದು ಮಲಗಿ. ಇದು ಆರೋಗ್ಯ, ಸೌಂದರ್ಯಕ್ಕೂ ಉತ್ತಮ. ನಕಾರಾತ್ಮಕ ಶಕ್ತಿ ದೂರವಿರಿಸಲು ಕೂಡ ಉತ್ತಮ. ಪಾದ ತೊಳೆಯದೇ ಮಲಗುವುದರಿಂದ, ನಕಾರಾತ್ಮಕ ಶಕ್ತಿ ನಿಮ್ಮನ್ನ ಸೆಳೆಯುತ್ತದೆ. ಆಗಲೇ ಕೆಟ್ಟ ಕನಸು ಬೀಳುತ್ತದೆ. ಅಲ್ಲದೇ, ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಾಗುವುದಿಲ್ಲ.
ಎರಡನೇಯ ಕೆಲಸ ಹಾಸಿಗೆ ಕ್ಲೀನ್ ಆಗಿರಲಿ. ನೀವು ಮಲಗುವ ಹಾಸಿಗೆಯನ್ನು ವಾರಕ್ಕೊಮ್ಮೆಯಾದರೂ ತೊಳೆಯಿರಿ. ಮಲಗುವಾಗ, ಹಾಸಿಗೆಯನ್ನು ಕ್ಲೀನ್ ಮಾಡಿ, ಮಲಗಿ. ಹಾಸಿಗೆಯ ಮೇಲೆ ಕುಳಿತು, ಊಟ, ತಿಂಡಿ ಮಾಡಬೇಡಿ. ಹಾಸಿಗೆಯ ಮೇಲೆ ಒದ್ದೆ ಬಟ್ಟೆ ಇಡಬೇಡಿ. ತಲೆ ಬಾಚಿಕೊಳ್ಳಬೇಡಿ. ಇವೆಲ್ಲವೂ ದರಿದ್ರತೆಯ ಸಂಕೇತ. ಹಾಗಾಗಿ ಹಾಸಿಗೆಯು ಸದಾ ಕ್ಲೀನ್ ಆಗಿರುವಂತೆ ನೋಡಿಕೊಳ್ಳಿ.
ಮೂರನೇಯ ಕೆಲಸ ಮಲಗುವಾಗ ನೀರು ಕುಡಿದು ಮಲಗಿ. ಇದು ಒಂದು ನಂಬಿಕೆ. ಮಲಗುವಾಗ, ನೀರು ಕುಡಿದು ಮಲಗಿದರೆ, ಕೆಟ್ಟ ಕನಸು ಬೀಳುವುದಿಲ್ಲ ಎಂದು ನಂಬಲಾಗಿದೆ. ಅಲ್ಲದೇ, ಎದೆಯ ಮೇಲೆ ಕೈ ಇಟ್ಟು ಮಲಗಿದರೂ, ಕೆಟ್ಟ ಕನಸು ಬೀಳುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಎದೆಯ ಮೇಲೆ ಕೈ ಇಟ್ಟು ಮಲಗಬೇಡಿ.
ನಾಲ್ಕನೇಯ ಕೆಲಸ ಕೋಣೆಯಲ್ಲಿ ಕರ್ಪೂರವನ್ನು ಹೊತ್ತಿಸಿ. ಆದರೆ, ಅದರಿಂದ ನಿಮ್ಮ ಕೋಣೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ. ಕರ್ಪೂರ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ.