Friday, April 25, 2025

Latest Posts

ಮೋದಿ ನಿರ್ಧಾರಕ್ಕೆ ದಂಗಾದ ಟ್ರಂಪ್‌ : ನಮ್ಮಲ್ಲೂ ಇದು ಬೇಕಿತ್ತು ಎಂದ ಅಮೆರಿಕ ಅಧ್ಯಕ್ಷ

- Advertisement -

International Political News: ಭಾರತದಲ್ಲಿರುವ ಸುಧಾರಣಾ ಚುನಾವಣಾ ವ್ಯವಸ್ಥೆಯ ಜೊತೆಗೆ ಮತದಾರರ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡುವ ವಿಚಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರಿಂದ ಪ್ರೇರಿತರಾದ ಅವರು ಅಮೆರಿಕದಲ್ಲೂ ಚುನಾವಣಾ ಪದ್ದತಿಯಲ್ಲಿ ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ನೂತನ ಆದೇಶಕ್ಕೆ ಸಹಿ ಹಾಕಿದ್ದಾರೆ.

ಸುಧಾರಿತ ಕ್ರಮ ಅಳವಡಿಸಿಕೊಳ್ಳಬೇಕು..

ಇನ್ನೂ ಭಾರತದಲ್ಲಿರುವ ಹಾಗೂ ಬ್ರೆಜಿಲ್‌ ರಾಷ್ಟ್ರಗಳಲ್ಲಿರುವಂತೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಅಂದರೆ ಬಯೋಮೆಟ್ರಿಕ್‌ ಗುರುತನ್ನು ಜೋಡಣೆ ಮಾಡುವ ವ್ಯವಸ್ಥೆಯು ನಮ್ಮ ದೇಶದಲ್ಲಿ ಅನುಷ್ಠಾನವಾಗಬೇಕಿದೆ. ಈಗಾಗಲೇ ಜಗತ್ತಿನ ವಿವಿಧ ಮುಂದುವರೆದ ಹಾಗೂ ಅಭಿವೃದ್ದಿ ಹೊಂದಿರುವ ದೇಶಗಳಲ್ಲಿರುವ ಈ ಪದ್ದತಿಯನ್ನು ನಾವಿನ್ನೂ ಅಳವಡಿಸಿಕೊಂಡಿಲ್ಲ, ಆ ಕಾರ್ಯವನ್ನು ಜಾರಿಗೆ ತರುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ಜಗತ್ತಿನ ಇನ್ನುಳಿದ ಹಲವು ದೇಶಗಳು ಸುಧಾರಿತ ಚುನಾವಣಾ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.

ನಾವಿನ್ನೂ ಬ್ಯಾಲೆಟ್‌ ಬಾಕ್ಸ್‌ನಲ್ಲಿದ್ದೇವೆ..

ಇನ್ನೂ ಕೆಲವು ದೇಶಗಳು ಆಧುನಿಕ ಚುನಾವಣಾ ವ್ಯವಸ್ಥೆಯ ಮೊರೆ ಹೋಗಿದ್ದರೆ, ಅಮೆರಿಕ ಮಾತ್ರ ಇದುವರೆಗೂ ಪೌರತ್ವ ಧೃಡೀಕರಣವನ್ನೇ ನೆಚ್ಚಿಕೊಂಡಿದೆ. ಭಾರತದಲ್ಲಿ ಇವಿಎಂ ಮೂಲಕ ಮತ ಚಲಾವಣೆಯಾಗುತ್ತಿದೆ. ಅಮೆರಿಕ ಇನ್ನೂ ಬ್ಯಾಲೆಟ್‌ ಬಾಕ್ಸ್‌ ಅವಲಂಬಿಸಿದೆ ಎನ್ನುವ ಮೂಲಕ ತಮ್ಮ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಟ್ರಂಪ್ ಹೆಜ್ಜೆ ಇಟ್ಟಿದ್ದಾರೆ. ಸ್ವೀಡನ್‌, ಡೆನ್ಮಾರ್ಕ್‌ ದೇಶಗಳಲ್ಲಿ ನಿಗದಿತ ದಿನದ ಬಳಿಕ ಬರುವ ಮತಗಳನ್ನು ಗಣನೆಗೆ ಪಡೆಯುವುದಿಲ್ಲ. ಆದರೆ ಅಮೆರಿಕದಲ್ಲಿ ಎಲ್ಲ ರೀತಿಯ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ ಎಂದು ತಮ್ಮ ದೇಶದಲ್ಲಿನ ಪದ್ದತಿಯನ್ನು ಟೀಕಿಸಿದ್ದಾರೆ. ದೇಶದಲ್ಲಿ ಮುಕ್ತ, ಪಾರದರ್ಶಕ ಹಾಗೂ ಪ್ರಾಮಾಣಿಕತೆಯಿಂದ ಕೂಡಿರುವ ಸ್ವಚ್ಚ ಚುನಾವಣಾ ವ್ಯವಸ್ಥೆಯ ಅಗತ್ಯವಿದೆ. ಮುಖ್ಯವಾಗಿ ಇದರಲ್ಲಿನ ಲೋಪ ಹಾಗೂ ವಂಚನೆಗಳು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿವೆ. ಇವುಗಳನ್ನು ಹೊಡೆದೊಡಿಸಬೇಕಿದೆ. ಅಲ್ಲದೆ ಆಯಾಯ ಪ್ರಾಂತೀಯ ಆಡಳಿತದ ಸರ್ಕಾರಗಳು ಚುನಾವಣಾ ವ್ಯವಸ್ಥೆಯ ಉಳಿವಿಗೂ ಮುಂದಾಗಬೇಕು ಎಂದು ಟ್ರಂಪ್‌ ಪ್ರತಿಪಾದಿಸಿದ್ದಾರೆ.

- Advertisement -

Latest Posts

Don't Miss